ಲೋಕಸಭೆ ಚುನಾವಣೆಯಲ್ಲಿ ನಟ ಮತ್ತು ಗಾಯಕನ ನಡುವೆ ಬಿಗ್ ಫೈಟ್ ..!!!

ಈ ಲೋಕಸಭೆ ಚುನಾವಣೆಯಲ್ಲಿ ಸಿನಿಮಾ ಇಂಡಸ್ಟ್ರಿಯ ಕೆಲ ಕಲಾವಿದರು ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಕೆಲ ಸ್ಟಾರ್ ಗಳು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಬಾಲಿವುಡ್’ನ ಖ್ಯಾತ ಹಾಸ್ಯನಟ ರಾಜ್ಪಾಲ್ ಯಾದವ್ ಇದೀಗ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಂಬಂಧ ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ರನ್ನ ಭೇಟಿಯಾಗಿ ಮಾತು-ಕತೆಯೂ ನಡೆದಿದ್ಯಂತೆ. ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಈ ಸಂಬಂಧ, ಒಂದು ವೇಳೆ ನಟ ಕಾಂಗ್ರೆಸ್ ನಿಂದ ಸ್ಪರ್ಧಿಸುವುದಾದರೇ ಬಿಜೆಪಿ ಮತ್ತಷ್ಟು ಬಲಿಷ್ಟಗೊಳ್ಳಲು ಸಿದ್ಧತೆ ಮಾಡಬೇಕಾಗುತ್ತದೆ ಎಂದು ಕೆಲ ಮೂಲಗಳು ಅಭಿಪ್ರಾಯ ಪಟ್ಟಿವೆ. ವಾಯುವ್ಯ ದೆಹಲಿ ಭಾಗದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟ ಹಾಗೂ ಗಾಯಕ ಮನೋಜ್ ತಿವಾರಿ ವಿರುದ್ಧ ಕಣಕ್ಕಿಳಿಯಲು ರಾಜ್ಪಾಲ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇನ್ನೆರಡು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ ಅಂತಾ ರಾಜ್ಪಾಲ್ ಯಾದವ್ ತಿಳಿಸಿದ್ದಾರೆ. ಕೆಲ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಸ್ಟಾರ್ ಕಲಾವಿದರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದರೇ, ಮತ್ತೆ ಕೆಲವು ಪಕ್ಷಗಳು ಸ್ಪರ್ಧಿಗಳನ್ನಾಗಿ ಕಣಕ್ಕಿಳಿಸುತ್ತಿದ್ದಾರೆ. ಒಟ್ಟಾರೆ ರಾಜಕೀಯ ಮತ್ತು ಸಿನಿಮಾ ಒಂದನೊಂದು ಬೆಸೆದುಕೊಂಡಿರುವುದಂತೂ ನಿಜ.
Comments