ಶಿವಣ್ಣನ ಸಿನಿಮಾದಲ್ಲಿ ನಾನು ಅಭಿನಯಿಸಲ್ಲ ಎಂದ ಖ್ಯಾತ ನಟ : ಕಾರಣ ಏನ್ ಗೊತ್ತಾ..?

ಅಂದಹಾಗೇ ಸ್ಯಾಂಡಲ್’ವುಡ್ ನಲ್ಲಿ ಭಾರೀ ಟಾಕ್ ಆಗ್ತಾಯಿರುವ ಸಿನಿಮಾ ‘ರುಸ್ತುಂ’. ಟಗರು, ವಿಲನ್ ನಂತರ ಮತ್ತಷ್ಟು ಖದರ್ ಆಗಿ, ಮಾಸ್ ಡೈಲಾಗ್ ಮೂಲಕ ಅಭಿಮಾನಿಗಳನ್ನು ಎದ್ದು ಕುಣಿಯುವಂತೆ ಮಾಡೋಕೆ ಬರ್ತಾಯಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಇದೂವರೆಗೆ ಮಾಡಿದ ಶಿವಣ್ಣ ನ ಸಿನಿಮಾಗಳಲ್ಲಿ ವಿಲನ್ ಗಳು ಒಂದು ರೇಜ್ ನಲ್ಲಿದ್ದರು. ಆದರೆ ಇದೀಗ ರುಸ್ತುಂನಲ್ಲಿ ಶಿವಣ್ಣ ನಿಗೆ ಸರಿ ಸಮನಾಗಿಯೇ, ಅಷ್ಟೇ ಗತ್ತು, ಖದರ್ , ಗೆ ವಿಲನ್ ಬೇಕಾಗಿದ್ದಾರೆ. ನಿರ್ದೇಶಕರ ಅಭಿಪ್ರಾಯದಂತೇ ಒಂದು ಸ್ಟೆಪ್ಪು ಮುಂದೆಯೇ ಇದ್ರು ಸಿನಿಮಾ ಇನ್ನು ಚೆನ್ನಾಗಿ ಮೂಡಿ ಬರುತ್ತೆ ಎಂದು ಯೋಚಿಸಿ ಒಬ್ಬ ಸ್ಟಾರ್ ನಟನನ್ನು ವಿಲನ್ ಪಾತ್ರ ಮಾಡೋಕೆ ಅಪ್ರೋಚ್ ಮಾಡಿದ್ದಾರೆ.
ಶಿವಣ್ಣನ ಆ್ಯಕ್ಷನ್ ಗೆ ಸರಿ ಸಮನಾಗಿ ನಾಗರ್ಜುನ ಅವರೇ ಬೆಸ್ಟ್ ಕ್ಯಾರೆಕ್ಟರ್ ಎಂದು ಅವರನ್ನು ನಟಿಸುವಂತೆ ಕೇಳಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಅಭಿನಯಿಸೋಕೆ ನಾನ್ ರೆಡಿ ಎಂದ ನಾಗರ್ಜುನ್ ಅವರು ತಮ್ಮ ಪಾತ್ರ ನೋಡಿ ಹಿಂದೆ ಸರಿದು ಬಿಟ್ರಂತೆ. ನಾನ್ ಆ ಕ್ಯಾರೆಕ್ಟರ್ ಮಾಡಲ್ಲ ಎಂದು ಬಿಟ್ಟರಂತೆ. ಇದೀಗ ಆ ಜಾಗಕ್ಕೆ ಬೇರೊಬ್ಬ ಬಾಲಿವುಡ್ ನ ಸ್ಟಾರ್ ನಟ ವಿವೇಕ್ ಓಬೆರಾಯ್ ಅವರನ್ನು ಕರೆ ತರಲಾಗಿದೆ. ಅಂದಹಾಗೇ ಅಕ್ಕಿನೇನಿ ನಾಗರ್ಜುನ್ ಅವರು ಟಾಲಿವುಡ್ ನಲ್ಲಿ ಬಹಳ ಫೇಮಸ್ ಆ್ಯಕ್ಟರ್. ಶಿವಣ್ಣನಿಗೂ ದೋಸ್ತು ಆದರೆ ಸಿನಿಮಾದಲ್ಲಿ ಪಾತ್ರ ಮಾಡೋಕೆ ನಿರಾಕರಿಸಿದ್ದಕ್ಕೆ ಕಾರಣವಿತ್ತು. ಅದೇನೆಂದರೆ…..
ನಿರ್ದೇಶಕ ರವಿವರ್ಮ ಅವರ ತಲೆಗೆ ಹೊಳೆದಿದ್ದು ನಾಗರ್ಜುನ್ ಅವರು. ಶಿವಣ್ಣನಿಗೆ ವಿಲನ್ ಆಗೋಕೆ ಒಂದ್ ರೇಂಜ್‌ಗೆ ಆ್ಯಕ್ಷನ್ ಮಾಡೋರು ಅಕ್ಕಿನೇನಿ ನಾಗಾರ್ಜುನ್. ಮೊದಲು ಅವರನ್ನ ಅಪ್ರೋಚ್ ಮಾಡಿದ್ವಿ. ಆಗ ಅವರು ಖಂಡಿತ ಮಾಡ್ತೀನಿ ರವಿ ಅಂದ್ರು . ನಂತ್ರ ನಿನ್ನ ಮೊದಲನೇ ಡೈರೆಕ್ಷನ್‌ನಲ್ಲಿ ಇಷ್ಟು ಚಿಕ್ಕ ಪಾತ್ರವಾ? ನಟಿಸಕ್ಕಾಲ್ಲ ಅಂದಿದ್ದಾರೆ. ಹೀಗಾಗಿ ಅಕ್ಕಿನೇನಿ ನಾಗಾರ್ಜುನ್ ರುಸ್ತುಂನಲ್ಲಿ ನಟಿಸಲಿಲ್ಲ ಅಂತಾರೆ ನಿರ್ದೇಶಕ ರವಿವರ್ಮ. ಆ ನಂತರ ಆ ಪಾತ್ರಕ್ಕೆ ನಟ ಅನಿಲ್ ಕಪೂರ್ ಅವರನ್ನು ಕರೆತರುವ ಯೋಚನೆ ಮಾಡಲಾಗಿತ್ತು. ಮಗಳ ಮದುವೆ ಎಂದು ಓಡಾಡಿಕೊಂಡಿದ್ದ ಅವರು ಕೈಗೆ ಸಿಕ್ಕಿಲ್ಲ. ಹಾಗಾಗಿ ಅವರ ಬದಲು ವಿವೇಕ್ ಓಬೆರಾಯ್ ಅವರನ್ನು ಕರೆತರಲಾಗಿದೆ.
Comments