ಖ್ಯಾತ ಸೀರಿಯಲ್ ಹೀರೋಯಿನ್ ಗೆ ನಂಬಿಸಿ ಕೈ ಕೊಟ್ಟ ನಿರ್ದೇಶಕ..!!!
ಧಾರವಾಹಿಗಳಲ್ಲಿ ನಟಿಸಿ ಹೇಗೋ ಜೀವನ ಮಾಡುತ್ತಿದ್ದ ನಟಿಯನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆಂದು ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಕಲೆಯನ್ನು ನಂಬಿ ಹೇಗೋ ಜೀವನ ಮಾಡುತ್ತಿದ್ದೆ. ಸಿನಿಮಾ ಹಿರೀಇನ್ ಮಾಡುತ್ತೇನೆ, ದೊಡ್ಡ ನಟಿಯಾಗುವಂತೆ ಮಾಡುತ್ತೇನೆಂದು ವ್ಯಕ್ತಿಯೊಬ್ಬ ಸೀರಿಯಲ್ ಕಲಾವಿದೆಗೆ ಮಹಾ ಮೋಸ ಮಾಡಿದ್ದಾನೆ. ಆಕೆಯ ಹತ್ತಿರ ಹಣ ಮತ್ತು ಚಿನ್ನವನ್ನು ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಸದ್ಯ ಬೆಳಕಿಗೆ ಬಂದಿದೆ.
ಅಂದಹಾಗೇ ಆಕೆ ಸಿರಿಯಲ್ ನಲ್ಲಿ ಸಹ ನಟಿಯಾಗಿ ನಟಿಸುತ್ತಿದ್ದರೆನ್ನಲಾಗಿದೆ. ಆ ಸಮಯದಲ್ಲಿ ಸಹ ನಿರ್ದೇಶಕರಾಗಿ ಪರಿಚಯವಾದ ಆತನೇ ಪರಾರಿಯಾದ ಆರೋಪಿ. ಸೀರಿಯಲ್ ಟೈಮ್ ನಲ್ಲಿ ಪರಸ್ಪರ ಪರಿಚಯವಾಗಿ, ಆರೋಪಿ ನಟಿಗೆ ಸಿನಿಮಾದಲ್ಲಿ ನಟಿಸುವ ಆಸೆ ಹುಟ್ಟಿಸಿದ್ದಾನೆ. ಅದನ್ನೇ ನಂಬಿಕೊಂಡ ನಟಿ ಆತ ಕೇಲಿದ ಹಾಗೇ ಚಿನ್ನ, ಹಣ ಕೊಟ್ಟಿದ್ದಾಳೆ. ಕಡಿಮೆ ಅವಧಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎಂದು ಆಸೆ ಹುಟ್ಟು ಹಾಕಿದ ನಿರ್ದೇಶಕ ಪ್ರಭು ಎಸ್ಕೇಪ್ ಆಗಿದ್ದಾನೆ.. ಪ್ರಭು ನನ್ನ ರೀತಿಯಲ್ಲಿ ಇನ್ನು ಹಲವರಿಗೆ ಆಮಿಷಗಳನ್ನೊಡ್ಡಿ ಮೊಸ ಮಾಡಿದ್ದಾನೆಂದು ಸಹ ನಟಿ ಆರೋಪಿಸಿದ್ದಾರೆ.ಈ ಸಹ ನಟಿ ಜೋಕಾಲಿ, ತಂಗಾಳಿ , ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾಳೆ. ಅಲ್ಲದೇ ಟಿವಿ ಸೀರಿಯಲ್ ಮೂಲಕ ಹೆಸರು ಮಾಡಿದ್ದಾಳೆ ಎನ್ನಲಾಗಿದೆ. ಸದ್ಯಕ್ಕಂತೂ ಆಕೆಯ ಹೆಸರು ಮಾಧಯಮಗಳಲ್ಲಿ ಬಹಿರಂಗವಾಗದಂತೇ ಕಾಪಾಡಿಕೊಳ್ಳಲಾಗಿದೆ.ತನಗಾದ ಅನ್ಯಾಯ , ವಂಚನೆ ಬಗ್ಗೆ ಯುವತಿ ಸಹ ನಿರ್ದೇಶಕ ಪ್ರಭು ವಿರುದ್ಧ ಯುವತಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
Comments