ಪ್ರೇಮಿಗಳಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ ಈ ಸ್ಟಾರ್ ಕಪಲ್…!!

ಅಂದಹಾಗೇ ಸ್ಯಾಂಡಲ್ ವುಡ್’ನ ಸ್ಟಾರ್ ಜೋಡಿಯೊಂದು ಬೇಸಿಗೆ ರಜಾ ಕಳೆಯಲು ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಮದುವೆಯಾಗಿ ಮೂರು ವರ್ಷವಾದ್ರೂ ಇನ್ನು ಲವ್ ಬರ್ಡ್ಸ್ ಥರಾ ಫೀಲ್ ಮಾಡೋ ಈ ಕ್ಯೂಟ್ ಕಪಲ್ ಯಾರು ಗೊತ್ತಾ…? ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ. ಇವರು ಮದುವೆ ಸಮಯದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿರಲಿಲ್ಲ. ಇದರಿಂದ, ಅದೊಂದು ಫೀಲ್ ನಮಗೆ ಆಗ್ತಾ ಇತ್ತು ಎನ್ನುತ್ತಿದ್ದ ಈ ಕಪಲ್ ಮದುಬೆಯಾಗಿ ವರ್ಷ ಕಳೆದ ಮೇಲೆ ಫೋಟೋ ಶೂಟ್ ಮಾಡಿಸಿದ್ದರಂತೆ. ನಾವ್ ಯಾರ್ ಬಗ್ಗೆ ಮಾತಾಡ್ತಿದ್ದೀವಿ ಅಂತಾ ಯೋಚಿಸ್ತಿದ್ದೀರಾ…?
ಸ್ಯಾಂಡಲ್ ವುಡ್'ನ ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ಮತ್ತು ಪತ್ನಿ ರಾಗಿಣಿ ಬಗ್ಗೆ. ಇತ್ತೀಚಿಗೆ ನಟ ದೇವರಾಜ್ ಸೊಸೆ ರಾಗಿಣಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆಂಬ ಸುದ್ದಿ ಕೇಳಿ ಒಂದಷ್ಟು ಮಂದಿ ಶಾಕ್ ಆಗಿದ್ದರು. ಆ ನಂತರ ಗೊತ್ತಾಯ್ತು ಆಕೆ ಸಿನಿಮಾದಲ್ಲಿ ನಟಿಸ್ತಾ ಇದ್ದಾಳೆ ಎಂದು ಆದರೆ ರಾಗಿಣಿ ಬೇಸಿಕಲೀ ಮಾಡೆಲಿಂಗ್ ಕ್ಷೇತ್ರದವಳು. ಒಂದಷ್ಟು ಕಿರು ಚಿತ್ರದಲ್ಲಿಯೂ ಕೂಡ ನಟಿಸಿದ್ದವಳು. ಸದ್ಯಕ್ಕೆ ಅಂತಹದ್ದೇ ಒಂದು ಕಿರು ಚಿತ್ರದಲ್ಲಿ ನಟಿಸೋಕೆ ರಾಗಿಣಿ ಬಣ್ಣ ಹಚ್ಚಿದ್ದಾಳೆ. ಅಲ್ಲಾ ರೀ ಈ ಜೋಡಿ ಇದೀಗ ದೇಶ ಸುತ್ತುತ್ತಿದ್ದಾರಂತೆ. ಗೂಗಲ್ ನೋಡಿ ಎಂಜಾಯ್ ಮಾಡೋಕ್ಕಿಂತ ಲೈವ್ ಆಗಿ ಆ ಸ್ಥಳಗಳಿಗೆ ಭೇಟಿ ಕೊಟ್ಟು ವೀಕ್ಷಿಸಿವುದು ಎಷ್ಟು ಎಂಜಾಯ್ ಗೊತ್ತಾ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.
ಇತ್ತೀಚಿಗೆ ತಮ್ಮ ಮೂರನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.ಸ್ಕೂಲ್ ಡೇಸ್ ನಿಂದಲೇ ಇಬ್ಬರು ಫ್ರೆಂಡ್ಸ್ ಆಗಿದ್ದ ಕಾರಣ, ಇಬ್ಬರ ಪ್ರೀತಿಗೆ ಕುಟುಂಬದಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಒಂದೇ ಫ್ರೆಂಡ್ಸ್ ಗ್ರೂಪ್ನಲ್ಲಿರುವ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಸೆಮಣೆ ತನಕ ಬಂದು ಸುಖಾಂತ್ಯ ಕಂಡಿತು. ರಾಗಿಣಿ ಚಂದ್ರನ್ ಮತ್ತು ಪ್ರಜ್ವಲ್ ದೇವರಾಜ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಹತ್ತು ದಿನ ರಜೆ ಕಳೆಯಲು ವಿದೇಶಕ್ಕೆ ಹೋಗಿದ್ದಾರೆ.
ಸಿನಿಮಾ ಶೆಡ್ಯೂಲ್ ಬ್ಯುಸಿ ನಡುವೆ ನಮಗೆ ಅಂತಹ ಒಂದಷ್ಟು ಟೈಮ್ ಎತ್ತಿಡಬೇಕು ಎನ್ನುವ ಈ ಜೋಡಿ ಸಿಕ್ಕಾಪಟ್ಟೆ ಎಂಜಾಯ್ ಮೂಡ್ ನಲ್ಲಿದ್ದಾರೆ. ರಾಗಿಣಿ ಚಂದ್ರನ್ ಅವರನ್ನ ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ನೋಡಿದ್ದು 9ನೇ ಕ್ಲಾಸ್ನಲ್ಲಿದ್ದಾಗ, ರಾಗಿಣಿ ಚಂದ್ರನ್ ಆಗಿನ್ನೂ 6ನೇ ಕ್ಲಾಸ್ನಲ್ಲಿದ್ದರಂತೆ.
Comments