ಯುಗಾದಿ ಹಬ್ಬಕ್ಕೆ ಪ್ರಿಯಾ ಕೊಡ್ತಿದ್ದಾರೆ ಗುಡ್ ನ್ಯೂಸ್...!!!
ಅಂದಹಾಗೇ ರಾಜಕೀಯದ ಬ್ಯುಸಿ ನಡುವೆ ಒಂದಷ್ಟು ದಿನ ಮಾಧ್ಯಮಗಳಿಗೆ ಭಾರೀ ಸುದ್ದಿಯಾದ ಸ್ಟಾರ್ ನಟ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ ಪಾಲಿಟಿಕ್ಸ್ ಎಂಟ್ರಿ-ಕ್ಯಾಂಪೇನ್ ಬಗ್ಗೆ ಅಷ್ಟೇನು ಗುಟ್ಟು ಬಿಡದೇ ಇದ್ರು, ದರ್ಶನ್ ಬಗ್ಗೆ ಕೊಟ್ಟ ಹೇಳಿಕೆಗೆ ಭಾರಿಯೇ ಸುದ್ದಿಯಾದ್ರು. ಆದರೆ ಈ ಬಾರಿ ಪ್ರಿಯಾ ಸುದೀಪ್ ಸುದ್ದಿಯಾಗಿದ್ದಾರೆ. ಅವರು ಹೇಳಿರುವ ನ್ಯೂಸ್ ಕಿಚ್ಚನ ಅಭಿಮಾನಿಗಳನ್ನು ಬಕ ಪಕ್ಷಿಗಳಂತೆ ಕಾಯುವಂತೆ ಮಾಡಿದೆ. ಅದೇನು ಇರ ಬಹುದು ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರು ಹೇಳಿದ್ರೆ ಅದು ಸಿನಿಮಾಗೆ ಸಂಬಂಧಿಸಿದ್ದಂತೇ ಎಂದು ಅಭಿಮಾನಿಗಳು ಅಂದಾಜಿಸಿ ಬಿಡುತ್ತಾರೆ. ಆದರೆ ಈ ಬಾರಿ ಪ್ರಿಯಾ ಸುದೀಪ್ ಯುಗಾದಿ ಪ್ರಯುಕ್ತ ಅಭಿನಯ ಚಕ್ರವರ್ತಿಗೆ ದೊಡ್ಡ ಗಿಫ್ಟ್ ಕೊಡಲಿದ್ದಾರಂತೆ. ಅದು ಏನಿರ ಬಹುದು....?
ಹಾಗಂತಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಗುಡ್ ನ್ಯೂಸ್ ಎಂದಿರುವ ಪ್ರಿಯಾ, ಸುದೀಪ್ ಫೋಟೋ ಹಾಕಿ ಯುಗಾದಿಗೆ ಬೋನಸ್ ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಯಾವುದೆ ವಿಚಾರ ಜನರೊಂದಿಗೆ ಹಂಚಿಕೊಳ್ಳುವಾಗ ಮುಂದಾಲೋಚನೆ ಮಾಡುವ ಪ್ರಿಯಾ ಈಗ ಕೊಟ್ಟಿರುವ ಸರ್ಪ್ರೈಸ್ ಏನಿರಬಹುದು ಎಂದು ಕುತೂಹಲ ಹುಟ್ಟಿಸಿದೆ.
ಅಭಿನಯ ಚಕ್ರವರ್ತಿ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಪ್ರಿಯಾ ಕೊಡುವ ಗುಡ್ ನ್ಯೂಸ್ ಏನಾಗಿರುತ್ತೆ ಎಂಬುದು ವಿಶೇಷ. ಇನ್ನು ಅಭಿಮಾನಿಗಳು ಈ ವಿಚಾರದ ಬಗ್ಗೆ ತಲೆಗೆ ಉಳು ಬಿಟ್ಟುಕೊಂಡಿದ್ದಾರೆ. ಮತ್ತೊಂದಿಷ್ಟು ಮಂದಿ ಸುದೀಪ್ ಏನಾದ್ರು ಅಪ್ಪನಾಗ್ತಿದ್ದಾರೆ ಎಂದು ರಿಯಾಕ್ಟ್ ಮಾಡಿದ್ದಾರೆ. ಈ ಮೊದಲು ನವರಸ ನಾಯಕ ಜಗ್ಗೇಶ್ ಪ್ರಿಯಾ ಸುದೀಪ್ ಹಾಕಿದ ರೊಮ್ಯಾಂಟಿಕ್ ಫೋಟೋಗೆ ನಾವೆಲ್ಲಾ ಜೂನಿಯರ್ ಸುದೀಪ್ ಗೆ ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಒಟ್ಟಾರೆ ಪ್ರಿಯಾ ಕೊಡುವ ಸರ್ಪ್ರೈಸ್ ಏನಾಗಿರಲಿದೆ ಎಂಬುದು ಭಾರೀ ಕುತೂಹಲ.
Comments