ಮಗಳ ಫೋಟೋ ಯಾವಾಗ ರಿಲೀಸ್ ಮಾಡ್ತೀರಾ ಎಂದಿದ್ದಕ್ಕೆ ಸ್ಯಾಂಡಲ್ ‘ವುಡ್ ಸಿಂಡ್ರೆಲಾ ಹೇಳಿದ್ದೇನು ಗೊತ್ತಾ..?
ರಾಕಿಂಗ್ ಸ್ಟಾರ್ ಮತ್ತು ಯಶ್ ಜೋಡಿಗೆ ಸದ್ಯ ಒಂದು ಮುದ್ದಾದ ಹೆಣ್ಣು ಮಗು ಇದೆ. ಈಗಾಗಲೇ ಈ ಸ್ಟಾರ್ ಜೋಡಿ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಧಿಕಾ ಪಂಡಿತ್ ಶಾರ್ಟ್ ಮೂವಿ ಲಾಂಚ್'ವೊಂದರ ಸಮಯದಲ್ಲಿ ಫಸ್ಟ್ ಟೈಮ್ ಮಾತನಾಡಿದ್ದಾರೆ. ಇನ್ನೂ ಹೆಸರಿಡದ ಆ ಮುದ್ದು ಕಂದಮ್ಮನನ್ನು ಮಿಡಿಯಾಗೆ ತೋರಿಸಿಲ್ಲ ಯಾಕೆ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ.... ರಾಧಿಕಾ ಪಂಡಿತ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಒಂದಷ್ಟು ಸುದ್ದಿ ನೋಡಿದೆ. ಮಗುವಿಗೆ ಹೆಸರೇ ಇಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿಸಿ ಬಿಟ್ಟಿದ್ದಾರೆ. ಆದರೆ ಎಲ್ಲಾ ಸುಳ್ಳು.
ಕೆಲ ಫ್ಯಾನ್ಸ್ ಮಗುವಿಗೆ ಹೆಸರು ಸಜೆಸ್ಟ್ ಮಾಡಿದ್ದಾರೆ. ನಾವು ಇನ್ನು ಯಾವುದನ್ನು ಕನ್ಫರ್ಮ್ ಮಾಡಿಲ್ಲ.ಅಷ್ಟೇ ಅಲ್ಲ, ನಮ್ಮ ಮಗುವೆಂದು ಬೇರೆ ಮಕ್ಕಳ ಫೋಟೋ ಹಾಕುತ್ತಿದ್ದಾರೆ. ನಾನು ಸೊಶಿಯಲ್ ಮಿಡಿಯಾದಲ್ಲಿ ಗಮನಿಸಿದ್ದೇನೆ. ಅದ್ಯಾವುದು ನಮ್ಮ ಮಗು ಫೋಟೋವಲ್ಲ. ನಾವ್ ಇನ್ನು ನನ್ನ ಮಗುವಿನ ಫೋಟೋ ರಿಲೀಸ್ ಮಾಡಿಲ್ಲ ಎಂದಿದ್ದಾರೆ. ಒಂದು ಸಾರಿ ಮಗುವಿನ ಮುಖ ತೋರಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಅಪ್ಲೋಡ್ ಮಾಡ್ತೀರಾ ಎಂದು ಕೇಳಿದ್ರೆ,…ರಾಧಿಕಾ -ಯಶ್ ಪಾಪು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಫೋಟೋಗಳು ಹರಿದಾಡ್ತಿದೆ. ಎಲ್ಲಾ ಪಾಪುಗಳು ಒಂದಕ್ಕಿಂತ ಒಂದು ಮುದ್ದಾಗಿವೆ. ಆದ್ರೆ ಅದ್ಯಾವುದೂ ನಮ್ಮ ಮಗುವಿನ ಫೋಟೋ ಅಲ್ಲ ಅಂತ ಹೇಳಿದ್ರು.
ನಾವು ನಮ್ಮ ಪಾಪು ಫೋಟೋ ಇನ್ನೂ ರಿಲೀಸ್ ಮಾಡಿಲ್ಲ. ಒಂದು ಕರೆಕ್ಟ್ ಟೈಂಗೆ, ಒಂದ್ ಬ್ಯಾಂಗ್‌ನಲ್ಲಿ ರಿಲೀಸ್ ಮಾಡೋಣ ಅಂತಾ ನಾವಿದ್ದೀವಿ. ನಾವ್ ಇದುವರೆಗೂ ಏನೇ ಅನೌನ್ಸ್ ಮಾಡಿದ್ರೂ ತುಂಬಾ ಚೆನ್ನಾಗೇ ಮಾಡಿದ್ದೀವಿ ಅಲ್ವಾ? ನಮ್ ರಿಲೇಶನ್‌ಶಿಪ್ ಆಗಲಿ, ಮದುವೆ ವಿಷ್ಯ, ಮಗು ಆಗ್ತಿರೋ ವಿಷ್ಯ, ಹಾಗೇ ಮಗು ಹೆಸ್ರು ಕೂಡ ಯಾಕೆ ಇಷ್ಟೇ ಸ್ಪೆಷಲ್ ಆಗಿ ಹೇಳಬಾರದು ಅನ್ನೋ ಪ್ಲಾನ್ ನಲ್ಲಿದ್ದೀವಿ ಅಂದ್ರು ಅಂದಹಾಗೇ ನಾವು ಏನೇ ಮಾಡಿದ್ರು ಕೆಲ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡೇ ಮಾಡಿದ್ದೀವಿ. ಇದಕ್ಕೂ ಟೈಮ್ ಬಂದಾಗ ಖಂಡಿತಾ ಓಪನ್ ಮಾಡ್ತೀವಿ ಎಂದಿದ್ದಾರೆ. ಅಷ್ಟೇ ಅಲ್ಲಾ ಯಶ್, ಮಗಳು ಥೇಟ್ ಯಶ್ ಥರಾನೇ ಇದ್ದಾಳಂತೆ. ಇದು ರಾಧಿಕಾ ಹೇಳಿದ ಮಾತು.
Comments