ಪ್ರಚಾರ ಮಾಡುತ್ತಿದ್ದ ವೇಳೆ ದರ್ಶನ್’ಗೆ ಸಿಕ್ತು ಮಹಿಳೆಯಿಂದ ಬಿಗ್ ಸರ್ಪ್ರೈಸ್..!!!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಡು ಬಿಸಿಲಿನಲ್ಲೇ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಸದಾ ಏಸಿಯಲ್ಲಿ ಇರುತ್ತಿದ್ದ ದಾಸ ಮುಖದಲ್ಲಿ ಬೆವರಿಳಿಯುತ್ತಿದ್ದರೂ ಲೆಕ್ಕಿಸದೇ ಸುಮಲತಾ ಅಮ್ಮನ ಪರ ಪ್ರಚಾರ ಮಾಡುತ್ತಿದ್ದರು. ದರ್ಶನ್ ಹೋದಯೆಡೆಯೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ಸುಡು ಬಿಸಿಲನ್ನು ಲೆಕ್ಕಿಸದೇ ಚಾಲೆಂಜಿಂಗ್ ಸ್ಟಾರ್ ಅನ್ನು ಬರ ಮಾಡಿಕೊಂಡಿದ್ದಾರೆ. ಡಿ ಬಾಸ್ ಡಿ ಬಾಸ್ ಎಂದು ಅಭಿಮಾನಿಗಳ ಕೂಗಿಗೆ ಯಜಮಾನ ಫುಲ್ ಫಿದಾ ಆಗಿದ್ದಾರೆ.
ಈಗಾಗಲೇ ನಿನ್ನೆಯಿಂದಲೇ ಪ್ರಚಾರ ಮಾಡಲು ಶುರು ಮಾಡಿಕೊಂಡಿರುವ ದರ್ಶನ್ ಗೆ ಮಂಡ್ಯದ ಜನ ಸಾಥ್ ಕೊಡುತ್ತಿದ್ದಾರೆ. ತೆರೆದ ವಾಹನದ ಮೂಲಕ ಜನರಿಗೆ ಕೈ ಬೀಸಿ, ಬಳಿ ಬಂದವರಿಗೆ ಸೆಲ್ಫಿಗೆ ಪೋಸ್ ಕೊಡುತ್ತಾ ಮುಮದೆ ಸಾಗುತ್ತಿದ್ದಾರೆ. ಇದೇ ವೇಳೆ ದರ್ಶನ್ ಮಹಿಳಾ ಅಭಿಮಾನಿಯೊಬ್ಬಳು, ದರ್ಶನ್ ಪ್ರಚಾರ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಕೋರಿಕೆಯೊಂದನ್ನು ಹೇಳಿಕೊಂಡಿದ್ದಾರೆ. ನೀವು ಅನುಮತಿ ಕೊಡುವುದಾದರೆ ಎಂದು ಕೇಳಿದ ಅಭಿಮಾನಿಗೆ ದರ್ಶನ್ ಓಕೆ ಎಂದಿದ್ದಾರೆ. ಊರಿನ ಕೆಲ ಮಹಿಳಾ ಅಭಿಮಾನಿಗಳು ಪ್ರೀತಿಯ ಸ್ಟಾರ್ ನಟನಿಗೆ ಕವಿತೆಯೊಂದನ್ನು ಅರ್ಪಿಸಿದ್ದಾರೆ.
ಎಲ್ಲರ ಸಮ್ಮುಖದಲ್ಲಿ ವಾಹನ ಮೇಲೆ ಬಂದು ಮೈಕ್ ಹಿಡಿದು ದರ್ಶನ್ ಬಗ್ಗೆ ಹಾಡಿ ಹೊಗಳಿದ ಕವಿತೆಯನ್ನು ವಾಚಿಸಿದ್ದಾರೆ. ಇದೇ ನಿಮಗೆ ನಾವು ನೀಡುವ ಗಿಫ್ಟ್ ಎಂದಿದ್ದಾರೆ.ಮಹಿಳಾ ಅಭಿಮಾನಿಯ ಕವಿತೆಗೆ ನಾಚಿ ನೀರಾದ ದರ್ಶನ್ ಥ್ಯಾಂಕ್ಸ್ ಅಮ್ಮ, ನಿಮ್ಮ ಅಭಿಮಾನ ನನ್ನ ಮೇಲೆ ಸದಾ ಇರಲಿ ಎಂದು ಮುಂದೆ ನಡೆದಿದ್ದಾರೆ. ಅಷ್ಟೇ ಅಲ್ಲಾ ಊರೊಂದರಲ್ಲಿ ತಂಬಿಟ್ಟು ತಿನ್ನಬೇಕೆಂದು ಆಶಿಸಿದ ದರ್ಶನ್’ ತಂಬಿಟ್ಟು ತಿಂದು ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
Comments