ಸಿನಿಮಾಗೆ ಎಂಟ್ರಿ ಕೊಟ್ಟ ಕ್ರಿಕೆಟರ್ ಕಪಿಲ್ ದೇವ್ ಪುತ್ರಿ..!!
ಬಣ್ಣದ ಜಗತ್ತೆ ಒಂಥರಾ..ಸಿನಿಮಾ ಸ್ಟಾರ್ ಗಳ ಮಕ್ಕಳು ಸಿನಿಮಾ ಮಾಡೋದು, ಡಾಕ್ಟರ್ಸ್ ಮಕ್ಕಳು ಡಾಕ್ಟರ್ ಆಗೋದು, ಇಂಜಿಯರ್ಸ್ ಮಕ್ಕಳು ಇಂಜಿಯರ್ಸ್ ಆಗೋದು ಕಾಮನ್.. ಆದರೆ ಕಾಲ ಬದಲಾಗಿದೆ.. ಪೋಷಕರು ಹೋದ ಹಾದಿಯಲ್ಲಿಯೇ ಮಕ್ಕಳು ನಡೆಯಬೇಂದಿಲ್ಲ.. ಮಕ್ಕಳಿಗೆ ಯಾವ ಕ್ಷೇತ್ರ ಇಷ್ಟವೋ ಆ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೋತ್ಸಾಹ ನೀಡುತ್ತಾರೆ.
ತಂದೆ ಕ್ರಿಕೆಟ್ ಲೋಕದ ದಂತ ಕಥೆಯಾಗಿದ್ದರೂ ಸಹ ಮಗಳಿಗೆ ಮಾತ್ರ ಬಣ್ಣದ ಲೋಕದ ಮೇಲೆ ಸೆಳೆತ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್ ಬಾಲಿವುಡ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಚಿತ್ರದಲ್ಲಿ ಅಮಿಯಾ ಹೀರೋಯಿನ್ ಆಗದೆ ಸಿನಿಮಾಕ್ಕೆ ಸಹಾಯಕ ನಿರ್ದೇಶಕಿಯಾಗಿ ತಮ್ಮ ಸಿನಿ ಕೆರಿಯರ್ ಶುರು ಮಾಡಿದ್ದಾರೆ.
83 ಎಂಬ ಟೈಟಲ್ಲಿನ ಚಿತ್ರಕ್ಕೆ ಅಮಿಯಾ ಸಹಾಯಕ ನಿರ್ದೇಶಕಿಯಾಗಿದ್ದು, ರಣಬೀರ್ ಸಿಂಗ್ ನಾಯಕನಾಗಿ ಅಭಿನಯಿಸಲಿದ್ದಾರೆ.. ಭಾರತ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಗಳಿಸಿದ ಐತಿಹಾಸಿಕ ಗೆಲುವಿನ ಸಿನಿಮಾ ಇದಾಗಿದೆ. ರಣ್ವೀರ್ ಕಪಿಲ್ ದೇವ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ರಣ್ವೀರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ತರಬೇತಿಯನ್ನು ಪಡೆಯುತ್ತಿದ್ದಾರೆ.
Comments