ಸುಮಲತಾ ಪರ ನಾನು ಪ್ರಚಾರ ಮಾಡಲ್ಲ ಎಂದ ಸ್ಟಾರ್ ಡೈರೆಕ್ಟರ್ : ಕಾರಣ ಏನ್ ಗೊತ್ತಾ...?!!!

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಸ್ಟಾರ್ ಕ್ಯಾಂಪೇನರ್ ಶುರುವಾಗಿದೆ. ಒಂದ್ ಕಡೆ ಸುಮಲತಾ ಪರ ಪ್ರಚಾರಕ್ಕೆ ದರ್ಶನ್, ಯಶ್ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೇ…. ಅನೇಕರು ಸಾಥ್ ನೀಡುತ್ತಿದ್ದರೇ ಇತ್ತ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರು ಸುಮಲತಾ ಪರ ಮತಯಾಚನೆ ಮಾಡಲು ನಾನ್ ರೆಡಿಯಿಲ್ಲವೆಂದಿದ್ಧಾರೆ. ಮಂಡ್ಯದವರೇ ಆದ ಸ್ಟಾರ್ ನಟ ಕಮ್ ಡೈರೆಕ್ಟರ್ ಸುಮಲತಾ ಪರ ಪ್ರಚಾರ ಮಾಡಲ್ಲ ಎಂದಿದ್ದಾರೆ.
ಇದಕ್ಕೂ ಮುಂಚೆ ಅತಿ ಆಸೆ ನನಗಿಲ್ಲ ಎಂದು ಸುಮಲತಾ ಪರ ಪ್ರಚಾರ ಮಾಡೋಕೆ ಅಥವಾ ನನ್ನ ಬೆಂಬಲವಿಲ್ಲವೆಂದು ಪರೀಕ್ಷವಾಗಿ ಶಿವಣ್ಣ ಹೇಳಿದ್ದರು. ಇನ್ನು ಪುನೀತ್ ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಸದ್ಯ ಎಂದು ನಟ ಯಶ್ ಮತ್ತು ದರ್ಶನ್ ಜೊತೆ ನೆನಪಿರಲಿ ಪ್ರೇಮ್ ಕೂಡ ಮತಯಾಚಿಸುತ್ತಿದ್ದಾರೆ.ಇದೀಗ ನಟ ಕಮ್ ಸ್ಟಾರ್ ಡೈರೆಕ್ಟರ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲು ಅಲ್ಲಿನವರೇ ಆದ ನಿರ್ದೇಶಕ ಜೋಗಿ ಪ್ರೇಮ್ ಹಿಂದೇಟು ಹಾಕಿದ್ದಾರೆ. ನಟ, ನಿರ್ದೇಶಕ ಪ್ರೇಮ್, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸದಿರಲು ತೀರ್ಮಾನಿಸಿದ್ದಾರೆ.
ಮೂಲತಃ ಪ್ರೇಮ್ ಮಂಡ್ಯ ಭಾಗದವರಾದರೂ ಸುಮಲತಾ ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ. ಸುಮಲತಾ ಹಾಗೂ ಸಿಎಂ ಕುಮಾರಸ್ವಾಮಿ ಎರಡೂ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ಪ್ರೇಮ್, ಸುಮಲತಾ ಪರ ಪ್ರಚಾರ ಮಾಡಿದರೆ ಕುಮಾರಸ್ವಾಮಿಯ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತೆ. ಹಾಗಾಗಿ ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುವುದು ಬೇಡವೆಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
Comments