ಕೇರಳದಲ್ಲಿ ಕೆಜಿಎಫ್ ಹವಾ ನೋಡಿದ್ರೆ ದಂಗಾಗಿ ಬಿಡ್ತೀರಾ...?!!
ಕೆಜಿಎಫ್ ಕನ್ನಡ ಚಿತ್ರರಂಗದ ಹೆಗ್ಗಳಿಕೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಂತರ ನ್ಯಾಷನಲ್ ಸ್ಟಾರ್ ಆದರು. ಕರ್ನಾಟಕದಲ್ಲಷ್ಟೇ ಅಲ್ಲಾ, ದೇವರನಾಡು, ಬೇರೆ ಬೇರೆ ರಾಜ್ಯಗಳಲ್ಲಿಯೂ ರಾಕಿಭಾಯ್ ಹವಾ ಜೋರಾಗಿಯೇ ಇದೆ. ಅದಕ್ಕೆ ತಾಜಾ ಉದಾಹರಣೆ ಹೊರ ರಾಜ್ಯಗಳಲ್ಲಿನ ಅಭಿಮಾನಿಗಳು, ಹೆಸರಲ್ಲಿ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಅಫಿಶಿಯಲ್ ಗ್ರೂಪ್ ತೆರೆದಿದ್ದಾರೆ. ಅದರಲ್ಲೂ ಯಶ್ ಗೆ ಕೇರಳದಲ್ಲಂತೂ ಭಾರೀ ಫ್ಯಾನ್ಸ್ ಬಳಗ. ಕೆಲ ಖಾಸಗಿ ವಾಹನಗಳ ಮೇಲೆ ಕೆಜಿಎಫ್ ಫೊಸ್ಟರ್ ಗಳದ್ದೇ ಅಬ್ಬರ.
ಒಂದು ಸಿನಿಮಾ ಎಷ್ಟೆಲ್ಲಾ ಬದಲಾವಣೆ ತರುತ್ತೆ ಅನ್ನೋದಕ್ಕೆ ‘ಕೆಜಿಎಫ್’ ದೊಡ್ಡ ಉದಾಹರಣೆ. ದೇಶದ ಯಾವ ಮೂಲೆಗೋದ್ರೂ ಯಶ್ ರನ್ನಗುರುತಿಸುತ್ತಾರೆ. ಇದು ಕನ್ನಡಿಗರ ಹೆಮ್ಮೆ.ಒಬ್ಬ ನಟನಾಗಿ ದೇಶ ಭಾಷೆ ಮೀರಿ ಬೆಳೆದಿದ್ದೂ ನಿಜಕ್ಕೂ ಶ್ಲಾಘನೀಯ. ಇಷ್ಟಕ್ಕೆ ರಾಕಿ ಭಾಯ್ ಓಟ ನಿಂತಿಲ್ಲ. ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಯಶ್ ಅಭಿಮಾನಿ ಬಳಗ ಶುರುವಾಗಿತ್ತು. ಯಶ್ ಹೆಸರಲ್ಲಿ ಅಫಿಶಿಯಲ್ ಫ್ಯಾನ್ ಕ್ಲಬ್ ಆರಂಭವಾಗಿವೆ.
ಇದೀಗ ಕೇರಳದಲ್ಲೂ ಯಶ್ ಫ್ಯಾನ್ಸ್ ಅಫಿಶಿಯಲ್ ಕ್ಲಬ್ ಆರಂಭವಾಗಿದೆ. ‘ಆಲ್ ಕೇರಳ ಯಶ್ ಫ್ಯಾನ್ಸ್ & ವೆಲ್ಫೇರ್ ಅಸೋಸಿಯೇಷನ್’ ಅಂತಾ ಹೆಸರಿಡಲಾಗಿದೆ. ಈ ಮೂಲಕ ಜನಪರ ಕಾರ್ಯಗಳನ್ನು ಮಾಡುವಲ್ಲಿಯೂ ಫ್ಯಾನ್ ಕ್ಲಬ್ ಯೋಜನೆ ಹಾಕಿಕೊಂಡಿದೆ. ಕನ್ನಡದ ನಟನೊಬ್ಬ ಕೇರಳದಲ್ಲಿ ಇಂಥದ್ದೊಂದು ಕ್ರೇಜ್ ಸೃಷ್ಟಿಸಿರೋದು ದೊಡ್ಡ ಸಾಧನೆಯೂ ಹೌದು. ಕೆಜಿಎಫ್ ಸಿನಿಮಾ ಸಿಕ್ಕಾಪಟ್ಟೆ ಹೆಸರು, ಹಣ ಎರಡು ತಂದು ಕೊಟ್ಟಿತ್ತು.
Comments