ಡಿವೋರ್ಸ್ ಸುದ್ದಿಯ ನಡುವೆಯೂ ಪತಿ ಕೊಟ್ಟ ಗಿಫ್ಟ್ ನಿಂದ ಪಿಗ್ಗಿ ದಿಲ್'ಖುಷ್......
ಬಾಲಿವುಡ್ ನ ಹಾಟೆಸ್ಟ್ ಕಪಲ್ ಪಿಗ್ಗಿ ಮತ್ತು ನಿಕ್ ಡಿವೋರ್ಸ್ ಆಗುತ್ತಿದ್ದಾರೆಂಬ ಸುದ್ದಿ ಬಿ ಟೌನ್ ಮಂದಿಗೆ ನಂಬಲರ್ಹ ವಿಚಾರವಾಗಿತ್ತು. ಆದರೆ ಯಾವಾಗ, ಯಾರು ಏನು ತೀರ್ಮಾನ ತೆಗೆದುಕೊಳ್ತಾರೆ ಅಂತಾ ಗೊತ್ತಿಲ್ಲ. ಹಾಗಾಗಿ ಪಿಗ್ಗಿ ಮತ್ತು ನಿಕ್ ಮದುವೆಯಾಗಿ ತಿಂಗಳಾರು ಕಳೆದಿಲ್ಲ, ಅದಾಗಲೇ ಡಿವೋರ್ಸ್ ಆಗುತ್ತಿದ್ದಾರೆಂಬ ಸುದ್ದಿ ಸುಂಟರಗಾಳಿಯಂತೇ ಹಬ್ಬಿ ಹೋಯ್ತು. ಸದ್ಯ ನಾವೇನು ಬೇರೆ ಬೇರೆ ಯಾಗುತ್ತಿಲ್ಲ ಎಂದು ನೇರವಾಗಿ ಇಬ್ಬರು ಹೇಳದಿದ್ದರೂ ಪಿಗ್ಗಿಯ ಕೆಲ ಪೋಸ್ಟ್ಗಳು ಮಾತ್ರ ನಿಕ್ ಮೇಲಿನ ಪ್ರೀತಿಯನ್ನು ತೋರಿಸುತ್ತಿವೆ.
ಅಂದಹಾಗೇ ಪ್ರಿಯಾಂಕ ಚೋಪ್ರಾ ತುಂಬಾ ಅದೃಷ್ಟವಂತೆ. ಆಕೆಗೆ ಯಾರು ಉಡುಗೊರೆ ಕೊಟ್ರೂ ಅದು ದುಬಾರಿ ಮೊತ್ತದ್ದು ಆಗಿರುತ್ತದೆ. ಹಾಗಿಂದಾಗ್ಗೆ ಪಿಗ್ಗಿ ದುಬಾರಿ ಗಿಫ್ಟ್'ಗಳ ಸುರಿಮಳೆಯೇ ಸುರಿಯುತ್ತಿರುತ್ತವೆ. ಸದ್ಯ ನಿಕ್ ಜೋನಸ್, ಪತ್ನಿಗೆ ಪಿಗ್ಗಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಅದು ಎಷ್ಟು ದುಬಾರಿ, ಯಾವ ಉಡುಗೊರೆ ಎಂದು ಕೇಳಿದ್ರೆ ಅಚ್ಚರಿಯಾಗ್ತೀರಾ..?ಪ್ರಿಯಾಂಕಾ ಪತಿ ನಿಕ್ ಜೋನಸ್ ಪ್ರೀತಿಯ ಪತ್ನಿಗೆ ಉಡುಗೊರೆ ನೀಡಿದ್ದಾರೆ. ಹೈ ಹೀಲ್ಡ್ ಶೂವನ್ನು ಪ್ರಿಯಾಂಕಾಗೆ ನಿಕ್ ನೀಡಿದ್ದಾರೆ.ಹೈ ಹೀಲ್ಡ್ ಶೂ ಧರಿಸಿರುವ ಫೋಟೋವನ್ನು ಪ್ರಿಯಾಂಕಾ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಜೊತೆಗೆ ಒಂದು ಹೃದಯದ ಚಿತ್ರ ಮತ್ತು ನಿಕ್ ಜೋನಸ್ ಹೆಸರು ಹಾಕಿದ್ದಾಳೆ. ಹಾಗಾಗಿ ಇದು ನಿಕ್ ನೀಡಿರೋದು ಎಂಬುದು ಸಾಬೀತಾಗ್ತಿದೆ. ನಿಕ್ ಆಗಾಗ ಪ್ರಿಯಾಂಕಾಗೆ ಉಡುಗೊರೆ ನೀಡ್ತಿರುತ್ತಾರೆ. ಅಂದಹಾಗೇ ಈ ಪೋಸ್ಟ್ ನೋಡಿದ ಪಿಗ್ಗಿ ಅಭಿಮಾನಿಗಳು ಇಬ್ಬರ ನಡುವಿನ ದಂಪತ್ಯ ಬಿರುಕು ಬಿಟ್ಟಿಲ್ಲ, ಎಲ್ಲವೂ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಪಿಗ್ಗಿ ಪತಿ ನಿಕ್ ಮೇಲೆ ಅಭಿಮಾನಿಯೊಬ್ಬಳು ಒಳ ಉಡುಪು ಎಸೆದಿದ್ದಳು. ಅದನ್ನು ತನ್ನ ಹೆಗಲ ಮೆಲೆ ನಗುತ್ತಾ ಎತ್ತಿಕೊಂಡು ಹೋದ ಪಿಗ್ಗಿ ವಿಡಿಯೋ ವೈರಲ್ ಆಗಿತ್ತು. ಭಾರತಿಯರ ಕೋಪಕ್ಕೂ ಗುರಿಯಾಗಿದ್ದಳು ದೇಶಿ ಗರ್ಲ್. ಆದರಂತೆ ವಿಚ್ಚೇದನದ ಬಗ್ಗ ಈಗಲೂ ಗೊಂದಲವಿದೆ.ಆದರೆ ನೇರವಾಗಿ ಹೇಳದೇ ಇದ್ರೂ ಪರೋಕ್ಷವಾಗಿ ಅವರಿಬ್ಬರ ಸಂಬಂಧ ಚೆನ್ನಾಗಿದೆ ಎಂಬುದು ಮಾತ್ರ ಗೊತ್ತಾಗುತ್ತಿದೆ.
Comments