‘ಅಗ್ನಿಸಾಕ್ಷಿ’ ಸನ್ನಿಧಿಗೆ ಆಕ್ಸಿಡೆಂಟ್ …!!!

'ಅಗ್ನಿಸಾಕ್ಷಿಯ' ಧಾರವಾಹಿಯಲ್ಲಿ ನಟಿಸುತ್ತಿರುವ ಸನ್ನಿಧಿಗೆ ಆಕ್ಸಿಡೆಂಟ್ ಆಗಿರುವ ಫೋಟೋವೊಂದು ವೈರಲ್ ಆಗಿದೆ. ಇದ್ದಕ್ಕಿದ್ದ ಹಾಗೇ ಸನ್ನಿಧಿಗೆ ಆಕ್ಸಿಡೆಂಟ್ ಆಯ್ತಾ...? ಏನಾಯ್ತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗಾಗೆ ಸನ್ನಿಧಿಗೆ ಆಕ್ಸಿಡೆಂಟ್ ಆಗಿ, ಬೆಡ್ ಮೇಲೆ ಮಲಗಿರುವ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಂತೂ ನಿಜ….ಆದರೆ ಇದೆಲ್ಲಾ ಹೇಗೆ...ಏನಾಯ್ತು..? ಇದು ರೀಲ್ ಅಥವಾ ನಿಜವಾಗಲು ಅಪಘಾತವಾಗಿದ್ಯೋ...ಮುಂದೆ ಓದಿ.
ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಮೂಡಿಬರುತ್ತಿರುವ ಅಗ್ನಿಸಾಕ್ಷಿ ಜನ ಮೆಚ್ಚಿದ ಧಾರವಾಹಿ. ಸುಮಾರು ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಧಾರವಾಹಿಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಧಾರವಾಹಿ ಇದೀಗ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಜನರ ಕುತೂಹಲವನ್ನು ಹೆಚ್ಚು ಮಾಡಿದೆ. ನಾಯಕ ಸಿದ್ಧಾರ್ಥ್ ರಿಯಲ್ ಲೈಫ್ ನಲ್ಲಿ ಮದುವೆಯಾದ ಮೇಲೆ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ನಾಯಕಿ ಸನ್ನಿಧಿ ಆಸ್ಪತ್ರೆ ಸೇರಿರುವ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಇದು ರಿಯಲ್ ನಲ್ಲಿ ಅಲ್ಲ, ರೀಲ್ ನಲ್ಲಿ. ತಲೆಗೆ ಪೆಟ್ಟು ಮಾಡಿಕೊಂಡು ಬ್ಯಾಂಡೇಜ್ ಸುತ್ತಿಕೊಂಡು ಸನ್ನಿಧಿ ಆಸ್ಪತ್ರೆ ಬೆಡ್ ನಲ್ಲಿ ನಗುತ್ತಾ ಮಲಗಿರುವ ಫೋಟೋ ಒಂದನ್ನು ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಫ್ಯಾನ್ಸ್ ಕ್ಲಬ್ ನಿಂದ ಶೇರ್ ಮಾಡಲಾಯ್ತು. ಇದನ್ನು ನೋಡಿದ ವರು ನಿಜವಾಗಲೂ ಸನ್ನಿಧಿಗೆ ಆಕ್ಸಿಡೆಂಟ್ ಆಗಿದ್ಯಾ ಅಥವಾ ಸೀರಿಯಲ್ ನಲ್ಲಾ ಎಂದು ಪ್ರಶ್ನೆ ಮಾಡುತ್ತಿದ್ದಾರಂತೆ. ಸೀರಿಯಲ್ ಸದ್ಯ ಎಲ್ಲರ ಕುತೂಹಲವನ್ನು ಹೆಚ್ಚು ಮಾಡಿದೆ. ಸಿದ್ದಾರ್ಥ ಸಿಕ್ಕಿಲ್ಲ, ರಾಧಿಕಾಗೆ ಸತ್ಯ ಗೊತ್ತಾಗಿದೆ. ಚಂದ್ರಕಾ ಆಟ ಮುಗಿಯುತ್ತದೆ. ಒಟ್ಟಾರೆ ಧಾರವಾಹಿ ಕೊನೆ ಹಂತಕ್ಕೆ ಬಂದಿದೆ. ಮುಂದೆನಾಗುತ್ತದೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
Comments