20 ವರ್ಷದ ಬಳಿಕ ಆಕೆಯೊಂದಿಗೆ ಮತ್ತೆ ಕಾಣಿಸಿಕೊಂಡ ಬಿಗ್ ಬಿ : ಯಾರಂತ ಕೇಳಿದ್ರೆ ಅಚ್ಚರಿ ಆಗ್ತೀರಾ..!!!

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಲೆ ಮೇಲೆ ಕೆಮಪು ಬಣ್ಣದ ಟವೆಲ್ ಹಾಕಿ ಕುಳಿತು ಡಿಫರೆಂಟ್ ಲುಕ್ ನಲ್ಲಿ ಬಿಗ್ ಬಿ ಕಾಣುತ್ತಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಅಮಿತಾಬ್ ಗೆಟಪ್ ಮಸ್ತ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಅಂದಹಾಗೇ ಅಮಿತಾಬ್ ತಮಿಳಿನ ಸಿನಿಮಾವೊಂದರಲ್ಲಿ ಅಭಿನಯದ ಸ್ಟಿಲ್ ಫೋಟೋ ಅದು.
ಮತ್ತೊಂದು ಹೊಸ ವಿಚಾರ ಏನಪ್ಪಾ ಅಂದ್ರೆ ಬಹುಭಾಷಾ ಕಲಾವಿದೆ, ಎವರ್ ಗ್ರೀನ್ ಹೀರೋಯಿನ್ ರಮ್ಯಾಕೃಷ್ಣ ಜೊತೆ ಬಿಗ್ ಬಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರ ಕೇಲಿದ್ರೆ ಅಚ್ಚರಿ ಆಗ್ತೀರಾ ಅಲ್ವಾ..ಹೌದು ಇದಕ್ಕೂ ಮೊದಲೇ ಅಮಿತಾಬ್ ಜೊತೆ ರಮ್ಯಾ ಆ್ಯಕ್ಟ್ ಮಾಡಿದ್ದರು. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಬಡೇ ಮಿಯಾ ಚೋಟೇ ಮಿಯಾ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದ ಈ ಸ್ಟಾರ್ ಜೋಡಿ ಊರ್ಯಂಧ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ.
ಹೌದು, ವಯಸ್ಸಿಗೆ ಮೀರಿದ ಪಾತ್ರ ಮಾಡಿ ನಟನೆಯಲ್ಲಿ ಸೈ ಎಂದೇಳಿಸಿಕೊಂಡ ರಮ್ಯಾ ಕೃಷ್ಣ ಮಾಡಿರುವ ಚಿತ್ರವೆಲ್ಲಾ ಸೂಪರ್ ಹಿಟ್ ಅದರಲ್ಲೂ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರಕ್ಕೆ ಅಭಿಮಾನಿಗಳು ಫುಲ್ ಬೋಲ್ಡ್. 20 ವರ್ಷಗಳ ಬಳಿಕ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗುತ್ತಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ. 1998ರಲ್ಲಿ 'ಬಡೇ ಮಿಯಾ ಚೋಟೇ ಮಿಯಾ ' ಮೂಲಕ ಹಿಟ್ ಆದ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಫೇವರಿಟ್ ಆಗುವುದಂತೂ ಗ್ಯಾರಂಟಿ.
Comments