ಪ್ರೀತಿಯ ಅಭಿಮಾನಿಗೆ ಅಭಿಮಾನದಿಂದ ‘ಸಾರಥಿ’ ಕೊಟ್ರು ಬಂಫರ್ ಗಿಫ್ಟ್ ..!
ಚಂದನವನದಲ್ಲಿ ಡಿ ಬಾಸ್ ಗೆ ಅಭಿಮಾನಿಗಳಿಗೇನು ಕೊರತೆ ಇಲ್ಲ… ಬಹುಬೇಡಿಕೆಯ ನಟನಾಗಿರುವ ದರ್ಶನ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ.. ಪ್ರಾಣಿ ಸಂರಕ್ಷಣೆ, ಗಿಡ ಮರಗಳ ರಕ್ಷಣೆ, ಎಲ್ಲವೂ ಕೂಡ ತುಂಬಾನೇ ಇಷ್ಟ ಪಟ್ಟು ಮಾಡುವ ದಾಸ ಅಭಿಮಾನಿಗಳನ್ನು ಕೂಡ ತುಂಬಾನೇ ಇಷ್ಟ ಪಡ್ತಾರೆ.. ಅಭಿಮಾನಿಗಳಿಗಾಗಿ ಆಗಿಂದಾಗಿ ಏನಾದರೂ ಸಹಾಯವನ್ನು ಮಾಡುತ್ತಿರುತ್ತಾರೆ.. ಇದೀಗ ದರ್ಶನ್ ಮತ್ತೊಬ್ಬ ಅಭಿಮಾನಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ.
ಸ್ಯಾಂಡಲ್ವುಡ್ನ ಸುಲ್ತಾನರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ರು. ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದವರ ಪಾಲಿನ ಕರ್ಣ, ಸದಾ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣೋ ಡಿ ಬಾಸ್ ಅಂದ್ರೆ ಫ್ಯಾನ್ಸ್ಗೂ ಅಷ್ಟೆ ತುಂಬಾ ಇಷ್ಟ… ನಟ ನಟಿಯರಿಗೆ ಅಭಿಮಾನಿಗಳು ಗಿಫ್ಟ್ ಕೋಡೋದು ಕಾಮನ್.. ಆದರೆ ಡಿ ಬಾಸ್ ಅಭಿಮಾನಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.. ಇದೀಗ ತನ್ನ ನೆಚ್ಚಿನ ಅಭಿಮಾನಿಯೊಬ್ಬರಿಗೆ ದರ್ಶನ್ ಆಟೋರಿಕ್ಷಾ ಕೊಡಿಸೋ ಮೂಲಕ ದರ್ಶನ್ ಅಭಿಮಾನಿಯ ಮೇಲೆ ಪ್ರೀತಿ ತೋರಿಸಿದ್ದಾರೆ.
ಈ ಅಭಿಮಾನಿ ದರ್ಶನ್ ಕೊಡಿಸಿರೋ ರಿಕ್ಷಾ ಮೇಲೆ ’ತೆರೆದು ನೋಡು ಕಣ್ಣಿನ ಪೊರೆ, ಕರ್ನಾಟಕದಲ್ಲಿ ದರ್ಶನ್ ದೊರೆ.., ದರ್ಶನ್, ಯಜಮಾನ ಅಂತೆಲ್ಲ ಬರೆಸಿಕೊಂಡಿದ್ದು ಪ್ರೀತಿಯ ದಾಸನ ಬಗ್ಗೆ ತುಂಬು ಅಭಿಮಾನವನ್ನು ಮೆರೆದಿದ್ದಾರೆ. ಒಟ್ಟಿನಲ್ಲಿ ದಾಸನ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿದ್ದಾರೆ. ಹುಟ್ಟುಹಬ್ಬದ ದಿನ ದಾಸ ಹೇಳಿದ ಒಂದು ಮಾತಿಗೆ ಅಭಿಮಾನಿಗಳು ಕೇಕ್ ಹೂ ಹಾರ ತರುವ ಬದಲು ರೇಷನ್ ತಂದಿದ್ದರು.. ಆ ರೇಷನ್ ಅನ್ನು ಅನಾಥಲಾಯಗಳಿಗೆ ಕೊಟ್ಟಿದ್ದರು.
Comments