ದರ್ಶನ್ ಮತ್ತು ಯಶ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್ವುಡ್’ನ ಖ್ಯಾತ ನಟಿ..?!!

ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಚುನಾವಣೆ ಪ್ರಚಾರದ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ದರ ಪರಿಣಾಮ ಸಾಕಷ್ಟು ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳ ಬೇಕಾಯ್ತು. ಡಿ ಬಾಸ್ ಖ್ಯಾತಿಯ ದರ್ಶನ್ ಎಂದೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಜೆಡಿಎಸ್ ನಾಯಕರು ಟೀಕೆ ಮಾಡಿದ್ದಾರೆ. ಇದೀಗ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಪರ ಸ್ಯಾಂಡಲ್’ವುಡ್ ಸ್ಟಾರ್ ನಟಿ ಬ್ಯಾಟ್ ಬೀಸಿದ್ದಾರೆ.
ಮಂಡ್ಯದಲ್ಲಿ ಚುನಾವಣೆ ಪ್ರಚಾರದಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡುತ್ತಿರುವ ದರ್ಶನ್ ಮತ್ತು ಯಶ್ ಅವರನ್ನು ಜೆಡಿಎಸ್ ಮುಖಂಡರಾದಿಯಾಗಿ ಸ್ವತಃ ಮುಖ್ಯಮಂತ್ರಿಗಳೇ ಟೀಕೆ ಮಾಡಿದ್ದು ಸರಿಯಿಲ್ಲ. ಅವರೇನು ಹೇಳಿದ್ದರೂ, ದರ್ಶನ್ ಮತ್ತು ಯಶ್ ರಿಯಾಕ್ಟ್ ಮಾಡದೇ ಇದ್ದಾಗಲೇ ಗೊತ್ತಾಗುತ್ತದೆ ಅವರೆಷ್ಟು ಪ್ರಬುದ್ಧ ನಟರು ಎಂದು ಬಿಜೆಪಿ ನಾಯಕಿ ಶೃತಿ ಮಾತನಾಡಿದ್ದಾರೆ. ಶೋಭಾ ಕರಂದ್ಲಾಜೆ ಪರ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಬಿ ಪತ್ನಿಯನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಿಲ್ಲ. ನಾನು ನೋಡುತ್ತಿದ್ದೀನಿ ನೇರವಾಗಿ ಟೀಕೆ ಮಾಡ್ತಿದ್ದಾರೆ ಆದರೆ ಇದಕ್ಕೆ ನಟ ಯಶ್ ಮತ್ತು ದರ್ಶನ್ ಮಾಡಿರುವ ಪ್ರತಿಕ್ರಿಯೆಗಳು ಪ್ರಬುದ್ಧತೆಯನ್ನು ತೋರಿಸುತ್ತದೆ.
ಜಾತಿ ಬಗ್ಗೆ ಟೀಕೆ ಮಾಡಿದರು, ಡಿ ಬಾಸ್ , ಚಾಲೆಂಜಿಂಗ್ ಸ್ಟಾರ್ ಅನ್ನೋದರ ಬಗ್ಗೆ ಮಾತಾಡಿದರು. ಎಲ್ಲಾ ಟೀಕೆಯನ್ನು ಇಬ್ಬರೂ ಪ್ರಬುದ್ದತೆಯಿಂದ ಸ್ವೀಕರಿಸಿದ್ದಾರೆ. ಜನ ಎಲ್ಲವನ್ನೂ ಗಮನಿಸ್ತಾ ಇದಾರೆ. ಜನರ ಪ್ರೀತಿ ಅಭಿಮಾನ ದುಪ್ಪಟ್ಟಾಗಿ ಪ್ರಕಟವಾಗ್ತಿದೆ ಎಂದು ಶೃತಿ ಹೇಳಿದರು.ನಾಳೆ ನಿಖಿಲ್ ಕೂಡಾ ದೊಡ್ಡ ಸ್ಟಾರ್ ಆಗ್ಬೋದು, ಅವರಿಗೂ ನಾನಾ ಬಿರುದುಗಳು ಸಿಗ್ಬೋದು, ಅಭಿಮಾನಿಗಳು ಕೊಟ್ಟ ಬಿರುದುಗಳನ್ನು ಟೀಕೆ ಮಾಡೋದು ಸರಿಯಲ್ಲ, ದರ್ಶನ್ ಅವರು ವಿನಯದಿಂದ ಇದನ್ನೇ ಹೇಳಿಕೊಂಡಿದ್ದಾರೆ ಎಂದು ನಟಿ ಶೃತಿ ಹೇಳಿದರು. ನಾನು ರಾಜಕೀಯ ಬಿಟ್ಟು ಮಾತನಾಡುತ್ತಿದ್ದೇನೆ, ಒಬ್ಬ ಹೆಣ್ಣು ಮಗಳಾಗಿ ಹೇಳುತ್ತಿದ್ದೇನೆ. ಸುಮಲತಾ ಮತ್ತು ಅವರ ಪರ ನಿಂತ ಕಲಾವಿದರನ್ನು ಟೀಕೆ ಮಾಡೋದು ಖಂಡಿತ ಖಂಡನೀಯ ಎಂದಿದ್ದಾರೆ.
Comments