ರಶ್ಮಿಕಾ ಅಭಿಮಾನಿಗಳ ಮೇಲೆ ನಟ ವಿಜಯ್ ದೇವರಕೊಂಡಾ ಆಕ್ರೋಶ…!!!
ನಟ ರಕ್ಷಿತ್ ಶೆಟ್ಟಿಯ ಪ್ರೀತಿಯಿಂದ ಬ್ರೇಕಪ್ ಆಗಿ ರಶ್ಮಿಕಾ ತೆಲುಗಿನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದರೂ ಆಕೆಯನ್ನು ವಿರೋಧಿಸುವವರ ಸಂಖ್ಯೆ ಏನು ಕಡಿಮೆ ಇಲ್ಲ.ಈ ಹಿಂದೆ ರಶ್ಮಿಕಾ ಹಲವು ಬಾರಿ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ರೂ ಆಕೆಯನ್ನು ಕಾಲೆಳೆಯುವುದನ್ನು ಬಿಟ್ಟಿಲ್ಲ. ಕೊನೆಗೆ ರಶ್ಮಿಕಾ ನಾನು ಯಾರಿಗಾದರೂ ಮುತ್ತು ಕೊಡ್ತೀನಿ, ನನ್ನ ಮುತ್ತು, ನನ್ನ ಲಿಪ್ಸ್ ಎಂದು ಟ್ರೋಲಿಗರಿಗೆ ಟಾಂಗ್ ಕೊಟ್ಟಳು. ಆದರೆ ಇದೀಗ ರಶ್ಮಿಕಾ ಅಭಿಮಾನಿಗಳ ಮೇಲೆ ನಟ ವಿಜಯ್ ದೇವರಕೊಂಡಾ ಬೇಸರಿಸಿಕೊಂಡಿದ್ದಾರೆ.
ಇತ್ತೀಚೆಗೆ ಡಿಯರ್ ಕಾಮ್ರೇಡ್ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಗೊತ್ತೇ ಇದೆ. ಅದರಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಲಿಪ್ ಲಾಕ್ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಯ್ತು. ಈ ಟ್ರೊಲ್ ಬಗ್ಗೆ ಮಾತನಾಡುತ್ತಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಹಾಗೂ ರಶ್ಮಿಕಾ ಫ್ಯಾನ್ಸ್ ಕ್ಲಬ್ ಹೆಚ್ಚು ಆ್ಯಕ್ಟೀವ್ ಇದ್ದು ಯಾವುದೇ ವಿಚಾರವಿದ್ರೂ ಚರ್ಚೆ ಆಗುತ್ತದೆ. ಖಾಸಗಿ ವೆಬ್ ಸೈಟ್ ನಡೆಸಿದ ಸಂದರ್ಶನದಲ್ಲಿ ವಿಜಯ್ ಮಾತನಾಡುತ್ತಾ, 'ರಶ್ಮಿಕಾ ಫ್ಯಾನ್ಸ್ ಇಂತಹ ವಿಚಾರವನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡಿರುವುದು ಸ್ವಲ್ಪ ಬೇಸರವಾಗಿದೆ. ರಶ್ಮಿಕಾ ಒಳ್ಳೆಯ ಕಲಾವಿದೆ. ಪ್ರತಿಭಾವಂತೆ.
ಚಿಕ್ಕ ವಯಸ್ಸಿನಲ್ಲೇ ಅತೀ ಹೆಚ್ಚು ಖ್ಯಾತಿ ಪಡೆದವರು. ಆದರೆ ನನ್ನ ಬಗ್ಗೆ ಮಾತನಾಡಿದರೇ ಓಕೆ, ಯಾವುದೇ ತೊಂದರೆ ಇಲ್ಲ ಆದರೆ ರಶ್ಮಿಕಾಗೆ ಇದರಿಂದ ಕೆಟ್ಟ ಹೆಸರು ಬರಬಾರದಷ್ಟೆ ಎಂದು ಹೇಳಿದ್ದಾರೆ. ಪ್ರತೀ ಸಲ ರಶ್ಮಿಕಾ ಟ್ರೋಲ್ಗೆ ಒಳಗಾಗಿ ಮನಸ್ಸಿಗೆ ಬೇಸರ ಮಾಡಿಕೊಳ್ಳೋದು ಎಷ್ಟು ಸರಿ ಎಂದು ಪರೋಕ್ಷವಾಗಿ ಕನ್ನಡಿಗಾಭಿಮಾನಿಗಳ ಮೇಲೆ ಬೇಸರ ಮಾಡಿಕೊಂಡಿದ್ದಾರೆ ನಟ ವಿಜಯ್ ದೇವರಕೊಂಡ. ಗೀತಾ ಗೋವಿಂದಂ ಆಯ್ತು ಈಗ ಡೇವಿಡ್ ಕಾಮ್ರೇಡ್ ನ್ನು ಅಲ್ಲೆಗೆಳೆಯುವುದು ಸರಿ ಅಲ್ಲ ಎಂದಿದ್ದಾರೆ. ಪ್ರತೀ ದಿನ ಒಳ್ಳೆಯ ವಿಚಾರದ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಸುಖಾ ಸುಮ್ಮನೇ ಗಾಸಿಪ್ ಹಬ್ಬಿಸೋದನ್ನು ಬಿಡಿ ಎಂದು ಕಿವಿ ಮಾತು ಹೇಳಿದ್ದಾರೆ. 'ಚರ್ಚೆ ಮಾಡುವುದಕ್ಕೆ ದೇಶದಲ್ಲಿ ಆಗುತ್ತಿರುವ ಎಷ್ಟೋ ವಿಚಾರಗಳಿದೆ. ಅದನ್ನು ಬಿಟ್ಟು ಸಿನಿಮಾದಲ್ಲಿ ಅಭಿನಯಿಸುವ ಕಿಸ್ ಸೀನ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ'ಎಂದಿದ್ದಾರೆ.
Comments