ಕನ್ನಡ ನಿರ್ಮಾಪಕನ ಬಂಧನ..!!!

ಇತ್ತೀಚಿಗೆ ರಣಂ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮಗು ಇಬ್ಬರು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ರಣಂ’ ಸಿನಿಮಾದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಣಂ ಸಿನಿಮಾ ಶೂಟ್ ಮಾಡುವಾಗ ಈ ಅವಘಡ ಸಂಭವಿಸಿತ್ತು. ಈ ಸಂಬಂಧ ಸ್ಟಂಟ್ ಮಾಸ್ಟರ್ ಅನ್ನು ಪೊಲೀಸರು ಬಂಧಿಸಿದ್ದರು.
ಆಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ತಲೆಮರೆಸಿಕೊಂಡಿದ್ದರು. ಇಂದು ಬಾಗಲೂರು ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿದ್ದಾರೆ.ನಟ ಚಿರಮಜೀವಿ ಸರ್ಜಾ ಅಭಿನಯದ ರಣಂ ಸಿನಿಮಾ ನಗರದ ಬಾಗಲೂರು ಬಳಿ ನಡೆಯುತ್ತಿತ್ತು. ಶೂಟಿಂಗ್ ನೋಡಲು ಬಂದಿದ್ದ 5 ವರ್ಷದ ಆಯಿಷಾ ಖಾನ್ ಮತ್ತು ತಾಯಿ ಸುಯೇರಾ ಬಾನು ಮೃತಪಟ್ಟಿದ್ದರು. ನಗರದ ಬಾಗಲೂರು ಬಳಿ ಚಿತ್ರದ ಚಿತ್ರೀಕರಣ ನಡೆಯತುತ್ತಿತ್ತು. ಆಗ ರಣಂ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭಾಗವಾಗಿ ಕಾರನ್ನು ಬ್ಲಾಸ್ಟ್ ಮಾಡುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
Comments