ಡಾಲಿ ಧನಂಜಯ ತಲೆಯನ್ನು ಬೋಳು ಮಾಡಿಸಿದ್ಯಾಕೆ?!!! ಫೋಟೋ ವೈರಲ್

ಡಾಲಿ ಧನಂಜಯ ಸದ್ಯ ಸ್ಯಾಂಡಲ್ವುಡ್ ನಲ್ಲಿ ಬೆಳೆಯುತ್ತಿರುವ ನಟ. ಶಿವಣ್ಣ ಅಭಿನಯದ ಟಗರು, ಇತ್ತೀಚೆಗೆ ರಿಲೀಸ್ ಆದ ಯಜಮಾನ ದಲ್ಲಿನ ಪಾತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾಲಿಗೆ ಹೀರೋಕ್ಕಿಂತ ವಿಲನ್ ಕ್ಯಾರೆಕ್ಟರ್ ನೇಮು-ಫೇಮು ತಂದುಕೊಟ್ಟಿದ್ದು. ಯಜಮಾನ ಸಿನಿಮಾದ ಮಿಠಾಯಿ ಸೂರಿ ಪಾತ್ರದಲ್ಲಿ ಡೈಲಾಗ್ ಮೂಲಕ ಭೇಷ್ ಗಿರಿ ಗಿಟ್ಟಿಸಿಕೊಂಡ ಧನಂಜಯ್ ಗೆ ಇದೀಗ ನಿರ್ದೇಶಕ ಸುಕ್ಕಾ ಸೂರಿ ಜೊತೆಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್'ನಲ್ಲಿ ‘ಪಾಪ್ಕಾರ್ನ್ ಮಂಕಿ ಟೈಗರ್’ ಅನ್ನೋ ಸಿನಿಮಾ ಸೆಟ್ಟೇರಿದ್ದು ಚಿತ್ರ ಟೈಟಲ್ನಿಂದಲೇ ಹಲ್ಚಲ್ ಮೂಡಿಸಿದೆ.
ಧನಂಜಯ್ ಅವರು ಸಿನಿಮಾ ಲ್ಯಾಂಡ್ ಗೆ ಕಾಲಿಟ್ಟಾಗ ಕೆಲವರು ಅವನನ್ನು ಐರೆನ್ ಲೆಗ್ ಎಂದು ಮೂದಲಿಸಿದ್ರಂತೆ. ಆದರೆ 'ರಾಜಾರಾಣಿ'ಯಲ್ಲಿ ಧನಂಜಯ್ ಅವರ ಅಭಿನಯ ನೋಡಿ ಅಭಿಮಾನಿಗಳು ಫಿದಾ ಆಗಿದ್ರು.ಆ ನಂತರ 'ಟಗರು' ನಲ್ಲಿ ಡಾಲಿ ಪಾತ್ರಕ್ಕೆ ಸ್ಟಾರ್ ನಟರೇ ಮೆಚ್ಚಿಕೊಂಡಿದ್ದರು. ಅದೇ ನೇಮಿನಿಂದ ಧನಂಜಯ್ ಅವರನ್ನು ಕರೆಯಲಾಗುತ್ತಿದೆ. ಡಾಲಿ ಧನಂಜಯ್ ಮತ್ತು ಸುಕ್ಕಾ ಸೂರಿ ಜೊತೆಯಾದ್ರೆ ಅಲ್ಲಿ ಬರೋದೆ ಬೇರೆಯೇ ಕಥೆ. ಸಿನಿಮಾ ಅಂದಮೇಲೆ ಆಕ್ಷನ್, ಕ್ರೈಮ್, ಥ್ರಿಲ್ಲಿಂಗ್ ಇದ್ದೇ ಇರುತ್ತೆ. ಬಹುನಿರೀಕ್ಷೆ ಮೂಡಿಸಿದ್ದ ಚಿತ್ರತಂಡ ನಿನ್ನೆ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು ಪೋಸ್ಟರ್ನಲ್ಲಿ ಕಡುಕೆಂಪಾದ ಕಣ್ಣು, ಬೋಳು ತಲೆಯ ಮೇಲೆ ‘ಮಂಕಿ’ ಅಂತಾ ರಕ್ತದಲ್ಲಿ ಬರೆಯಲಾಗಿದೆ. ಡಾಲಿ ಧನಂಜಯ್ ಹಿಂದೆಂದೂ ಕಾಣದ ವಿಚಿತ್ರ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು ಡಾಲಿಯ ಹೊಸಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಅಭಿಮಾನಿಗಳು ತಮ್ಮ ಸ್ಟೇಟಸ್ ನಲ್ಲಿ ಧನಂಜಯ ಅವರ ಫೋಟೋ ಹಾಕಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.ಕನ್ನಡದ ಘಜನಿ ರೂಪದ ಡಾಲಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಅವರ ಬೋಲ್ಡ್ ಆ್ಯಕ್ಟಿಂಗ್ಟ್'ನ್ನು ತೆರೆ ಮೇಲೆ ನೋಡಲು ಕಾಯಲೇ ಬೇಕು.
Comments