ಬಾಲಿವುಡ್​​ ಸ್ಟಾರ್ಸ್’ಗಳ ಬಾಡಿಗಾರ್ಡ್ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ..?

03 Apr 2019 2:31 PM | Entertainment
2123 Report

ಸ್ಟಾರ್ ಗಳು ಹೊರಗಡೆ ಹೋಗುವಾಗ ಸಾಕಷ್ಟು ಬಾರಿ ಯೋಚನೆ ಮಾಡ್ತಾರೆ.. ಆಕಸ್ಮಾತ್ ಹೋದ್ರು ಬಾಡಿಗಾರ್ಡ್ ಇಲ್ಲದೆ ಸ್ಟಾರ್ಸ್ ಗಳು ಎಲ್ಲಿಯೂ ಕೂಡ ಹೋಗುವುದಿಲ್ಲ..ಯಾವಾಗಲೂ ಸೇಪ್ಟಿಯನ್ನು ಬಯಸುವ ಸ್ಟಾರ್ಸ್ಗಳು ಬಾಡಿಗಾರ್ಡ್ ಅನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಾರೆ.. ಆದರೆ ಬಾಲಿವುಡ್ ಸ್ಟಾರ್ಸ್ ಗಳ ಬಾಡಿಗಾರ್ಡ್ ಸಂಬಳ ಕೇಳುದ್ರೆ ಅಯ್ಯೋ ಹೌದಾ ಅಂತ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತೀರಾ.. ಮುಂದೆ ಓದಿ ನಿಮಗೆ ಗೊತ್ತಾಗುತ್ತೆ..

ಬಾಲಿವುಡ್​ ನಟರು ತಮ್ಮ ರಕ್ಷಣೆ ಹಾಗೂ ಕೆಲಸಗಳ ನಿರ್ವಹಣೆಗೆಂದು ಪರ್ಸ್​ನಲ್​ ಬಾಡಿಗಾರ್ಡ್​ನ್ನು ನೇಮಿಸಿಕೊಂಡಿರುತ್ತಾರೆ.. ಆ ಬಾಡಿಗಾರ್ಡ್ ವರ್ಷಕ್ಕೆ ಪಡೆಯುವ ಸಂಬಳ ಎಷ್ಟು ಕೋಟಿಗೊತ್ತಾ... ಬಿ-ಟೌನ್​ ರಾಣಿ ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಜಲಾಲ್​ ಸಂಬಳ ವರ್ಷಕ್ಕೆ 80 ಲಕ್ಷ, ಅಕ್ಷಯ್​ ಕುಮಾರ್​ ಬಾಡಿಗಾರ್ಡ್ ಶ್ರೇಯಸ್​ ಥಾಲೆ ಸಂಬಳ ವರ್ಷಕ್ಕೆ 1.2 ಕೋಟಿ, ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಬಾಡಿಗಾರ್ಡ್ ಜೀತೆಂದ್ರ ಶಿಂಧೆ ಸಂಬಳ ವರ್ಷಕ್ಕೆ 1.5 ಕೋಟಿ, ಬಾಲಿವುಡ್​ನ ಮಿಸ್ಟರ್​ ಫರ್​ಫೆಕ್ಷನಿಸ್ಟ್​ ಅಮೀರ್​ ಖಾನ್​ ಬಾಡಿಗಾರ್ಡ್ ಯುವರಾಜ್​ ಗೊರ್ಪಡೆ ಸಂಬಳ ವರ್ಷಕ್ಕೆ 2 ಕೋಟಿ, ಬಾಲಿವುಡ್​ನ ಭಾಯಿಜಾನ್​ ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್ ಶೇರಾ ಸಂಬಳ ವರ್ಷಕ್ಕೆ ಬರೋಬ್ಬರಿ 2 ಕೋಟಿ, ಕಿಂಗ್​ ಖಾನ್​ ಶಾರುಖ್​ ಖಾನ್​ ಬಾಡಿಗಾರ್ಡ್ ಆದ ರವಿ ಸಿಂಗ್​ ಸಂಬಳ ವರ್ಷಕ್ಕೆ 2.5 ಕೋಟಿ.. ಅಯ್ಯೋ ದೇವರೆ ನಾವು ವರ್ಷವೆಲ್ಲಾ ದುಡಿದರೂ ಇಷ್ಟು ಸಂಪಾದನೆ ಮಾಡಲು ಸಿದ್ದವಿಲ್ಲ ಎಂದು ಸಾಕಷ್ಟು ಜನ ಅಂದುಕೊಳ್ಳುತ್ತಾರೆ.

Edited By

Manjula M

Reported By

Manjula M

Comments