ವೇದಿಕೆ ಮೇಲಿದ್ದ ಪಿಗ್ಗಿ ಪತಿ ಮೇಲೆ ಒಳ ಉಡುಪು ಎಸೆದ ಮಹಿಳಾ ಅಭಿಮಾನಿ...!

ನಟಿ ಪ್ರಿಯಾಂಕ ಚೋಪ್ರಾ ಸಂಸಾರ ಬೀದಿಗೆ ಬಿದ್ದಾಯ್ತು. ಮದುವೆಯಾಗಿ ಇನ್ನು ತಿಂಗಳಾರು ಕಳೆದಿಲ್ಲ, ಅದಾಗಲೇ ಪಿಗ್ಗಿ ಲೈಫ್ ನಿಂದ ನಿಕ್ ದೂರವಾಗಿದ್ದಾರೆ ಎಂಬ ಸುದ್ದಿ ದಿಢೀರ್ ಅಂತಾ ಹಬ್ಬಿ ಹೋಯ್ತು. ಈ ಬಗ್ಗೆ ಪರೋಕ್ಷವಾಗಿ ನಾನು ನಿಕ್ ಚೆನ್ನಾಗಿಯೇ ಇದ್ದೇವೆ ಎಂದು ಫೋಟೋ ಹಾಕುವುದರ ಮೂಲಕ ಪಿಗ್ಗಿ ಉತ್ತರ ಕೊಟ್ಟಿದ್ದಳು. ಅಂದಹಾಗೇ ಆ ಫೋಟೋ ನಿಕ್ ಸಹೋದರನ ಮ್ಯೂಸಿಕ್ ಆಲ್ಬಂ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ತೆಗೆದಿದ್ದು. ಆ ಫೋಟೋದಲ್ಲಿ ನಿಕ್ ಕೂಡ ಇದ್ರು. ಈಗ ಅದೇ ಕಾರ್ಯಕ್ರಮದಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ.
ಮ್ಯೂಸಿಕ್ ಕಾನ್ಸರ್ಟ್‍ನಲ್ಲಿ ಮಹಿಳಾ ಅಭಿಮಾನಿಯೊಬ್ಬರು ಒಳ ಉಡುಪನ್ನು ಎಸೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಪ್ರಿಯಾಂಕಾ ಚೋಪ್ರಾ ಖುಷಿಯಿಂದ ಅದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅಂದ ಹಾಗೇ ನಿಕ್ ಜೋನಸ್ ಮತ್ತು ಸಹೋದರರೊಟ್ಟಿಗೆ ವೇದಿಕೆ ಮೇಲೆ ನಿಂತು ಕೊಂಡಿದ್ದಾರೆ. ಪ್ರಿಯಾಂಕ ಅವರು ನಿಕ್ ಅಭಿಮಾನಿಯಾಗಿ ಕೆಲಗೆ ನಿಂತಿದ್ದಾರೆ. ಈ ಕಾನ್ಸರ್ಟ್ ಕೊನೆಯಲ್ಲಿ ನಿಕ್ ಜೋನಸ್ ಮೇಲೆ ಅವರ ಮಹಿಳಾ ಅಭಿಮಾನಿ ಒಳಉಡುಪನ್ನು ಎಸೆದಿದ್ದಾರೆ. ಅಯ್ಯೋ ಅದನ್ನು ನೋಡಿದ ಪಿಗ್ಗಿ ತನ್ನ ಪತಿ ಮೇಲೆ ಒಳ ಉಡುಪನ್ನು ಎಸೆದಿದ್ದನ್ನು ಖುಷಿಯಾಗಿ ತೆಗೆದುಕೊಂಡು ಹೋಗಿದ್ದಾರೆ. ಅ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಲ್ಲದೆ ಆ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು.
Comments