‘ವೀಕೆಂಡ್ ವಿತ್ ರಮೇಶ್’ ಷೋ ನ ಮೊದಲ ಗೆಸ್ಟ್ ‘ಇವರೇ’ ನೋಡಿ..!!

ಕನ್ನಡದ ಅತೀ ದೊಡ್ಡ ಅರ್ಥಪೂರ್ಣವಾದ ಷೋ ಗಳು ತುಂಬಾ ಇವೆ.. ಅದರಲ್ಲಿ ಹೆಚ್ಚು ಜನ ಮನ್ನಣೆಯನ್ನು ಗಳಿಸಿರುವ ಷೋ ಎಂದರೆ ಅದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್… ಈ ಷೋ ಬಹಳಷ್ಟು ಜನರಿಗೆ ತುಂಬಾ ಇಷ್ಟ.. ರಮೇಶ್ ಅರವಿಂದ್ ಸಾರಥ್ಯದಲ್ಲಿ ನಡೆಯುವ ಈ ಷೋ ಗೆ ಅಭಿಮಾನಿಗಳ ದೊಡ್ಡ ಬಳಗವೆ ಇದೆ… ಈ ಕಾರ್ಯಕ್ರಮ ಈಗಾಗಲೇ ಮೂರು ಆವೃತ್ತಿಗಳನ್ನು ಮುಗಿಸಿದ್ದು ನಾಲ್ಕನೇ ಆವೃತ್ತಿಗೆ ಸಿದ್ದವಾಗಿದೆ.. ದೊಡ್ಡ ದೊಡ್ಡ ಸಾಧಕರ ಜೀವನವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಕಾರ್ಯಕ್ರಮಕ್ಕೆ ಈ ಬಾರಿ ಯಾವ ಯಾವ ಅಥಿತಿಗಳು ಬರುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿರುವುದಂತೂ ನಿಜ..
ಕಳೆದ ಸೀಜನ್ ಗಳಲ್ಲಿ ಈ ಕಾರ್ಯಕ್ರಮಕ್ಕೆ ದರ್ಶನ್, ಯಶ್, ಸುದೀಪ್, ಸಾಧುಕೋಕಿಲ, ಗಣೇಶ್, ವಿಜಯಪ್ರಕಾಶ್, ಪ್ರಕಾಶ್ ರೈ, ರಾಜೇಶ್ ಕೃಷ್ಣನ್, ಸುಧಾರಾಣಿ,ಜಗ್ಗೇಶ್, ಸಾಯಿಕುಮಾರ್, ಎಸ್ ಪಿ ಬಾಲಸುಬ್ರಮಣ್ಯಂ, ಅಂಬರೀಶ್, ರವಿಚಂದ್ರನ್, ಉಮಾಶ್ರೀ,ಅನಂತ್ ನಾಗ್, ಅರ್ಜುನ್ ಸರ್ಜಾ,ವಿಜಯ್ ಸಂಕೇಶ್ವರ್, ಲಕ್ಷ್ಮಿ, ದೊಡ್ಡಣ್ಣ, ರಕ್ಷಿತ, ರವಿ ಚನ್ನಣ್ಣವರ್ ಹೀಗೆ ಸಾಕಷ್ಟು ಸಾಧಕರು ಬಂದಿದ್ದಾರೆ.. ಇದೀಗ ಸೀಸನ್ 4 ನಲ್ಲಿ ಯಾರ್ಯಾರು ಬರಬಹುದು ಎಂಬ ಪ್ರಶ್ನೆ ವೀಕ್ಷಕರದ್ದಾಗಿದೆ.. ಈ ಬಾರಿ ಪ್ರಧಾನಿ ಮೋದಿ ಬರ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..
ನಟಿ ರಮ್ಯಾ, ನಿರ್ದೇಶಕ ರಾಜಮೌಳಿ, ಫೇಮಸ್ ಡ್ಯಾನ್ಸರ್ ಪ್ರಭುದೇವ್, ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.. ಆದರೆ ಈ ಬಾರಿ ಮೊದಲ ಗೆಸ್ಟ್ ಆಗಿ ಬರುತ್ತಿರುವವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಬರಲಿದ್ದಾರೆ. ಈ ಬಾರಿ ಸೀಜನ್ ಕಳೆದ ಮೂರು ಸಿಜನ್ ಗಳಿಂತೂ ಕೂಡ ಚೆನ್ನಾಗಿರುತ್ತದೆ ಎಂಬುದು ಷೋ ತಂಡವದರ ಮಾತಾಗಿದೆ. ಈಗಾಗಲೇ ಟಿವಿಯಲ್ಲಿ ವೀಕೆಂಡ್ ವಿತ್ ರಮೇಶ್ ಪ್ರೋಮೋ ಪ್ರಸಾರವಾಗುತ್ತಿದೆ.
Comments