'ಮಗಳೇ' ಎಂದು ಕರೆದು ಆಕೆಯನ್ನೇ ಮದುವೆಯಾದ ಸ್ಟಾರ್ ನಟ....

ಅಂದು ನಾನು ಮುಂದೊಂದು ದಿನ ಇವಳನ್ನೇ ಮದುವೆಯಾಗುತ್ತೇನೆ ಎಂದು ಆ ಸ್ಟಾರ್ ನಟ ಅಂದುಕೊಂಡಿರಲಿಲ್ಲವೇನೋ,,,ಹಾಗಾಗಿ ಆಕೆ ನಟನ ಮದುವೆ ನೋಡಲು ಬಂದಿದ್ದಳು. ನವ ಜೋಡಿಗೆಮದುವೆ ವಿಶ್ ಮಾಡಿದ್ದಕ್ಕೆ 'ಥ್ಯಾಂಕ್ಯು ಮಗಳೆ' ಎಂದು ಪ್ರತಿಕ್ರಿಯಿಸಿದ್ದರಂತೆ ಆ ಸ್ಟಾರ್ ನಟ. ಅದು ಎಂತಹ ಸಂದರ್ಭದಲ್ಲಿ ಗೊತ್ತಾ..? ತನ್ನ ಮದುವೆಗೆ ಬಂದು ವಿಶ್ ಮಾಡಿದ ಆ ಹುಡುಗಿಯನ್ನೇ ಲವ್ ಮಾಡಿದ್ರಂತೆ ಈ ಖ್ಯಾತ ನಟ...? ಅಂದಹಾಗೇ ಆ ನಟ ಬೇರೆ ಯಾರು ಅಲ್ಲಾ...ಎರಡು ಮದುವೆಯಾಗಿರುವ ಸೈಫ್ ಅಲಿಖಾನ್ ಸದ್ಯ ಕರೀನಾ ಜೊತೆ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರ ದಾಂಪತ್ಯಕ್ಕೆ ಮುದ್ದಾದ ಮಗು ಕೂಡ ಇದೆ....ಆದರೆ
ಅಂದಹಾಗೇ ನಟ ಸೈಪ್ ಅಲಿಖಾನ್ ತನ್ನ 21 ನೇ ವಯಸ್ಸಿನಲ್ಲಿ ಅಂದರೆ 1991 ರಲ್ಲಿ ನಟಿ ಅಮೃತಾ ಸಿಂಗ್ ರನ್ನು ಮದುವೆಯಾದರು. ಆವಾಗ ಆಕೆಗೆ 33 ವರ್ಷ ವಯಸ್ಸಾಗಿತ್ತು. 1990 ರಲ್ಲಿ ರಿಲೀಸ್ ಆದ ಚೋಟೆ ನವಾಬ್ ರ ಚೊಚ್ಚಲ ಚಲನಚಿತ್ರವಾದ ‘ಬೆಖುದಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರೂ ಪರಸ್ಪರ ಆಕರ್ಷಿತರಾದರು.ಸಿನಿಮಾವೊಂದರ ಫೋಟೋಶೂಟ್ ನಡೆಸುವಾಗ ಅಮೃತಾ ಸಿಂಗ್ ಮತ್ತು ಸೈಫ್ ನಡುವೆ ಆತ್ಮೀಯ ಸಂಬಂಧ ಬೆಳೆಯಿತು.ಈ ಫೋಟೋ ಶೂಟ್ ವೇಳೆ ಸೈಫ್ ಮತ್ತು ಅಮೃತಾ ಮೊದಲು ಬಾರಿಗೆ ಭೇಟಿಯಾಗಿದ್ದರು. ಮೊದಲು ಸ್ನೇಹಿತರಾಗಿದ್ದ ಇವರು ಆ ನಂತರ ಪರಸ್ಪರ ಪ್ರೇಮಿಗಳಾದರು. ಒಂದು ವರ್ಷ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇವರಿಬ್ಬರೂ 1991 ರಲ್ಲಿ ವಿವಾಹವಾದರು.ಆ ಸಮಯದಲ್ಲಿ ಸೈಫ್ ರ ಹಾಲಿ ಪತ್ನಿ ಕರೀನಾ ಕಪೂರ್ ಗೆ 11 ವರ್ಷ ವಯಸ್ಸಾಗಿತ್ತು. ಸೈಫ್ ಮೊದಲ ಮದುವೆ ಸಮಾರಂಭಕ್ಕೆ ಆಗಮಿಸಿದ ಕರೀನಾ, ಸೈಫ್ ದಂಪತಿಗೆ ವಿಶ್ ಮಾಡಿದ್ದರು.
ಆ ವೇಳೆ ಸೈಫ್ , 'Thank you beta' ಎಂದಿದ್ದರು. ಅವತ್ತು ಯಾರನ್ನು ಸೈಫ್ ಆಲಿ ಖಾನ್ 'ಬೇಟಾ' ಎಂದಿದ್ದರೋ ಈಗ ಆ ಯುವತಿಯನ್ನೇ ಸೈಫ್ ಮದುವೆಯಾಗಿದ್ದಾರೆ. ಎಂತಹ ವಿಪರ್ಯಾಸ ಅಲ್ಲವೇ… ಈಗಾಗಲೇ ಅಮೃತಾ ಸಿಂಗ್ ಗೆ ಕರೀನಾಳಷ್ಟೇ ವಯಸ್ಸಾಗಿರುವ ಮಗಳಿದ್ದಾಳೆ. ಇನ್ನು ಕರೀನಾಗೆ ತೈಮೂರ್ ಎಂಬ ಮುದ್ದಾದ ಗಂಡು ಮಗುವಿದೆ.
Comments