ದರ್ಶನ್ ನಾಯಕಿ ಹಿಂಬದಿಗೆ ಹೊಡೆದ ಶ್ರೀದೇವಿ ಪತಿ : ಸಿಟ್ಟಿಗೆದ್ದ ನಟಿ ಮಾಡಿದ್ದೇನು ಗೊತ್ತಾ..?
ಚಾಲೆಂಜಿಂಗ್ ಸ್ಟಾರ್ ಅಭಿನಯದ ಐರಾವತ ಸಿನಿಮಾ ನಾಯಕಿ ಉರ್ವಶಿ ರೌಟೆಲಾ ಹಿಂಬದಿಗೆ ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರು ಹೊಡೆದ ವಿಡಿಯೋ ವೈರಲ್ ಆಗಿತ್ತು.ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಯ್ತು. ಟ್ರೋಲ್ ಮಾಡುತ್ತಿದ್ದವರಿಗೆ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ನಟಿ ಊರ್ವಶಿ.
ಊರ್ವಶಿ ಮತ್ತು ಬೋನಿ ಕಪೂರ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಊರ್ವಶಿ ಹಿಂಬಂದಿಗೆ ಹೊಡೆದಿದ್ದಾರೆ.ಈ ವಿಡಿಯೋ ನೋಡಿದವರು ಬೋನಿ ಕಪೂರ್ ಮತ್ತು ಊರ್ವಶಿ ಇಬ್ಬರನ್ನು ಟ್ರೋಲ್ ಮಾಡಿದ್ದಾರೆ . ಇದರಿಂದ ಸಿಟ್ಟಿಗೆದ್ದ ನಟಿ ಇದೀಗ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ, ನಿಮಗೆ ಹೆಣ್ಣಮಕ್ಕಳಿಗೆ ಗೌರವ ಕೊಡಲು ಆಗುವುದಿಲ್ಲ ಎಂದರೆ ಹೆಣ್ಣು ಮಕ್ಕಳ ಪವರ್ ಬಗ್ಗೆ ಮಾತನಾಡಿಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲಾ, ನಾನು ಬೆಳಗ್ಗೆ ಎದ್ದು ನೋಡಿದಾಗ ನನ್ನ ಮತ್ತು ಬೋನಿ ಕಪೂರ್ ಸರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದುದ್ದನ್ನು ನೋಡಿ ನಿಜ ಶಾಕ್ ಆಯ್ತು.
ಬೋನಿ ಕಪೂರ್ ಅವರು ಜೆಂಟಲ್‍ಮೆನ್, ಅವರೇನು ಎಂಬುದು ನನಗೆ ಗೊತ್ತು. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋ ಹಾಕುವ ಮೊದಲು ಅಥವಾ ಇನ್ನೊಬ್ಬರ ಹೆಸರು ಹಾಳು ಮಾಡುವ ಮೊದಲು ಯಾರು ಎರಡು ಬಾರಿ ಯೋಚಿಸುವುದಿಲ್ಲ. ಅವರ ಮನಸ್ಸಿಗೆ ಎಷ್ಟು ಬೇಸರವಾಗುತ್ತದೆ ಎಂದು ….ಇದರಿಂದ ನನಗೆ ಬೇಸರವಾಗಿದೆ. ದಯವಿಟ್ಟು ಟ್ರೋಲ್ ಮಾಡುವುದನ್ನು ನಿಲ್ಲಿಸಿ. ನಾನು ಬೋನಿ ಕಪೂರ್ ಅವರನ್ನು ಗೌರವಿಸುತ್ತೇನೆ ಹಾಗೂ ಅವರ ಪರವಾಗಿ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Comments