ನಟಿ ಪ್ರಿಯಾಂಕ ದಾಂಪತ್ಯದಲ್ಲಿ ಬಿರುಕು...!!!
ಇತ್ತೀಚಿಗಷ್ಟೇ ಮದುವೆಯಾಗಿ ಬಾಲಿವುಡ್ ನಲ್ಲಿ ಸದ್ದು ಮಾಡಿದ ಜೋಡಿಯೆಂದರೆ ಪಿಗ್ಗಿ ಮತ್ತು ನಿಕ್. ಸ್ವಲ್ಪ ದಿನಗಳ ಹಿಂದೆ ಡೇಟಿಂಗ್ ಅಂತಾ ನ್ಯೂಸ್ ಆಗಿದ್ದ ಜೋಡಿ ಮದುವೆಯಾಗಿ ಕೆಲವೇ ದಿನಗಳಲ್ಲಿ ಡಿವೋರ್ಸ್ ಆಗುತ್ತಿದ್ದಾರೆಂಬ ಸ್ಫೋಟಕ ಸುದ್ದಿಯನ್ನು ನಿಯತಕಾಲಿಕೆಯೊಂದು ಪ್ರಕಟ ಮಾಡಿದೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳದೇ ಮದುವೆಯಾಗಿದ್ದಾರೆ. ಕೆಲಸ, ಲೈಫ್ ಬಗ್ಗೆ ಪರಸ್ಪರ ಅರ್ಥ ಮಾಡಿಕೊಳ್ಳದೇ ಇಬ್ಬರಲ್ಲೂ ವೈ- ಮನಸ್ಸು ಮೂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೀಗ ನಿಕ್ ಮನೆಯವರು ಪಿಗ್ಗಿ ಜೊತೆ ನಿಕ್ ಹೊಂದಾಣಿಕೆ ಆಗುವುದು ಕಷ್ಟವಾಗ್ತಿದೆ. ಇಬ್ಬರು ವಿಚ್ಛೇದನ ಪಡೆದುಕೊಂಡರೆ ಸರಿ ಹೋಗುತ್ತದೆ. ಅದಕ್ಕಾಗಿ ಡಿವೋರ್ಸ್ ಪಡೆಯಲು ಸಿದ್ಧತೆ ನಡೆಸಿದ್ದೇವೆ ಎಂದು ಬ್ರಿಟೀಷ್ ನಿಯತಕಾಲಿಕೆ ‘ಓಕೆ’ ಯಲ್ಲಿ ಪ್ರಕಟವಾಗಿದೆ.ಹಾಲಿವುಡ್ ನ ಗಾಯಕರಾಗಿರುವ ನಿಕ್ ಮತ್ತು ದೇಶಿ ಗರ್ಲ್ ಪ್ರಿಯಾಂಕ ಚೋಪ್ರ ಅವರು ಡಿವೋರ್ಸ್ ಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಹಬ್ಬುತ್ತಿದ್ದಂತೇ ಬಿ ಟೌನ್ ಪಿಗ್ಗಿ ಹಿಂದೆ ಬಿದ್ದಿದೆ.
ಈ ನ್ಯೂಸ್ ನಿಂದ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಮದುವೆಯಾಗಿನಿಂದಲೂ ಕೆಲಸ, ಪಾರ್ಟಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಇಬ್ಬರೂ ಜಗಳ ವಾಡುತ್ತಿದ್ದಾರೆ ಅಂತ ಓಕೆ ಎನ್ನುವ ಬ್ರಿಟಿಷ್ ಅಂತಾರಾಷ್ಟ್ರೀಯ ಮ್ಯಾಗಜಿನ್ ವರದಿ ಮಾಡಿದೆ. ಆದರೆ, ಅಸಲಿಗೆ ಈ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ಮತ್ತೊಂದು ಮಾಧ್ಯಮ ವರದಿ ಮಾಡಲು ಪ್ರಿಯಾಂಕಾ ಚೋಪ್ರಾರ ಪ್ರತಿನಿಧಿಯನ್ನು ವಿಚಾರಿಸಿದಾಗ ಈ ಸುದ್ದಿ ಅಪ್ಪಟ ಸುಳ್ಳುಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ಅಂತಾರಾಷ್ಟ್ರೀಯ ಪತ್ರಿಕೆ ವರದಿ ಮಾಡಿದ ಕಥೆ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆಯಾಗಿ ಪ್ರಿಯಾಂಕಾ-ನಿಕ್ ಡೈವೋರ್ಸ್ ತಗೊಳ್ಳೋಲ್ಲ ಅನ್ನೋ ವಿಷಯ ಇಬ್ಬರ ಫ್ಯಾನ್ಸ್ಗಳಿಗೂ ಸದ್ಯದ ಮಟ್ಟಿಗೆ ಖುಷಿ ನೀಡಿದೆ. ಸ್ವಲ್ಪ ದಿನಗಳ ಹಿಂದೆ ನಿಕ್ ಮಾಜಿ ಪ್ರೇಯಸಿ ಜೊತೆ ಮಾತನಾಡಿದ್ದ ಪಿಗ್ಗಿ, ಡೇಟಿಂಗ್ ಮಾಡೋಕೆ ನಿಮ್ಮ ಪತಿಯೊಟ್ಟಿಗೆ ಬನ್ನಿ ಎಂದು ಆಮಂತ್ರಣ ಕೊಟ್ಟಿದ್ದಳಂತೆ.
Comments