ಡಿವೋರ್ಸ್ ವಿಚಾರವಾಗಿ ಫೋಟೋ ಹಾಕಿ ಪರೋಕ್ಷವಾಗಿ ಟಾಂಗ್ ಕೊಟ್ಟಳು ಪಿಗ್ಗಿ…! ಏನ್ ಗೊತ್ತಾ..?!!!

ಮದುವೆಯಾಗಿ ಕೆಲ ತಿಂಗಳುಗಳಷ್ಟೇ ಕಳೆದಿದ್ದು ಅದಾಗಲೇ ಪಿಗ್ಗಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಸಂಸಾರದಲ್ಲಿ ಒಡಕು ಮೂಡಿದೆ. ಅದಾಗಲೇ ಇಬ್ಬರು ಡಿವೋರ್ಸ್ ಗೆ ಅಪ್ಲೈ ಮಾಡಿದ್ದಾರೆ ಎಂಬ ಶಾಂಕಿಂಗ್ ಸುದ್ದಿ ಬಿ ಟೌನ್ ನಷ್ಟೇ ಅಲ್ಲಾ ಹಾಲಿವುಡ್ ತನಕವೂ ಮುಟ್ಟಿದೆ. ಈ ಬಗ್ಗೆ ಪಿಗ್ಗಿ ಆಪ್ತರು ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದನ್ನು ಬಿಟ್ಟರೇ ಪ್ರಿಯಾಂಕಳಾಗಲೀ ನಿಕ್ ಆಗಲೀ ಡಿವೋರ್ಸ್ ವಿಚಾರವಾಗಿ ಪ್ರತಿಕ್ರಿಯೆ ನಿಡಿರಲಿಲ್ಲ.
ಆದರೆ ದೇಶಿ ಗರ್ಲ್ ಪಿಗ್ಗಿ ಸದ್ಯ ಡಿವೋರ್ಸ್ ವಿಚಾರವಾಗಿ ಪರೋಕ್ಷವಾಗಿ ರಿಯಾಕ್ಟ್ ಮಾಡಿದ್ದಾಳೆ. ಏನ್ ಗೊತ್ತಾ..?ನಿಕ್ ಸಹೋದರರಾದ ಜಿಯೋ ಹಾಗೂ ಕೆವಿನ್ ಜೋನ್ಸ್ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿದ ಕೆಲ ಅಭಿಮಾನಿಗಳು ನಿಕ್ ಮತ್ತು ಪಿಗ್ಗಿ ನಡುವೆ ಯಾವ ಭಿನ್ನಾಭಿಪ್ರಾಯಗಳಿಲ್ಲ.
ಇದಕ್ಕೆ ಸಾಕ್ಷಿಯೇ ಈ ಫೋಟೋ ಎಂದು ಒಂದಷ್ಟು ಮಂದಿ ಹೇಳಿದ್ರೆ, ಇಲ್ಲಾ...ನಮ್ಮಲ್ಲಿ ಅಂತಹ ಭಿನ್ನಾಭಿಪ್ರಾಯವಿಲ್ಲವೆಂದು ಈಕೆ ನೇರವಾಗಿ ಹೇಳಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ. ಆದರೆ ಇದು ಸುಳ್ಳು ವದಂತಿ ಇರಬಹುದೇನೋ,…ಎಂದವರೇ ಹೆಚ್ಚು ಏಕೆಂದರೇನಿಕ್ ಸಹೋದರನ ಶೋ ನಲ್ಲಿ ನಾನು ಭಾಗವಹಿಸಿದ್ದು ಮರೆಯಲಾಗದ ಕ್ಷಣ. ಈ ಹುಡುಗನ ಬಗ್ಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ನಿಕ್ ಕೂಡ ಇದ್ದಾರೆ. ಬಾಲಿವುಡ್ ನಲ್ಲಿ ಗಾಸಿಪ್ ಗಳಿಗೇನು ಬರವಿಲ್ಲ. ಪಿಗ್ಗಿ ಡಿವೋರ್ಸ್ ಕೂಡ ಗಾಸಿಪ್ ಆಗಿರಬಹುದು...ಅಲ್ಲವೇ.
Comments