ಡಾ. ರಾಜ್ ಮೊಮ್ಮಗನ ಮೇಲೆ ದಾಖಲಾಯ್ತು ದೂರು..!! ಕಾರಣ ಗೊತ್ತಾ..?

ಸ್ಯಾಂಡಲ್ವುಡ್ ನಲ್ಲಿ ವಿಭಿನ್ನ ಕಥಾಹಂದರವನ್ನು ಹೊಂದಿದ ಸಿನಿಮಾಗಳಲ್ಲಿ ಅನಂತು ವರ್ಸಸ್ ನುಸ್ರುತ್ ಕೂಡ ಒಂದು.. ಡಾ. ರಾಜ್ಕುಮಾರ್ ಮೊಮ್ಮಗ ಅಭಿನಯದ ಸಿನಿಮಾವನ್ನು ಎಲ್ಲರೂ ಕೂಡ ಮೆಚ್ಚಿಕೊಂಡರು.. ರಾಘವೇಂದ್ರ ರಾಜ್ ಕುಮಾರ್ ಮಗನಾದ ವಿನಯ್ ರಾಜ್ ಕುಮಾರ್ ಅನಂತು ವರ್ಸಸ್ ನುಸ್ರುತ್ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.. ಇದೀಗ ವಿನಯ್ ರಾಜ್ ಕುಮಾರ್ ಮೇಲೆ ದುರು ದಾಖಲಾಗಿದೆ.
ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು ವರ್ಸಸ್ ನುಸ್ರತ್' ಚಿತ್ರತಂಡದ ಮೇಲೆ ವಕೀಲ ಸಂಘದವರು ದೂರು ಸಲ್ಲಿಸಿದ್ದಾರೆ. ಇದೇನಪ್ಪಾ ಇವರ ಚಿತ್ರಕ್ಕೆ ಏನ್ ತಕರಾರು ಅಂತಾನಾ? ವಿನಯ್ ಅಭಿನಯದ 'ಅನಂತು ವರ್ಸಸ್ ನುಸ್ರತ್' ಚಿತ್ರ ತಂಡವು ಹೈಕೋರ್ಟ್ ಆವರಣದಲ್ಲಿ ನಾಯಕ ನಟನ ಫೋಟೋ ಶೂಟ್ ಮಾಡಿದೆ. ಇದಕ್ಕೆ ವಕೀಲ ಸಂಘದವರ ಅಥವಾ ಹೈಕೋರ್ಟ್ ಜಡ್ಜ್ ಅನುಮತಿ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ವಕೀಲರಾದ ಅಮೃತೇಶ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ಕೆಲದಿನಗಳ ಹಿಂದೆ ಅರ್ಜಿ ವಿಚಾರಣೆ ನಡೆದಿದ್ದು ಹೈಕೋರ್ಟ್ FIR ದಾಖಲಿಸುವಂತೆ ಹೇಳಿದೆ ಎನ್ನಲಾಗುತ್ತಿದೆ.
Comments