ಕೋಟಿ ಕೋಟಿ ಬಂಡವಾಳದ ಸಿನಿಮಾಗೆ ಎಳ್ಳು-ನೀರು ಬಿಟ್ರು…!

ಕೋಟ್ಯಾಂತರ ರೂ. ಗಳನ್ನು ಸುರಿದು ಒಂದು ಸಿನಿಮಾ ಮಾಡೋಕೆ ಹೊರಟ್ರೆ, ಸಾಕಷ್ಟುಎಡರು-ತೊಡರುಗಳು ಉಂಟಾಗೋದು ಸಾಮಾನ್ಯ. ಆದರೆ ಈ ಸಿನಿಮಾ ಅಂತಿಥ ಸಾಮನ್ಯವಲ್ಲ. ಬಿಗ್ ಬಜೆಟ್ ಮೂವಿ. ಬೇರೆ ಭಾಷೆಯ ಚಿತ್ರರಂಗದವರು ಒಂದ್ ಸಲ ಮಾಲಿವುಡ್ ಕಡೆ ತಿರುಗಿ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಜ್ಜಾಗ್ತಿದ್ದ ಸಿನಿಮಾ. ಶುರುವಿನಲ್ಲೇ ಭಾರೀ ಸೌಂಡು ಮಾಡಿದ್ದ ಚಿತ್ರ ಮಲಯಾಳಂನ 'ಮಹಾಭಾರತ'.
ಪೌರಾಣಿಕ ಕಥೆಯಾಧರಿತ ಸಿನಿಮಾವನ್ನು ತೆರೆಗೆ ತರೋ ಮನಸ್ಸು ಮಾಡಿದ್ದವರು ಕನ್ನಡದ ಉದ್ಯಮಿ ಬಿ.ಆರ್ ಶೆಟ್ಟಿ. ಇದು ಅವರ ಕನಸಿನ ಕೂಸು. 1000 ಕೋಟಿ ಬಜೆಟ್ನಲ್ಲಿ ಮಹಭಾರತ ಪೌರಾಣಿಕ ಕಥೆಯನ್ನ ತೆರೆಗೆ ತರೋ ಮನಸ್ಸು ಮಾಡಿದ್ದರು ನಿರ್ಮಾಪಕರು.ಅಂದಹಾಗೇ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ಮೋಹನ್ ಲಾಲ್ ಕಾಣಿಸಿಕೊಳ್ಳೋದು ಕನ್ಫರ್ಮ್ ಆಗಿತ್ತು. ಬಲ ಭೀಮನಾಗಿ ಅಬ್ಬರಿಸೋದು ಪಕ್ಕಾ ಆಗಿತ್ತು. ಬಟ್ ಬಹಳ ಸದ್ದು ಗದ್ದಲ ಮಾಡಿದ ಈ ಸಿನಿಮಾ ಸೆಟ್ಟೇರದೇ ನಿಂತುಹೋಗಿದೆ. ಈ ವಿಚಾರವನ್ನ ಸ್ವತ: ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಬಿ. ಆರ್ ಶೆಟ್ಟಿ 1000 ಕೋಟಿ ಮಹಾಭಾರತ ಸಿನಿಮಾ ಅನೌನ್ಸ್ ಮಾಡಿದಾಗ ಇಡೀ ಭಾರತೀಯ ಚಿತ್ರರಂಗ ಮಾಲಿವುಡ್ ಕಡೆ ತಿರುಗಿ ನೋಡಿದ್ದು ಸುಳ್ಳಲ್ಲ. ಅಷ್ಟಿಷ್ಟಲ್ಲ ಬರೋಬ್ಬರಿ…. 200, 300 ಕೋಟಿ ಬಜೆಟ್ ಅಂದ್ರೆನೇ ಅಬ್ಬಬ್ಬಾ ಅನ್ನೋ ಜಮಾನದಲ್ಲಿ 1000 ಕೋಟಿ ಸಿನಿಮಾ, ಅದು ಕೂಡ ಮಹಭಾರತದ ಕಥೆ ಅಂತ ಎಲ್ಲಾ ಬೆರಗಾಗಿದ್ದರು. ಆದ್ರೆ, ನಿರ್ದೇಶಕರ ಜೊತೆಗಿನ ಭಿನ್ನಾಭಿಪ್ರಾಯದಿಂದ ಸಿನಿಮಾ ನಿಲ್ಲಿಸೋಕೆ ನಿರ್ಧರಿಸಿದ್ದಾಗಿ ನಿರ್ಮಾಪಕರು ಹೇಳಿದ್ದಾರೆ.ಮಹಾಭಾರತ ಸಿನಿಮಾ ನಿಂತಿರೋದು ನಿಜ. ಆದರೆ ನನ್ನ ಕನಸು ನಿಂತಿಲ್ಲ. ಖಂಡಿತಾ ಇದನ್ನೇ ಮಾಡಿಯೇ ತೀರುತ್ತೇನೆ ಎಂದಿದ್ದಾರೆ ನಿರ್ಮಾಪಕರು.
Comments