ವಯಸ್ಸು 33 ಆಯ್ತು ಮದುವೆ ಯಾವಾಗ ಅಂತಾ ಕೇಳಿದ್ರೆ : ಶಾಕಿಂಗ್ ಉತ್ತರ ಕೊಟ್ಟಳು ಖ್ಯಾತ ನಟಿ..?!!!
ಅಂದಹಾಗೇ ಸಕಲಕಲಾ ವಲ್ಲಭ ಕಮಲ್ ಹಾಸನ್ ಪುತ್ರಿಯರು ಏನಾದರೊಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಕಮಲ್ ಅವರ ಎರಡನೇ ಪುತ್ರಿ ಅಕ್ಷರ ಹಾಸನ್ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಕಮಲ್ ಹಾಸನ್ ಕೂಡ ಅಸಮಧಾನ ವ್ಯಕ್ತಪಡಿಸಿದ್ದರು. ನಂತರ ಶೃತಿ ಹಾಸನ್ ಕಮಲ್ ಅವರ ಮೊದಲ ಪುತ್ರಿ, ಶೂಟಿಂಗ್ ಸ್ಥಳಕ್ಕೆ ಶಿಸ್ತಿಲ್ಲದೇ ಬರುತ್ತಾರೆ, ಕುಡಿದು ಬರುತ್ತಾರೆ ಎಂಬ ಸುದ್ದಿ ಕೂಡ ತಮಿಳಿನಲ್ಲಿ ಜೋರು ಸೌಂಡು ಮಾಡಿತ್ತು. ಅದೇನೆ ಇರಲಿ, ಶೃತಿ ಸದ್ಯ ಮತ್ತೊಂದು ವಿಚಾರದಲ್ಲಿ ಫ್ರಂಟ್ ಲೈನ್ ಸುದ್ದಿಯಾಗಿದ್ದಾರೆ. ವಯಸ್ಸು 33 ದಾಟುತ್ತಿದ್ದರೂ ಮದುವೆ ....... ಇಲ್ಲವೇ ಎಂದು ಕೇಳಿದ್ರೆ ಶೃತಿ ಕೊಟ್ಟ ಉತ್ತರ ಕೇಳಿದವರನ್ನು ದಂಗಾಗಿ ಬಿಡಿಸುತ್ತೆ..?
ಇತ್ತೀಚೆಗೆ ಶೃತಿ ಹಾಸನ್ ವಿದೇಶಿ ಹುಡುಗನೊಬ್ಬನ ಜೊತೆ ಸುತ್ತಾಡುತ್ತಿದ್ದಾರೆ. ಅವರ ಜೊತ ಲವ್, ಡೇಟಿಂಗ್ ಅಂತಾ ಟೈಮ್ ಸ್ಪೆಂಡ್ ಮಾಡ್ತಾ ಇದ್ದಾರೆ ಎಂಬ ಸುದ್ದಿಗಳಿಗೆ ಶೃತಿ ಬಾಯಿ ಬಿಟ್ಟಿದ್ದಾರೆ. ಅತ್ತ ಆತನೊಂದಿಗು ಮದುವೆ ಮಾಡಿಕೊಳ್ಳದೇ ಇತ್ತ ಬೇರೆ ವರನನ್ನು ಹುಡುಕದೇ ಸುಮ್ಮನೇ ಇರುವ ಶೃತಿ ಬಗ್ಗೆ ಟ್ರೋಲಿಗರು ಪ್ರಶ್ನೆ ಮಾಡಿದ್ದಾರೆ. ಹೋದ ಕಡೆಯೆಲ್ಲಾ,ಬಂದ ಕಡೆಯೆಲ್ಲ ಶೃತಿ ನಿಮ್ಮ ಮದುವೆ ಯಾವಾಗ ಎಂದವರಿಗೆ ಈ ಬಾರಿ ಖಡಕ್ ಆಗಿಯೇ ಉತ್ತರಿಸಿದ್ದಾರೆ ಬ್ಯೂಟಿ ಕ್ವೀನ್ ಶೃತಿ. ಮದುವೆ ವಿಷ್ಯದಲ್ಲಿ ನನಗೂ ಮತ್ತು ಇತರೆ ಮಹಿಳೆಯರಿಗೆ ಬಹಳ ವ್ಯತ್ಯಾಸವಿದೆ. ನಾನು ಮದುವೆ ಆಗಲ್ಲ ಮತ್ತು ನನಗೆ ಮದುವೆ ಆಗಬೇಕು ಎಂಬ ಆತುರವೂ ಇಲ್ಲ.
ನನಗೆ ಯಾವಾಗ ಮದುವೆ ಆಗ್ಬೇಕು ಅನಿಸುತ್ತೋ ಆಗ ಆಗ್ತೀನಿ. ಆದ್ರೀಗ, ಈ ಬಗ್ಗೆ ಯಾವುದೇ ಕಲ್ಪನೆ ಕೂಡ ಇಲ್ಲ. ನಿರ್ದಿಷ್ಟ ಸಮಯದಲ್ಲಿ ಮದುವೆಯಾಗಬೇಕೆಂದು ಯಾವುದೇ ಸಂಬಂಧವು ನಿರ್ಧರಿಸಲ್ಲ'' ಎಂದು ಶ್ರುತಿ ಹಾಸನ್ ಮದುವೆ ಬಗ್ಗೆ ಖಡಕ್ ಆಗಿ ನಿರ್ಧಾರ ತಿಳಿಸಿದ್ದಾರೆ.ವಿದೇಶಿ ಹುಡುಗನ ಜೊತೆ ಸುತ್ತಾಟದ ಬಗ್ಗೆ ಶೃತಿ ಕೊಟ್ಟ ಉತ್ತರ, ನಾನು ಯಾರಾದರೂ ಜೊತೆ ಓಡಾಡುತ್ತಿದ್ದೇನೆ ಎಂದರೆ ಅದಕ್ಕೆ ಮದುವೆಗೆ ದಾರಿಯಾಗಿ ಬಿಡುತ್ತಾ, ಅಂತಹುದರಲ್ಲಿ ನಂಬಿಕೆ ನನಗಿಲ್ಲ. ನನಗಿಷ್ಟ ಬಂದವರ ಜೊತೆ ನಾನು ಇರಲು ಬಯಸುತ್ತೇನೆ ಎಂದಿದ್ದಾರೆ.ಒಟ್ಟಾರೆ ಅಪ್ಪ ಕಮಲ್ ಹಾಸನ್ ಹಿಟ್ ಸಿನಿಮಾಗಳನ್ನು ಕೊಟ್ಟು ತಮಿಳಿನ ಸೂಪರ್ ಸ್ಟಾರ್ ಕಲಾವಿದರಾಗಿದ್ದಾರೆ. ಶೃತಿ ಹಾಸನ್ ಕೂಡ ಟಾಪ್ ಸ್ಟಾರ್ ಗಳ ಜೊತೆ ನಟಿಸಿ ಖ್ಯಾತ ನಾಯಕಿಯಾಗಿದ್ದಾರೆ. ಇನ್ನು ಅಕ್ಷರ ಹಾಸನ್ ಕೂಡ ಸಿನಿಮಾ ಲ್ಯಾಂಡ್ ನಲ್ಲಿದ್ದಾರೆ. ಶೃತಿ ಮಾತು ಕೇಳಿ ಅಭಿಮಾನಿಗಳು, ಕಮಲ್ ಗೆ ಮಕ್ಕಳ ಮದುವೆ ನೋಡುವ ಯೋಗವಿಲ್ಲ ಎನ್ನುತ್ತಿದ್ದಾರಂತೆ.
Comments