‘ಆಕೆ ಒಳ ಉಡುಪು ಧರಿಸಲಿ, ಇಲ್ಲಾ ಬಿಡಲೀ ನನಗೇನು’ : ಕಂಗನಾಗೆ ತಿರುಗೇಟು ಕೊಟ್ಟ ನಿರ್ದೇಶಕ…?!!!

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಕಂಗನಾ ಅವರು, 'ಐ ಲವ್ ಯೂ ಬಾಸ್' ಎನ್ನುವ ಸಿನಿಮಾ ಫೋಟೋ ಶೂಟ್ ಸಂದರ್ಭದಲ್ಲಿ ಒಳ ಉಡುಪು ಹಾಕದೇ ಬೋಲ್ಡ್ ಡ್ರೆಸ್ ಹಾಕಿ ತೀರಾ ಅಶ್ಲೀಲ ಎನಿಸುವ ಸನ್ನಿವೇಶದಲ್ಲಿ ನಿಹ್ಲಾನಿ ಅವರು ನಟಿಸುವಂತೆ ನನಗೆ ಒತ್ತಾಯಿಸಿದ್ದರು ಎಂದು ಹೇಳಿಕೊಂಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿ ಪಹ್ಲಾಜ್ ನಿಹ್ಲಾನಿ ಅವರು ಕಂಗನಾಗೆ ತಿರುಗೇಟು ನೀಡಿದ್ದಾರೆ.
'ಕಂಗನಾ ಅಂದರೆ ಯಾರು ಎಂದೇ ಗೊತ್ತಿಲ್ಲದಿರುವಾಗ ಆಕೆಗೆ ಮೂರು ಸಿನಿಮಾಗಳಲ್ಲಿ ಅವಕಾಶ ನೀಡಿ ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು. ಆಕೆ ಬೆಳೆಯೋಕೆ ನಾನೇ ಒಂದು ಲೆಕ್ಕದಲ್ಲಿ ಕಾರಣ. ಆ ಕೃತಜ್ಞಾ ಮನೋಭಾವ ಇಲ್ಲ ಆಕೆಗೆ. ಸಿನಿಮಾ ಕತೆಯನ್ನು ಮೊದಲೇ ಆಕೆಗೆ ವಿವರಿಸಲಾಗಿತ್ತು. ಆದರೆ ಫೋಟೋ ಶೂಟ್ ನಡೆಯುವಾಗ ಒಳ ಉಡುಪು ಧರಿಸಬಾರದು ಎಂದೆಲ್ಲಾ ನಾನು ಹೇಳಿಲ್ಲ. ನೀವು ಒಳ ಉಡುಪು ಧರಿಸಿದರೆಷ್ಟು, ಬಿಟ್ಟರೆಷ್ಟು ಅದನ್ನು ಕಟ್ಟಿಕೊಂಡು ನಾನು ಏನು ಮಾಡಲಿ? ಅಷ್ಟಕ್ಕೂ ಆ ಫೋಟೋ ಶೂಟ್ ಸಂದರ್ಭ ನಾನು ಅಲ್ಲಿ ಇರಲೇ ಇಲ್ಲ. ಇದೆಲ್ಲಾ ಕಂಗನಾ ಹೆಣೆಯುತ್ತಿರುವ ಕಟ್ಟು ಕತೆ' ಎಂದು ಪಹ್ಲಾಜ್ ತಿರುಗೇಟು ನೀಡಿದ್ದಾರೆ. ಕಂಗನಾ ಸದ್ಯ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಕುರಿತಾದ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರ ಮಾಡಲು ಆಕೆ ಪಡೆಯುತ್ತಿರುವ ಸಂಭಾವನೆ ದುಬಾರಿ ಮೊತ್ತದ್ದು ಎಂದು ಮಾಧ್ಯಮಗಳಲ್ಲಿ ದೊಡ್ಡದಾದ ಸುದ್ದಿಯೇ ಆಗಿತ್ತು.
Comments