ಮದುವೆಯಾಗೋ ಖುಷಿಯಲ್ಲಿ ಬ್ಯಾಚುಲರ್ ಪಾರ್ಟಿ ಸೆಲೆಬ್ರೇಟ್ ಮಾಡ್ಕೊಳ್ತಿದ್ದಾಳೆ ಈ ಖ್ಯಾತ ನಟಿ...

ಬಾಲಿವುಡ್ ನ ಬ್ಯೂಟಿಫುಲ್ ತಾರಾ ಜೋಡಿಯೊಂದು ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಇಬ್ಬರು ಸಿನಿಮಾ ಲ್ಯಾಂಡ್ ನವರೇ ಆಗಿರುವುದರಿಂದ ಅಭಿಮಾನಿಗಳ ಬಳಗವೂ ಅಷ್ಟೇ ಪ್ರಮಾಣದಲ್ಲಿ ದೊಡ್ಡದಿದೆ. ಇತ್ತೀಚಿಗೆ ಬಿ ಟೌನ್ ನಲ್ಲಿ ಈ ಸ್ಟಾರ್ ಜೋಡಿಯದ್ದೇ ಜೋರು ಟಾಕ್. ನಟ ಅರ್ಜುನ್ ಕಪೂರ್ ಅವರನ್ನು ನಟಿ ಮಲೈಕಾ ಅರೋರಾ ಕೈ ಹಿಡಿಯುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸದ್ದು ಮಾಡಿತ್ತು.
ಇದೀಗ ನಟಿ ಮಲೈಕಾ ಅರೋರಾ ಬ್ಯಾಚುಲರ್ ಪಾರ್ಟಿ ಅರೆಂಜ್ ಮಾಡಿದ್ದಾರಂತೆ. ಸಮ್ಮರ್ ಗೆ ಬೆಸ್ಟ್ ಪ್ಲೇಸ್ ಎನ್ನಲಾಗುವ ಮಾಲ್ಡೀವ್ಸ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ಧಾರೆ ಮಲೈಕಾ ಅರೋರ. ಅಂದಹಾಗೇ ಮಲೈಕಾ ಜೊತೆ ಅರ್ಜುನ್ ಇಲ್ಲ. ಏಕೆಂದರೆ ಮಲೈಕಾ ತನ್ನ ಸ್ನೇಹಿತೆಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ ಸೆಲೆಬ್ರೇಟ್ ಮಾಡುತ್ತಿದ್ದಾಳೆ. ಗೆಳತಿಯರೊಂದಿಗೆ ಸಮುದ್ರದ ಬೀಚ್ ನಲ್ಲಿ ಎಂಜಾಯ್ ಮಾಡ್ತಿದ್ದಾಳೆ. ಅವರು ತಮ್ಮ ಕೆಲವು ಗೆಳತಿಯರೊಂದಿಗೆ ಮಾಲ್ಡೀನ್ಸ್ ನಲ್ಲಿ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಲ್ಲಿನ ಖುಷಿಯ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.ಅಂದಹಾಗೇ ಏಫ್ರಿಲ್ 19 ರಂದು ಇವರಿಬ್ಬರು ಹಸೆಮಣೆ ಏರುತ್ತಿದ್ದಾರೆ ಎಂಬ ಮಾಹಿತಿ ಇದೆ. ಆಗಿದ್ದರೇ ಇವರಿಬ್ಬರಿಗೂ ಈ ವರ್ಷದ ಮೊದ ಸ್ಟಾರ್ ಜೋಡಿಯ ಮದುವೆ ಎಂದು ಕರೆಸಿಕೊಳ್ಳುತ್ತದೆ.
Comments