ತನಗಿಂತ 20 ವರ್ಷದ ದೊಡ್ಡ ನಟನ ಜೊತೆ ಜಯಪ್ರದಾ ರೊಮ್ಯಾನ್ಸ್ : ಫೋಟೋ ವೈರಲ್...!!!
ಬಾಲಿವುಡ್ ನ ಹಿರಿಯ ನಟಿ ಜಯಪ್ರದಾ ಸದ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಇದೀಗ ಜಯಪ್ರದಾ ಅವರ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಜಯಪ್ರದಾ ನಟನ ಜೊತೆ ಇಂಟಿಮೇಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಟ್ರೋಲಗರ ಬಾಯಿಗೆ ಆಹಾರವಾಗಿದೆ. ಲೋಕ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಜಯಪ್ರದಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಂಪುರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಫೋಟೋ ವೈರಲ್ ಆಗಿದ್ದರ ಬಗ್ಗೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಸಮಾಜವಾದಿ ಪಕ್ಷದ ಮಾಜಿ ಸಚಿವ ಅಜೀಮ್ ಖಾನ್ ವಿರುದ್ಧ ಜಯಪ್ರದಾ ಸ್ಪರ್ಧೆಗಿಳಿದಿದ್ದಾರೆ. ಜಯಪ್ರದಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜಯಪ್ರದಾ ಮೊದಲು ತೆಲುಗಿನಲ್ಲಿ ನಟಿಸಿದ್ದೇ ಆದ್ರೂ, ಖ್ಯಾತಿ ಗಳಿಸಿದ್ದು ಮಾತ್ರ ಬಾಲಿವುಡ್ನಲ್ಲಿ. ಜಯಪ್ರದಾ ನಟನೆ ಜೊತೆ ರಾಜಕೀಯದಲ್ಲೂ ಮುಂದಿದ್ದಾರೆ. ಜಯಪ್ರದಾ ಕನ್ನಡವೂ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ ಜಯಪ್ರದಾ. ಈ ನಟಿ ಒಂದಷ್ಟು ದಿನ ಮಾನಸಿಕವಾಗಿ ನೋವು ಅನುಭವಿಸಿದ್ದರಂತೆ. ಬೇರೆಯವರ ಜೊತೆ ತಮ್ಮ ಹೆಸರು ತಳುಕು ಹಾಕಿ ಗಾಸಿಪ್ ಹಬ್ಬಿದ್ದರ ಬಗ್ಗೆ ಸಾಯುವ ಯೋಚನೆ ಮಾಡಿದ್ದರಂತೆ ಜಯಪ್ರದಾ. ಅಂದಹಾಗೇ ಬಿ ಟೌನ್ ನಲ್ಲಿ ಬಹಳ ಫೇಮಸ್ ಜೋಡಿಯಾಗಿರುವ ಜಯಪ್ರದಾ ಹಾಗೂ ಜಿತೇಂದ್ರ ಇಬ್ಬರ ಪೇರ್ ಬಾಲಿವುಡ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು.
ಜಯಪ್ರದಾ ಆಗಿನ ಪ್ರಸಿದ್ಧ ನಟ ರಾಜೇಶ್ ಖನ್ನಾ ಜೊತೆಯೂ ನಟಿಸಿದ್ದರು. ರಾಜೇಶ್ ಖನ್ನಾ ಜೊತೆಗಿನ ಇಂಟಿಮೇಟ್ ದೃಶ್ಯವೊಂದು ಚರ್ಚೆಗೆ ಕಾರಣವಾಗಿತ್ತು. ಆವಾಜ್ ಚಿತ್ರದ ಹಾಡೊಂದರಲ್ಲಿ ಜಯಪ್ರದಾ ಹಾಗೂ ರಾಜೇಶ್ ಖನ್ನಾ ಎಲ್ಲೆ ಮೀರಿದ್ದರು. ತನಗಿಂತ 20 ವರ್ಷ ದೊಡ್ಡ ನಟನ ಜೊತೆ ಜಯಪ್ರದಾ ಬೋಲ್ಡ್ ಆಗಿ ನಟಿಸಿದ್ದಾರೆ. ಆ ಹಾಡು ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಅದೇ ಹಾಟ್ ಸೀನ್ ನಲ್ಲಿ ಕಾಣಿಸಿಕೊಂಡ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಇದೀಗ ಬಿಜೆಪಿ ಪಾರ್ಟಿ ಸೇರಿರುವ ನಟಿ ಜಯಪ್ರದಾ ಆಗಿನ ಫೊಟೋವನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
Comments