ಅವರ ಜೊತೆ ಡೇಟಿಂಗ್ ಮಾಡೋಕೆ ನಾನ್ ರೆಡಿ ಎಂದ ನಟಿ ತಮನ್ನಾ …?!!!

ನಟಿ ತಮನ್ನಾ ಟಾಲಿವುಡ್ ನಲ್ಲಿ ಭಾರೀ ಹೆಸರು ಮಾಡಿದ ನಟಿ. ಅಂದಹಾಗೇ ಗಾಸಿಪ್ ನಿಂದ ಸ್ವಲ್ಪ ದೂರವೇ ಇರುವ ತಮನ್ನಾ ಅದ್ಯಾಕೋ ಇನ್ನು ಮದುವೆಯಾಗಿಲ್ಲ. ಬ್ಯೂಟಿ, ಟ್ಯಾಲೆಂಟ್ ಎಲ್ಲವೂ ಹೆಚ್ಚಾಗಿಯೇ ಇರುವ ಮಿಲ್ಕಿ ಬ್ಯೂಟಿಗೆ, ಸ್ಟಾರ್ ನಟರೇ ಫಿದಾ ಆಗಿದ್ದಾರಂತೆ. ಅದೇನೇ ಇರಲಿ ಒಂದಷ್ಟು ದಿನಗಳ ಹಿಂದೆ ನಟ ದಗ್ಗು ಭಾಟಿಯಾ ಅಂದ್ರೆ ನನಗಿಷ್ಟವೆಂದು ಹೇಳಿ ಸುದ್ದಿಯಾಗಿದ್ದರು. ಇವರಿಬ್ಬರು ಬಾಹುಬಲಿ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಆದರೆ ಇದೀಗ ಅದ್ಯಾಕೋ ಮಿಲ್ಕಿ ಬ್ಯೂಟಿ ಮತ್ತೊಬ್ಬ ಸ್ಟಾರ್ ಜೊತೆ ಡೇಟಿಂಗ್ ಹೋಗ ಬೇಕು ಎಂದು ಮನದ ಇಂಗಿತ ವ್ಯಕ್ತಪಡಿಸಿದ್ದಾರಂತೆ.
ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಮನ್ನಾಗೆ ಕೈ ತುಂಬಾ ಅವಕಾಶಗಳು. ಸಂಭಾವನೆ ಕೂಡ ದುಬಾರಿಯೇ. ಬಾಹುಬಲಿ ನಂತರ ಬಾಲಿವುಡ್ ನಿಂದಲೂ ಬೇಜಾನ್ ಆಫರ್'ಗಳು ಸಿಕ್ಕಿವೆ ತಮನ್ನಾಗೆ. ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಮಿಲ್ಕಿ ಬ್ಯೂಟಿ ಅಲ್ಲಿನ ಸ್ಟಾರ್ ನಟರೊಬ್ಬರನ್ನ ನೋಡಿ ಡೇಟ್ ಮಾಡಲು ಆಸೆಪಟ್ಟಿದ್ದಾರಂತೆ.
ಅಂದಹಾಗೇ ಆ ಲಕ್ಕಿ ಬಾಯ್ ಯಾರು ಅಂತಾ ಕೇಳ್ತೀರಾ..? ಅವರೇ ಉರಿ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್.ಇತ್ತೀಚಿಗಷ್ಟೇ ಆಂಗ್ಲ ಪತ್ರಿಕೆಯೊಂದಿಗೆ ಸಂದರ್ಶನ ನೀಡಿ ತಮನ್ನಾ ಈ ವಿಚಾರ ಹಂಚಿಕೊಂಡಿದ್ದಾರೆ. ಈ ವೇಳೆ ನೀವು ಯಾರ್ ಜತೆ ಡೇಟಿಂಗ್ ಮಾಡ್ತೀರಾ ಅಂತಾ ಪ್ರಶ್ನೆ ಕೇಳಿದ್ದಾರೆ. ತಮನ್ನಾ ಹಿಂದೂ –ಮುಂದು ಯೋಚಿಸದೇ ತಕ್ಷಣ ರಿಯಾಕ್ಟ್ ಮಾಡಿ ವಿಕ್ಕಿ ಕೌಶಲ್ ಅವರ ಹೆಸರನ್ನು ಹೇಳಿಬಿಟ್ರು. 'ಉರಿ' ಸಿನಿಮಾದಲ್ಲಿ ನಟಿಸಿದ ವಿಕ್ಕಿ ಕೌಶಲ್ ಸಖತ್ ಆಗಿಯೇ ನಟಿಸಿ ಎಲ್ಲರಿಂದಲೂ ಶಹಬ್ಬಾಸ್ ಗಿರಿ ಪಡೆದುಕೊಂಡರು.
How is josh' ಡೈಲಾಗಂತೂ ತುಂಬಾ ಫೇಮಸ್ ಆಗಿತ್ತು. ಅದರೊಂದಿಗೆ ವಿಕ್ಕಿ ಕೂಡ ಬಹು ಬೇಡಿಕೆ, ಭರವಸೆಯ ನಟನಾದರು . ಈಗ ಈ ಕಮಾಂಡೋ ಮೇಲೆ ಮಿಲ್ಕಿ ಬ್ಯೂಟಿಯ ಕಣ್ಣು ಬಿದ್ದಿದೆ.
Comments