ಶಾರುಕ್ ಖಾನ್’ಗೆ ಅಂಕಲ್ ಎಂದ ಸ್ಟಾರ್ ನಟನ ಮಗಳು..!! ವಿವಾದಕ್ಕಿಡಾಯ್ತ ಆ ಒಂದು ಪದ..!!!
ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಮಾತನಾಡಬೇಕಾದ್ರೆ ತುಂಬಾ ಯೋಚನೆ ಮಾಡಬೇಕು.. ಅಪ್ಪಿ ತಪ್ಪಿ ಏನಾದ್ರೂ ಮಾತನಾಡುದ್ರಿ ಅನ್ಕೊಳ್ಳಿ ಅಲ್ಲಿಗೆ ಮುಗೀತು.. ಅದನ್ನೆ ದೊಡ್ಡ ವಿಷಯ ಮಾಡಿ ಬಿಡುತ್ತಾರೆ.. ಈ ರೀತಿಯ ಘಟನೆಗಳು ಬಣ್ಣದ ಲೋಕದಲ್ಲಿ ಸಾಕಷ್ಟು ಆಗಿವೆ.. ಅದರಲ್ಲೂ ಬಾಲಿವುಡ್ ಅಂಗಳದಲ್ಲೂ ಕೂಡ ಈ ರೀತಿಯ ಘಟನೆಗಳು ಆಗಿಂದಾಗೆ ನಡೆಯುತ್ತಲೇ ಇರುತ್ತವೆ.. ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ.. ಸಿನಿಮಾ ನಾಯಕರಿಗೆ ದೊಡ್ಡ ಅಭಿಮಾನಿ ಬಳಗವಿರುತ್ತದೆ. ಅವರ ವಿರುದ್ಧ ಯಾರಾದರೂ ಏನಾದರೂ ಬಾಯಿ ತಪ್ಪಿ ಹೇಳಿದರೂ ಕೂಡ ದೊಡ್ಡ ವಿವಾದ ಮಾಡಿಬಿಡುತ್ತಾರೆ.
ಇತ್ತೀಚಿಗೆ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಶಾರುಕ್ ಖಾನ್ ಗೆ ಅಂಕಲ್ ಎಂದು ಕರೆದಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ. ಸೋಷಿಯಲ್ ಮಿಡೀಯಾದಲ್ಲಿ ಸಾರಾ ಅಲಿ ಖಾನ್ ಗೆ ಶಾರುಕ್ ಅಭಿಮಾನಿಗಳು ಹಿಂದೆ ಮುಂದೆ ನೋಡದೆ ಬೈದಿದ್ದಾರೆ. ಆದರೆ ಕೆಲವು ನೆಟ್ಟಿಗರು ಸಾರಾ ಏನು ತಪ್ಪು ಮಾಡಿಲ್ಲ ತನಗಿಂತ ಎರಡು ಪಟ್ಟು ಜಾಸ್ತಿ ವಯಸ್ಸಿನ ಶಾರುಕ್ ಗೆ ಅಂಕಲ್ ಎಂದಿದ್ದಾಳೆ ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.. ಇನ್ನೂ ಕೆಲವರು ಸಾರಾ ಅಲಿ ಖಾನ್ , ಶಾರುಕ್ ಖಾನ್ ಅವರನ್ನು ಸರ್ ಅನ್ನಬೇಕಿತ್ತು ಎನ್ನುತ್ತಿದ್ದಾರೆ. ಏನೇ ಆಗಲಿ ಸ್ಟಾರ್ ಅಭಿಮಾನಿಗಳು ನಟರ ನಟನೆ ಬಗ್ಗೆ ಗಮನ ಹರಿಸಬೇಕೇ ಹೊರತು ಈ ರೀತಿ ಚಿಕ್ಕ ಚಿಕ್ಕ ವಿಷಯಕ್ಕೆ ವಿವಾದ ಮಾಡುವುದು ತುಂಬಾ ಅತಿರೇಕ ಅನಿಸುತ್ತದೆ. ಒಟ್ಟಾರೆಯಾಗಿ ಸ್ಟಾರ್ ಸುಮ್ಮನಿದ್ದರೂ ಫ್ಯಾನ್ಸ್ ಗಳು ಮಾತ್ರ ಸುಮ್ಮನಿರುವುದಿಲ್ಲ..
Comments