ಆಲಿಯಾ-ರಣಬೀರ್ ಸೆಕ್ಸ್ ಬಗ್ಗೆ ಸಾಕಷ್ಟು ಮಾತಾಡ್ತಾರೆ..!! ಬೆರಳು ಮಾಡಿ ತೋರಿಸಿದ ಸ್ಟಾರ್ ನಟಿ..!!
ಸ್ಟಾರ್ ನಟ ನಟಿಯರು ಒಬ್ಬರ ವಿರುದ್ದ ಮತ್ತೊಬ್ಬರು, ಮತ್ತೊಬ್ಬರ ವಿರುದ್ದ ಮಗದೊಬ್ಬರು ಮಾತಾನಾಡುವುದು ಕಾಮನ್ ಆಗಿ ಬಿಟ್ಟಿದೆ.. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂಬ ಪರಿಸ್ಥಿತಿ ಬಂದು ಬಿಟ್ಟಿದೆ. ಏಕೆಂದರೆ ಅಪ್ಪಿ ತಪ್ಪಿ ಕಾರ್ಯಕ್ರಮದಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳನ್ನು ಮಾತನಾಡಿಕೊಂಡರೆ ಅಲ್ಲಿಗೆ ಮುಗಿಯಿತು… ಅರೇ ಯಾಕ್ ಈ ಮಾತ್ ಹೇಳ್ತಿದ್ದಾರೆ ಅನ್ಕೊಂಡ್ರ,… ನಿಮಗೆಲ್ಲ ಕಂಗನಾ ರಣಾವತ್ ಗೊತ್ತಿರಲೇ ಬೇಕಲ್ವ.. ಇತ್ತಿಚಿಗೆ ದಿವಂಗತ ಜಯಲಲಿತಾ ಮಾಡುವ ಪಾತ್ರದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಆ ಪಾತ್ರಕ್ಕೆ ಬರೋಬ್ಬರಿ 24 ಕೋಟಿ ಸಂಭಾವನೆ ಪಡೆಯುತ್ತಿದ್ಧಾರೆ ಈ ಸ್ಟಾರ್ ನಟಿ.. ಆದರೆ ವಿಷಯ ಅದಲ್ಲ.. ಬೇರೇನೇ ಇದೆ.. ಮುಂದೆ ಓದಿ.
ಕರಣ್ ಜೋಹರ್ ಅವರ ಶೋ ನಲ್ಲಿ ಮಾತನಾಡಿದ್ದ ಆಲಿಯಾ ಬಟ್ ಮತ್ತು ರಣಬೀರ್ ಕಪೂರ್ ಮೇಲೆ ಕಂಗನಾ ರಣಾವತ್ ಮುನಿಸು ತೋರಿಸಿದ್ದಾರೆ.ತಮ್ಮ ಸೆಕ್ಸ್ ಜೀವನದ ಬಗ್ಗೆ ಇಬ್ಬರು ಚೆಲ್ಲು ಚೆಲ್ಲಾಗಿ ಮಾತನಾಡುತ್ತಿರುತ್ತಾರೆ.. ಆದರೆ ದೇಶದ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದಿದ್ದಾರೆ.ಮಾತನಾಡುವುದು ವೈಯಕ್ತಿಕ ವಿಷಯ, ಇದೇ ದೇಶದ ವಿಚಾರಕ್ಕೆ ಬಂದರೆ..? ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಬೇಕಾದಷ್ಟು ಮಾತನಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಟೋ ಹಂಚಿಕೊಳ್ಳುತ್ತಾರೆ ಎನ್ನುತ್ತಾ ಕರಣ್ ಜೋಹರ್ ಶೋಗೆ ಬೊಟ್ಟು ಮಾಡಿರುವ ಕಂಗನಾ ದೇಶದ ವಿಚಾರದ ಬಗ್ಗೆ ಒಂದು ಮಾತು ಆಡಲ್ಲ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.ಒಟ್ಟಿನಲ್ಲಿ ಯಾವಾಗಲೂ ಸೆಕ್ಸ್ ವಿಚಾರವನ್ನೆ ಮಾತನಾಡುವ ಅವರು ನಮ್ಮ ದೇಶದ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳಲ್ಲಿ ಎಂಬುದು ಕಂಗನಾ ಅಭಿಪ್ರಾಯವಾಗಿದೆ.
Comments