ಶೂಟಿಂಗ್ ಸೆಟ್ನಲ್ಲಿ ಖ್ಯಾತ ನಾಯಕ ನಟನಿಗೆ ಗಾಯ : ಚಿತ್ರೀಕರಣ ಮುಂದೂಡಿಕೆ...!!!

ಮಗಧೀರ ಖ್ಯಾತಿಯ ರಾಮ್ ಚರಣ್ ಗೆ ಶೂಟಿಂಗ್’ನಲ್ಲಿ ಭಾಗಿಯಾಗಿದ್ದ ವೇಳೆ ಕಾಲಿಗೆ ಪೆಟ್ಟಾಗಿದೆ. ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ರಾಮ್ ಚರಣ್ ಗೆ ವೈದ್ಯರು ಮೂರು ವಾರಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ತಯಾರಾಗ್ತಿರೋ ಆರ್ ಆರ್ ಆರ್ ಚಿತ್ರದಲ್ಲಿ ರಾಮ್‌ಚರಣ್ ಸೀತಾರಾಮ ಅನ್ನೋ ಪಾತ್ರದಲ್ಲಿ ನಟಿಸ್ತಿದ್ದು ಚಿತ್ರಕ್ಕಾಗಿ ಜಿಮ್‌ನಲ್ಲಿ ಫುಲ್ ವರ್ಕ್ ಔಟ್ ಮಾಡ್ತಿದ್ರು. ಈ ವೇಳೆ ರಾಮ್ ಚರಣ್ ಕಾಲಿಗೆ ಗಾಯವಾಗಿದೆ.ಈ ಹಿನ್ನಲೆಯಲ್ಲಿ ಶೂಟಿಂಗ್ ಅನ್ನು ಮುಂದೂಡಲಾಗಿದೆ.
ಆರ್ ಆರ್ ಆರ್ ಸಿನಿಮಾ ರಾಮ್ ಗೋಪಾಲ್ ವರ್ಮಾ ಅವರ ಬಹು ನಿರೀಕ್ಷಿತ ಚಿತ್ರ. ಟೈಟಲ್ ನಲ್ಲೇ ಭಾರೀ ಸುದ್ದಿಯಾಗಿ ಕ್ರೇಜ್ ಹುಟ್ಟಿಸಿದಂತಹ ಚಿತ್ರ. ಎಷ್ಟರ ಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿತ್ತು ಅಂದ್ರೆ ಆರ್ ಆರ್ ಆರ್ ಕೇಳಿದ್ರೆನೇ ಕ್ಷಣ ಕಣ್ಣಾಯಿಸುವಂತೆ ಮಾಡಿದ್ದ ಚಿತ್ರ ಇದು.300 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ತಯಾರಾಗ್ತಿರೋ ಸಿನಿಮಾದ ತಾರಾಬಳಗ ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೇ ಸಿನಿಮಾ ಟೈಟಲ್ ನಲ್ಲಷ್ಟೇ ಅಲ್ಲ, ಸಿನಿಮಾಗೆ ನಾಯಕಿಯರ ಆಯ್ಕೆಯೂ ಕೂಡ ಭಾರೀ ದೊಡ್ಡ ಮಟ್ಟದಲ್ಲಿಯೇ ನಡೆದಿತ್ತು. ಇದೇ ಮೊದಲ ಬಾರಿಗೆ ಬಾಲಿವುಡ್ ನಿಂದ ರಾಮ್ ಚರಣ್ ಗೆ ಆಲಿಯಾ ಭಟ್ ಜೋಡಿಯಾದ್ರೆ, ಜೂನಿಯರ್ ಎನ್ ಟಿ ಆರ್‌ಗೆ ಬ್ರಿಟಿಷ್ ನಟಿ ಡೈಸಿ ಎಡ್ಗರ್ ಜೋನ್ಸ್ ಜೋಡಿಯಾಗಿದ್ದಾರೆ. ಉಳಿದಂತೆ ಬಾಲಿವುಡ್ ನಟ ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸ್ತಿದ್ದಾರೆ.ಇನ್ನು,ಬಾಹುಬಲಿಯಂಥ ಕಥೆಯಿಂದ ದೃಶ್ಯಕಾವ್ಯ ಕಟ್ಟಿದ ರಾಜಮೌಳಿ ಈ ಚಿತ್ರದ ಕಥೆಗೂ ಅಷ್ಟೇ ಒತ್ತು ಕೊಟ್ಟಿದ್ದಾರೆ. ಈ ಸಿನಿಮಾ ಕಥೆ ವಿಭಿನ್ನವಾಗಿ ಕೂಡಿದ್ದು ಬುಡಕಟ್ಟು ವಾಸಿಗಳಲ್ಲಿ ಇಬ್ಬರು ನಾಯಕರುಗಳ ನಡುವೆ ನಡೆಯುವ ಕಾಲ್ಪನಿಕ ಕಥೆಯನ್ನು ಹೊಂದಿದೆ. ಒಟ್ಟಾರೆ ಸಿನಿಮಾ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರೋದಂತೂ ನಿಜ. ಸದ್ಯ ಚಿತ್ರ ಶೂಟಿಂಗ್ ಹಂತದಲ್ಲಿದ್ದು 2020 ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
Comments