‘ಪ್ರೇಮ್ ನೀನು ನನಗೆ ಒಳ್ಳೆಯ ಗಂಡನಲ್ಲ ನಿಜವಾಗಲು ಹೇಳ್ತೀನಿ’….
ರಕ್ಷಿತಾ ಮನೆಯಿಂದ ಮತ್ತೊಂದು ಕುಡಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಅನ್ನು ಮದುವೆಯಾದ ನಟಿ ರಕ್ಷಿತಾ ಇದೀಗ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ನಿಜವಾಗಲು ಹೇಳುತ್ತಿದ್ದೀನಿ ಸ್ಟಾರ್ ಡೈರೆಕ್ಟರ್ ಪ್ರೇಮ್ ನನಗೆ ಒಳ್ಳೆಯ ಗಂಡನಲ್ಲ, ವೇದಿಕೆ ಮೇಲೆ ಬಹಿರಂಗವಾಗಿಯೇ ಹೇಳಿದ್ದಾರೆ ಕ್ರೇಜಿ ಕ್ವೀನ್ ರಕ್ಷಿತಾ… ಕಲಾಸಿ ಪಾಳ್ಯದ ಈ ಕ್ವೀನ್ ಮಾತು ಕೇಳಿ ಕ್ಷಣ ಶಾಕ್ ಆಗಿದ್ದಂತೂ ನಿಜ….ಆಕೆ ಹೇಳಿದ್ದೇನು ಗೊತ್ತಾ..? ರಕ್ಷಿತಾ ಸಹೋದರ ಅಭಿಷೇಕ್ ರಾಣಾ ನಾಗಿ ಏಕ್ ಲವ್ ಯಾ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ರಕ್ಷಿತಾ, ಪ್ರೇಮ್ ಸ್ಯಾಂಡಲ್‌ವುಡ್‌ನ ಮೋಸ್ಟ್ ಬೆಸ್ಟ್ ಕಪಲ್. ಆದರೆ ಇದ್ದಕ್ಕಿದಂತೇ ರಕ್ಷಿತಾ ಯಾಕ್ ಹೀಗೆ ಹೇಳ್ತಿದ್ದಾರೆ....?
ಭಾವ ಮೈದುನನನಿಗಾಗಿ ಪ್ರೇಮ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬಹಳ ಪರಿಶ್ರಮಿಸಿ ಒಂದು ಕಥೆ ರೆಡಿ ಮಾಡಿದ್ದಾರೆ. ರಕ್ಷಿತಾ ಸಹೋದರನಿಗಾಗಿಯೇ ಕಥೆ ಬರೆದಿದ್ದು , ಅದರ ಟೈಟಲ್ ಲಾಂಚ್ ಮಾಡೋ ಸಂದರ್ಭದಲ್ಲಿ ಪ್ರೇಮ್ ಬಗ್ಗೆ ಮಾತನಾಡಿದ್ದಾರೆ ರಕ್ಷಿತಾ. ಅಂದಹಾಗೇ ರಕ್ಷಿತಾ ಹೇಳಿದ್ದು ಹೀಗೆ,… ಪ್ರೇಮ್ ನನಗೆ ಒಳ್ಳೆಯ ಗಂಡನಲ್ಲ, ಆದರೆ ಒಳ್ಳೆಯ ಸಿನಿಮಾ ನಿರ್ದೇಶಕ.‘ನಾ ಎಲ್ಲದಕ್ಕೂ ಮೊದಲು ಪ್ರೇಮ್‌ಗೆ ಥ್ಯಾಂಕ್ಸ್ ಹೇಳಬೇಕು. ಯಾಕಂದ್ರೆ ನನಗೆ ಪ್ರೇಮ್ ಬಗ್ಗೆ ತುಂಬಾ ಇಷ್ಟವಾಗೋ ವಿಚಾರ ಅಂದ್ರೆ, ಯಾರದ್ರೂ ಕಾಲೆಳೆದ್ರೆ, ಅವರ ಮಾತುಗಳನ್ನೇ ಮೆಟ್ಟಿಲುಗಳನ್ನ ಮಾಡ್ಕೊಂಡು ಇಂದಿಗೂ ಮೇಲೆ ಮೇಲೆ ಹೋಗ್ತಾನೆ ಇದ್ದಾರೆ. ನಿನ್ನ ಫ್ಯಾನ್ ಆಗಿ ಹೇಳ್ತಿನಿ. ನೀನೆಷ್ಟು ಕಷ್ಟ ಪಡ್ತಿಯಾ, ನಂಗೆ ನನ್ನ ಮಗನಿಗೆ ಟೈಂ ಕೊಡದೇ ಇದ್ರೂ ಸಿನಿಮಾಗಾಗಿ ಟೈಂ ಕೊಡ್ತಿಯಾ. ನೀನು ಒಳ್ಳೇ ಗಂಡನಲ್ಲ ಆದ್ರೆ ತುಂಬಾ ಒಳ್ಳೇ ನಿರ್ದೇಶಕ’ ಎಂದರು. ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಹೆಮ್ಮೆಯ ನಿರ್ದೇಶಕರಲ್ಲಿ ನೀನು ಒಬ್ಬ. ನನಗೆ ಗೊತ್ತಿದೆ ನೀನೆಂಥಾ ಹಾರ್ಡ್ ವರ್ಕರ್ ಎಂದು ಗಂಡನ ಮೇಲಿನ ಅಭಿಮಾನವನ್ನು ರಕ್ಷಿತಾ ಕೊಂಡಾಡಿದ್ದಾರೆ.
Comments