ತುಪ್ಪದ ಹುಡುಗಿ ರಾಗಿಣಿ ಬಂಧನ..!! ಅರೇ ಮತ್ತೆ ಗಲಾಟೆ ಮಾಡ್ಕೊಂಡ್ರ..!!!

ಅಂದಹಾಗೇ ನಟಿ ರಾಗಿಣಿ ಕೆಲವು ದಿನಗಳ ಹಿಂದಷ್ಟೆ ಎಡವಟ್ಟು ಮಾಡಿಕೊಂಡಿದ್ದರು.. . ಗ್ಲಾಮರ್ ಬ್ಯೂಟಿಯಿಂದ ಬಹಳ ಹೆಸರು ಮಾಡಿದ ನಟಿ ರಾಗಿಣಿ ಅಷ್ಟೇ ಗಾಸಿಪ್’ಗೂ ಒಳಗಾಗಿದ್ದರು. ಗಾಂಧಿನಗರದ ಕೆಲ ಸ್ಟಾರ್ ನಟರ, ನಿರ್ದೇಶಕರ ಹೆಸರುಗಳ ಜೊತೆ ರಾಗಿಣಿ ಹೆಸರು ಜೋರಾಗಿ ತಳುಕು ಹಾಕಿಕೊಂಡಿತ್ತು. ಸದ್ಯ ರಾಗಿಣಿ ದ್ವಿವೇದಿ ಇತ್ತೀಚೆಗೆ ಲವ್ವರ್’ಗಳ ಕಾದಾಟದಲ್ಲಿ ಸುದ್ದಿಯಾಗಿದದ್ದರು…. ‘ಸ್ಯಾಂಡಲ್ವುಡ್ ತುಪ್ಪದ ಹುಡುಗಿ’ ರಾಗಿಣಿ ಕಳೆದೊಂದು ವಾರದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಬಾರ್ ಗಲಾಟೆ ವಿಚಾರದಲ್ಲಿ ರಾಗಿಣಿ ಹೆಸರು ತಗುಲಿ ಹಾಕಿಕೊಂಡಿತ್ತು. ಇದೀಗ ರಾಗಿಣಿ ಕೈಗೆ ಕೋಳ ಬಿದ್ದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಯ್ಯೋ ರಾಗಿಣಿ ಅರೆಸ್ಟ್ ಆಗ್ಬಿಟ್ರ.. ಅಂತಾ ಯೋಚನೆ ಮಾಡುತ್ತಿದ್ದಿರಾ… ಜಾಸ್ತಿ ಯೋಚನೆ ಮಾಡಬೇಡಿ..? ಯಾಕೆಂದ್ರೆ ಇದು ರಿಯಲ್ ಅಲ್ಲ ಬದಲಿಗೆ ರೀಲು… ರಾಗಿಣಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಪೈಕಿ ‘ಗಾಂಧಿಗಿರಿ’ಯೂ ಒಂದು. ನಿರ್ದೇಶಕ ಪ್ರೇಮ್ ಬಹುದಿನಗಳ ನಂತರ ಹೀರೊ ಆಗಿ ಅಭಿನಯಿಸುತ್ತಿರುವ ಸಿನಿಮಾ.. ‘ಗಾಂಧಿಗಿರಿ’ಯಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಂದ್ಹಾಗೆ ರಾಗಿಣಿ ಕೈಗೆ ಕೋಳ ಹಾಕಿಸಿಕೊಂಡಿರೋದು ಕೂಡ ಗಾಂಧಿಗಿರಿ ಸಿನಿಮಾಗಾಗಿ…
ರಾಗಿಣಿ ಅರೆಸ್ಟ್ ಆಗುವ ದೃಶ್ಯವೊಂದು ಸಿನಿಮಾದಲ್ಲಿದೆ. ಆದರೆ ಇದು ಗಾಂಧಿಗಿರಿ ಸಿನಿಮಾದ ಸ್ಟಿಲ್ ಫೋಟೋ. ಈ ಸಿನಿಮಾದಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ರಾಗಿಣಿ ಜೈಲಿಗೆ ಹೋಗೋ ಸೀನ್ನಲ್ಲಿ ನಟಿಸ್ತಾ ಇದ್ದಾರೆ, ಆ ಫೋಟೋವೇ ಇದು. ರಾಗಿಣಿ ಅಭಿಮಾನಿಗಳು ಭಯಪಡೋ ಅಗತ್ಯವಿಲ್ಲ. ಹೋಟೆಲ್ನಲ್ಲಿ ನಡೆದ ಮಾಜಿ-ಹಾಲಿ ಪ್ರೇಮಿಗಳ ಜಗಳ ಪೊಲೀಸರಿಂದ ತನಿಖೆಗೆ ಒಳಪಟ್ಟಿದೆ.ಈ ದೃಶ್ಯದ ಫೋಟೊವೀಗ ಎಲ್ಲರ ಗಮನ ಸೆಳೆಯುತ್ತಿದೆ. ರಾಗಿಣಿ ನಿಜವಾಗ್ಲೂ ಅರೆಸ್ಟ್ ಆದ್ರಾ..? ಅನ್ನುವಷ್ಟರ ಮಟ್ಟಿಗೆ ಫೋಟೊ ರಿಯಲ್ಲಾಗಿದೆ ಎನ್ನಲಾಗುತ್ತಿದೆ..
Comments