ಸ್ಟೈಲಿಸ್ಟ್ ಸ್ಟಾರ್ ಪುತ್ರನ ಬರ್ತಡೇ ಗೆ ಸಿಕ್ತು ಬಂಪರ್ ಗಿಫ್ಟ್..!! ಗಿಫ್ಟ್ ನೋಡಿ ಶಾಕ್ ಆದ ಅಲ್ಲು ಅರ್ಜುನ್..!!!

ಟಾಲಿವುಡ್ ನ ದಿ ಮೋಸ್ಟ್ ಹ್ಯಾಂಡ್ಸಮ್ ಹೀರೋಗಳಲ್ಲಿ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಒಬ್ಬರು… ಈ ಹೀರೋಗೆ ಲೇಡಿ ಫ್ಯಾನ್ಸ್ ಜಾಸ್ತಿನೇ ಬಿಡಿ… ಇದೀಗ ಅಲ್ಲು ಅರ್ಜುನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ… ತನ್ನ ಮಗನ ಹುಟ್ಟಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಇದ್ದಾರೆ.. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮೊಮ್ಮಗನ ಬರ್ತಡೇ ಗೆ ಕೊಟ್ಟಿರುವ ಗಿಫ್ಟ್ ನೋಡಿ ಸ್ವತಃ ಅಲ್ಲು ಅರ್ಜುನ್ ಅವರೇ ಶಾಕ್ ಆಗಿದ್ದಾರಂತೆ… ಪ್ರೀತಿಯ ತಾತಾ ಮೊಮ್ಮಗನ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಸ್ವಿಮ್ಮಿಂಗ್ ಪುಲ್ ಅನ್ನು ಗಿಫ್ಟ್ ಆಗಿ ಕೊಟ್ಟಿರುವುದನ್ನು ನೋಡಿ ಅಲ್ಲು ಅರ್ಜುನ್ ನಾನು ಈಗಲೂ ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ.ಅಲ್ಲು ಅರವಿಂದ್ ಒಂದು ತಿಂಗಳ ಹಿಂದೆ ತಮ್ಮ ಮೊಮ್ಮಗ ಅಯಾನ್ ಬಳಿ ಹುಟ್ಟುಹಬ್ಬಕ್ಕೆ ಏನು ಗಿಫ್ಟ್ ಬೇಕು ಎಂದು ಕೇಳಿದ್ದಾರೆ. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದಾನೆ. ಮೊಮ್ಮಗನ ಆಸೆಯಂತೆ ಆತನ ಹುಟ್ಟುಹಬ್ಬಕ್ಕೆ ಅಲ್ಲು ಅರವಿಂದ್ ಈಜುಕೊಳವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ನನ್ನ ತಂದೆಯವರು ಅಯಾನ್ ಹುಟ್ಟುಹಬ್ಬಕ್ಕೆ ಸ್ವಿಮ್ಮಿಂಗ್ ಪೂಲ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ನಾನು ಈಗಲೂ ಕೂಡ ಶಾಕ್‍ನಲ್ಲಿದ್ದೇನೆ. ನನ್ನ ತಂದೆ ಒಂದು ತಿಂಗಳ ಹಿಂದೆ ಹುಟ್ಟುಹಬ್ಬಕ್ಕೆ ಏನೂ ಉಡುಗೊರೆ ಬೇಕು ಎಂದು ಅಯಾನ್‍ಗೆ ಕೇಳಿದರು. ಆಗ ಅಯಾನ್ ನನಗೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳಿದ್ದ. ನನ್ನ ತಂದೆ ಆತನ ಮಾತಿಗೆ ಒಪ್ಪಿಕೊಂಡು ಈಜುಕೊಳವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ತಾತ ಪಡೆಯಲು ಅಯಾನ್ ಅದೃಷ್ಟ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ತಾತ ಮೊಮ್ಮಗನ ಪ್ರೀತಿ ಎಷ್ಟಿದೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ… ಆಯಾನ್ ಈಜುಕೊಳ ಕೇಳಿದ್ದಕ್ಕೆ ಅಲ್ಲು ಅರವಿಂದ್ ಮಾಡಿಸಿಕೊಟ್ಟಿದ್ದಾರೆ.. ಇನ್ನು ಮುಂದಿನ ವರ್ಷಕ್ಕೆ ಅಯಾನ್ ಏನ್ ಫ್ಲಾನ್ ಮಾಡಿಕೊಂಡಿದ್ದಾನೋ ಯಾರಿಗೆ ಗೊತ್ತು..?
Comments