'ಅಣ್ಣ-ತಂಗಿ ಪಾತ್ರ ಮಾಡಿ ಕಿಸ್ ಮಾಡೋಕೆ ಹೇಗೆ ಮನಸ್ಸು ಬಂತು' : ಕಲಾವಿದರ ಮೇಲೆ ಅಭಿಮಾನಿಗಳ ಆಕ್ರೋಶ..!!!

ಸಿನಿಮಾದಲ್ಲಿ ಅಥವಾ ಧಾರವಾಹಿಗಳಲ್ಲಿ ಕಲಾವಿದರು ಮಾಡುವ ಪಾತ್ರ ಎಷ್ಟು ಪರಿಣಾಮಕಾರಿಯಾಗುತ್ತದೆ ಎಂದರೆ...ಅಭಿಮಾನಿಗಳು ಕೆಲ ಕಲಾವಿದರನ್ನು ಪಾತ್ರದ ಹೆಸರಿನಂದಲೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಅವರ ಮನವೊಕ್ಕಿ ಬಿಡುತ್ತದೆ. ಇನ್ನು ಅಣ್ಣ-ತಂಗಿ ಕ್ಯಾರೆಕ್ಟರ್ ಮಾಡಿದ್ದಂತಹವರು ಗಂಡ-ಹೆಂಡತಿ ಆಗಿ ತೆರೆ ಮೇಲೆ ಬಂದರೆ ನೋಡಲು ಇಚ್ಛಿಸುವುದಿಲ್ಲ ಅಭಿಮಾನಿಗಳು. ಆದರೆ ಇಲ್ಲೊಂದು ಯುವ ಜೋಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಸಿನಿಮಾ ಅಷ್ಟೇ ಅಲ್ಲಾ, ಕಿರುತೆರೆಯ ಕಲಾವಿದರು ಒಂದಿಲ್ಲೊಂದು ಗಾಸಿಪ್ ಗೆ ಒಳಗಾಗುತ್ತಿದ್ದಾರೆ. ಈ ಬಾರಿ ಇಂತದ್ದೇ ಟ್ರೊಲ್ ಗೆ ಒಳಗಾದವರು ಯಾರು ಅಂತಾ ಕೇಳ್ತೀರಾ… ಏಕ್ತಾ ಕಪೂರ್ ಶೋ ಕಸೋಟಿ ಜಿಂದಗಿ ಕಿ-2ನಲ್ಲಿ ಸಹೋದರ - ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾರ್ಥ ಸಮರ್ಥ್ (ಅನುರಾಗ್) ಹಾಗೂ ಪೂಜಾ ಬ್ಯಾನರ್ಜಿ (ನಿವೇದಿತಾ) ಅವರು ಒಂದು ವೆಬ್ ಸೀರಿಸ್ ನಲ್ಲಿ ಅಭಿನಯಿಸ್ತಾ ಇದ್ದಾರೆ. ಕಹನೇಕೋ ಹಮ್ ಸಫರ್ ಹೇ 2 ನಲ್ಲಿ ಇಬ್ಬರು ನಟಿಸುತ್ತಿದ್ದಾರೆ ಅಂದಹಾಗೇ ಟಿವಿ ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿದ್ದ ಈ ಜೋಡಿ ಈ ವೆಬ್ ಸೀರಿಸ್ ನಲ್ಲಿ ಲಿಪ್-ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.ಏಕ್ತಾ ಕಪೂರ್ ಧಾರಾವಾಹಿಯಲ್ಲಿ ಸಹೋದರ-ಸಹೋದರಿ ಪಾತ್ರ ಮಾಡಿದವರು ಅವ್ರ ವೆಬ್ ಸರಣಿಯಲ್ಲಿ ಪ್ರೇಮಿಗಳಾಗಿ ಲಿಪ್ ಲಾಕ್ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.ಈ ಟ್ರೋಲಿಗರ ಕಮೆಂಟ್ ಗೆ ರಿಯಾಕ್ಟ್ ಮಾಡಿರುವ ಪೂಜಾ ನನಗೆ ಗೊತ್ತಿತ್ತು ಜನರು ಈ ಪ್ರಶ್ನೆ ಎತ್ತುತ್ತಾರಂತೆ. ಇದು ನನ್ನ ಮೊದಲ ಕಿಸ್ಸಿಂಗ್ ದೃಶ್ಯ. ಇದನ್ನು ನೋಡಿ ಅಭಿಮಾನಿಗಳು ಪ್ರಶ್ನೆ ಮಾಡೋದು ಸಹಜ. ಧಾರಾವಾಹಿಯಲ್ಲಿ ಪಾರ್ಥ ನನ್ನ ಸಹೋದರ. ನಿಜ ಜೀವನದಲ್ಲಿ ಅಲ್ಲ. ನಮ್ಮಿಬ್ಬರ ಮಧ್ಯೆ ಒಳ್ಳೆ ಹೊಂದಾಣಿಕೆಯಿದೆ ಎಂದಿದ್ದಾಳೆ.
Comments