ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್ ಜೋಡಿ...!

ಅಂದಹಾಗೇ ಬಾಲಿವುಡ್ ನಲ್ಲಿ ಡೇಟಿಂಗ್ ಮಾಡ್ತಾಯಿದ್ದ ತಾರಾ ಜೋಡಿಯೊಂದು ಇದ್ದಕ್ಕಿದ್ದಂತೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ರಿಲೇಶನ್ ಶಿಪ್ ನಲ್ಲಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ದಿಢೀರ್ ಅಂತಾ ನಟಿ ಅಲಿಯಾ ಭಟ್ ಜೊತೆ ಈಗ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಎಂಬ ಸುದ್ದಿಯೊಂದು ಹಲವೆಡೆ ಹರಿದಾಡುತ್ತಿದೆ. ಸ್ವಿಜರ್ ಲ್ಯಾಂಡ್ ನ ಸೆಂಟ್ ಮೋರ್ಟೀಜ್ ಎಂಬಲ್ಲಿ ರಣಬೀರ್-ಅಲಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆ ಬಳಿಕ ಗ್ರಾಂಡ್ ಪಾರ್ಟಿ ಕೂಡ ಕೊಟ್ಟಿದ್ದಾರೆ ಎಂಬುದಾಗಿ ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಈ ಬಗ್ಗೆ ಇಬ್ಬರಿಂದಲೂ ಯಾವುದೇ ಸ್ಪಷ್ಟನೆ ವ್ಯಕ್ತವಾಗಿಲ್ಲ. ಆಋ್ಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಇವರಿಬ್ಬರೂ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಮತ್ತು ಅಕ್ಕಿನೇನಿ ನಾಗಾರ್ಜುನ್ ಕೂಡಾ ಅಭಿನಯಿಸಿದ್ದಾರೆ. ಅಂದಹಾಗೇ ಇತ್ತಿಚಿಗೆ ಅಲಿಯಾ ಮತ್ತು ರಣಬೀರ್ ಯುವ ಸ್ಟಾರ್ ಎಂದು ಕರೆದಿದ್ದಕ್ಕೆ ಕ್ವೀನ್ ಕಂಗನಾ ಸಿಡಿದೆದ್ದಿದ್ದರು. ಇತ್ತೀಚೆಗೆ ಆಲಿಯಾ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.
Comments