ರಶ್ಮಿಕಾ ಜನ್ಮ ದಿನವೇ ವಿಜಯ್ ದೇವರಕೊಂಡಾ ಕೊಟ್ರು ಶಾಕ್ : ಮತ್ತೆ ಶುರುವಾಯ್ತಾ….?!!!

ಕೊಡಗಿನ ಬೆಡಗಿ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಜನ್ಮ ದಿನದ ಸಂಭ್ರಮ. ಎಷ್ಟು ಬೇಗ ಖ್ಯಾತಿಗಳಿಸಿದರೋ ಅಷ್ಟೇ ಬೇಗ ರಶ್ಮಿಕಾ ಅಭಿಮಾನಿಗಳ ಆಕ್ರೋಶಕ್ಕೂ ಕಾರಣರಾಗಿದ್ದರು. ವೈಯಕ್ತಿಕ ವಿಚಾರಗಳಿಗೆ ಸ್ವಲ್ಪ ಬೇಸರದಲ್ಲಿದ್ದ ರಶ್ಮಿಕಾ, ಅದರಿಂದ ಸಾಕಷ್ಟು ಹೊರ ಬಂದಿದ್ದಾರೆ. ಅವರ ಸಿನಿಮಾಗಳು ಒಂದಾದ ಮೇಲೆ ಒಂದು ಹಿಟ್ ಆಗುತ್ತಲೇ ಇವೆ. ನಟ ವಿಜಯ್ ದೇವರಕೊಂಡಾ ಜೊತೆ ಲಿಪ್ ಲಾಕ್ ಮಾಡಿದ ವಿಡಿಯೋಗಳು ವೈರಲ್ ಆಗಿದ್ದು ಅದರ ಬಗ್ಗೆ ಸ್ಟ್ರಾಂಗ್ ಆಗಿಯೇ ಸ್ಪಷ್ಟನೆ ಕೊಟ್ಟಿದ್ದರು. ಅದೇನೆ ಇರಲಿ, ಇಂದು ರಶ್ಮಿಕಾಗೆ ಹುಟ್ಟಿದ ದಿನ. ಅಭಿಮಾನಿಗಳಿಂದ ಶುಭಾಷಯಗಳ ಮಹಪೂರವೇ ಹರಿದುಬರುತ್ತಿದೆ. ಈ ನಡುವೆ ವಿಜಯ್ ದೇವರಕೊಂಡಾ ಕೂಡ ಬರ್ತ್ ಡೇ ವಿಶ್ ಮಾಡಿದ್ದಾರೆ. ಜೊತೆಗೂ ಶಾಕ್ ಕೂಡ ಕೊಟ್ಟಿದ್ದಾರೆ.
ಅಭಿಮಾನಿಗಳ ಶುಭಾಷಯಗಳ ನಡುವೆ ಮತ್ತೆ ರಶ್ಮಿಕಾಗೆ ಬೇಜಾರು ಮಾಡಿದ್ದಾರಂತೆ ನಟ ವಿಜಯ್. ಈಗಾಗಲೇ ಅವರ ಜೊತೆ ನಟಿಸಿದ ಹೊಸ ಸಿನಿಮಾ ಡಿಯರ್ ಕಾಮ್ರೇಡ್ ನಲ್ಲಿನ ಲಿಪ್ ಲಾಕ್ ವಿಡಿಯೋ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿತ್ತು. ಈಗ ಅದನ್ನೇ ನೆನಪಿಸಿದ್ದಾರಂತೆ ವಿಜಯ್.ರಶ್ಮಿಕಾಗೆ ಹ್ಯಾಪಿ ಬರ್ತ್ ಡೇ ಹೇಳಿದ ವಿಜಯ್ ಅದೇ ಟೀಸರ್ ನ ಎಡಿಟೆಡ್ ವರ್ಷನ್ ಒಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ವಿಜಯ್ ಬದಲಿಗೆ ಬೇರೊಬ್ಬ ಹುಡುಗ ರಶ್ಮಿಕಾಗೆ ಲಿಪ್ ಲಾಕ್ ಮಾಡುವಂತೆ ತೋರಿಸಿದ್ದಾರೆ. ಇದನ್ನು ನೋಡಿ ರಶ್ಮಿಕಾ ಕ್ಷಣ ಶಾಕ್ ಆದ್ರಂತೆ...ನಂತರ ಪ್ರತಿಕ್ರಿಯಿಸಿದ್ದು, ನೀನು ನನ್ನ ಅಭಿಮಾನಿಗಳಿಗೆ ಹೃದಯಾಘಾತವಾಗುವಂತೆ ಮಾಡಿದೆ ಎಂದು ಲೇವಡಿ ಮಾಡಿದ್ದಾರೆ.ರಶ್ಮಿಕಾ ಆಕ್ಷೇಪ ನೋಡಿ ರಿಪ್ಲೈ ಮಾಡಿರುವ ವಿಜಯ್ ರಶ್ಮಿಕಾರನ್ನು ನಗುತ್ತಾ ಸಮಾಧಾನಿಸಿದ್ದಾರೆ. 'ಡಿಯರ್'ನಲ್ಲಿ, ನಾವು ತಮಾಷೆ ಮಾಡಿದೆವು ಅಷ್ಟೆ. ಅದು ನಟರಾಗಿ, ನಮ್ಮ ಮೇಲೆ ಕೋಪಗೊಳ್ಳಬೇಡಿ. ನೀನು ನಮ್ಮ ಸೆಟ್ ನ ನಗು, ನಿನ್ನ ಅಭಿನಯದಿಂದ ನಮ್ಮ ಕಣ್ಣಲ್ಲಿ ನೀರು ತರಿಸುವೆ. ಒಳ್ಳೆಯ ಕಲಾವಿದೆ. ಹೀಗೆ ಸಾಕಷ್ಟು ಖ್ಯಾತಿ ಹೊಂದು. ಸದಾ ನಗುತ್ತಾ ಇರು. ಇದೇ ತಿಂಗಳು 8 ನೇ ತಾರೀಖಿಗೆ ಒಂದು ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಅದು ಕೇವಲ ನಿನಗೋಸ್ಕರ' ಎಂದು ಬರೆದುಕೊಂಡಿದ್ದಾರೆ.
Comments