ಪ್ರಚಾರದ ನಡುವೆಯೂ ಸ್ನೇಹಿತನ ಸಿನಿಮಾ ನೋಡ್ತಾರಂತೆ ದರ್ಶನ್..!
ಲೋಕಸಭೆ ಚುನಾವಣೆಯ ನಡುವೆ ಸಿನಿಮಾ ಶೆಡ್ಯೂಲ್'ಗಳ ಬ್ಯುಸಿ ಬೇರೆ. ಇದರ ಮಧ್ಯೆ ಕ್ಯಾಂಪೇನ್'ಗೆ ಹೋದಾಗ ಅಭಿಮಾನಿಗಳ ಜೊತೆ ಸೆಲ್ಫಿ, ಫೋಟೋ ಅಂತೆ...ಸದ್ಯಕ್ಕಂತೂ ಡಿ ಬಾಸ್ ದರ್ಶನ್ ಫುಲ್ ಬ್ಯುಸಿ. ಲೋಕ ಸಮರ ಹತ್ತಿರವಾಗುತ್ತಿದ್ದಂತೇ ಮಂಡ್ಯದ ಅಖಾಡ ಭರ್ಜರಿ ಸಿದ್ಧತೆ ಗೊಂಡಿದೆ. ಇಂದಿನಿಂದ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ದರ್ಶನ್ ಹಳ್ಳಿ ಹಳ್ಳಿಗಳಲ್ಲಿ ಮತ ಪ್ರಚಾರ ಕೈಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನದ ಮೇರೆಗೆ ಡಿ ಬಾಸ್ ಅವರು ಸ್ನೇಹಿತನ ಸಿನಿಮಾ ನೋಡಲು ಒಪ್ಪಿಕೊಂಡಿದ್ದಾರಂತೆ.
ನಾಳೆ ಮಂಡ್ಯ ತಾಲ್ಲೂಕಿನ ಮಳವಳ್ಳಿಯ ಜನತೆ ಜೊತೆ ಕುಳಿತು ವಿನೋದ್ ಪ್ರಭಾಕರ್ ನಟನೆಯ 'ರಗಡ್' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಈಗಾಗಲೇ ಚಿತ್ರ ತೆರೆಕಂಡು ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣ್ತಿದ್ದು, ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಚಿತ್ರದಲ್ಲಿ ವಿನೋದ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಸ್ನೇಹಿತನಾಗಿರುವ ವಿನೋದ್ ಪ್ರಭಾಕರ್' ಅವರ ಸಿನಿಮಾ ನೋಡೋಕೆ ಬಹಳ ದಿನಗಳಿಂದ ಕಾಯ್ತಾ ಇದ್ರಂತೆ ದರ್ಶನ್.ಈ ಹಿಂದೆ ರಗಡ್ ಸಿನಿಮಾದ ಟ್ರೈಲರ್ ಕೂಡ ಲಾಂಚ್ ಮಾಡಿ ಕುಚಿಕು ಗೆಳೆಯನ ಸಿನಿಮಾಗೆ ಶುಭ ಹಾರೈಸಿದ್ರು ದರ್ಶನ್. ಇಂದಿನಿಂದ ದರ್ಶನ್ ಅವರು ಪ್ರಚಾರಕ್ಕೆ ಬಂದಿದ್ರೆ ನಾಳೆಯಿಂದ ರಾಕಿಂಗ್ ಸ್ಟಾರ್ ಯಶ್ ಕೂಡ ಆಗಮಿಸಲಿದ್ದಾರೆ.
Comments