ಶೂಟಿಂಗ್ ಸ್ಪಾಟ್ ನಲ್ಲಿ ನಟ ವಿನೋದ್ ಪ್ರಭಾಕರ್'ಗೆ ಗಾಯ ; ಆಸ್ಪತ್ರೆಗೆ ದಾಖಲು...!!!

03 Apr 2019 4:00 PM | Entertainment
450 Report

ಸ್ಯಾಂಡಲ್’ವುಡ್ ನ ಸ್ಟಾರ್ ನಟ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಬಿದ್ದು ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ವಿನೋದ್ ಪ್ರಭಾಕರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಾಹಸದ ದೃಶ್ಯಗಳ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದ್ದು ಹೆಚ್ಚಿನ ಅಪಾಯವೇನು ಸಂಭವಿಸಿಲ್ಲ.

ಮಾಗಡಿ ರಸ್ತೆಯಲ್ಲಿರುವ ಟಿಂಬರ್ ಫ್ಯಾಕ್ಟರಿಯಲ್ಲಿ ನಾಲ್ಕು ದಿನಗಳಿಂದ ಸಿನಿಮಾ ಶುಟಿಂಗ ನಡೆಯುತ್ತಿತ್ತು. ‘ವರ್ಧ ‘ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಉದಯ ಪ್ರಕಾಶ ನಿರ್ದೇಶನದ ಆ್ಯಕ್ಷನ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಟನಾಗಿ ಅಭಿನಯಿಸುತ್ತಿದ್ದು, ಸಾಹಸದ ಸೀನೊಂದರಲ್ಲಿ ಅಚಾನಕ್ ಆಗಿ ಬಿದ್ದಿದ್ದಾರೆ. ಕಾಲಿನ ಮಂಡಿಗೆ ಗಾಯವಾಗಿದ್ದು ಸದ್ಯ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಅಂದಹಾಗೇ ಇತ್ತೀಚಿಗಷ್ಟೇ  ವಿನೋದ್ ಸಿನಿಮಾ ರಗಡ್ ರಿಲೀಸ್ ಆಗಿ ಭಾರೀ ಪ್ರಶಂಸೆ ಗಳಿಸಿತು. ಅಷ್ಟೇ ಅಲ್ಲಾ ವಿನೋದ್ ಅವರ 8 ಪ್ಯಾಕ್ ಚಂದನವನದಲ್ಲಿ ಭಾರೀ ಸುದ್ದಿಯಾಯ್ತು. ಸದ್ಯ ಬಾಲಿವುಡ್ ಆಫರ್ ಗಿಟ್ಟಿಸಿಕೊಂಡಿರುವ ವಿನೋದ್ ಆದಷ್ಟು ಬೇಗ ಗುಣಮುಖರಾಗಲಿ ಎಂಬುದು ನಮ್ಮ ಆಶಯ.

Edited By

Kavya shree

Reported By

Kavya shree

Comments