ಕಾರಿನಲ್ಲಿದ್ದ ಸ್ಟಾರ್ ನಟನನ್ನು ನೋಡಿ ಶಾಕ್ ಆದ ಚುನಾವಣಾ ಆಯೋಗ ಸಿಬ್ಬಂದಿ : ಕಾರಣ ಏನ್ ಗೊತ್ತಾ..?

ಲೋಕಸಭೆ ಚುನಾವಣೆ ಅಕ್ರಮವಾಗಿ ನಡೆಯದಂತೆ ತಡೆಗಟ್ಟಲು ಚುನಾವಣಾ ಆಯೋಗ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರನ್ನು ಆಯೋಜಿಸಲಾಗಿದೆ. ಯಾವುದೇ ವಾಹನಗಳನ್ನು ತಪಾಸಣೆ ಬಳಿಕ ಬಿಡುವಂತೆ ಚುನಾವಣೆ ಆಯೋಗ ಸಿಬ್ಬಂಧಿಗಳನ್ನು ನೇಮಕಮಾಡಿದೆ. ಗುರುವಾರ ಗೌರಿ ಬಿದನೂರಿನ ರಾಜ್ಯ ಹೆದ್ದಾರಿಯಲ್ಲಿ ಹೀಗೆ ಪೊಲೀಸರು ತಪಾಸಣೆ ಮಾಡುವ ಸಂದರ್ಭದಲ್ಲಿ ಕಾರೊಂದನ್ನು ಅಡ್ಡಗಟ್ಟಿದ್ದಾರೆ. ಆದರೆ ಪೊಲಿಸರು ಕಾರಿನಲ್ಲಿದ್ದ ಆ ಸ್ಟಾರ್ ನಟನನ್ನು ನೋಡಿ ಕ್ಷಣ ಅವಕ್ಕಾದ್ರಂತೆ. ಆ ನಟ ಯಾರು ಗೊತ್ತಾ...?
ಪೊಲೀಸರು ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಲು ಮುಂದಾದಾಗ ಕಾರಿನಲ್ಲಿದ್ದ ಆ ನಟ ಕೆಳಗಿಳಿದಿದ್ದಾರೆ. ತಾವೇ ಮೊದಲು ಕೆಳಗಿಳಿದು ತಪಾಸಣೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಅಂದಹಾಗೇ ಆ ಸ್ಟಾರ್ ನಟ ಬೇರೆ ಯಾರು ಅಲ್ಲ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವರಾಜ್ ಕುಮಾರ್ ಅವರು ಶೂಟಿಂಗ್ ನಿಮಿತ್ತ ಗೌರಿ ಬಿದನೂರಿನ ಮಾರ್ಗವಾಗಿ ಹೋಗುತ್ತಿದ್ದರೆನ್ನಲಾಗಿದೆ.
ಅಲ್ಲಿಯೇ ಚೆಕ್ ಪೋಸ್ಟ್ ನಿರ್ಮಿಸಿದ ಆಯೋಗ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಶಿವರಾಜ್ ಕುಮಾರ್ ಕಂಡೊಡನೆಯೇ ಸಿಬ್ಬಂದಿಯವರು ಕೂಡ ಅವರನ್ನು ಎಲ್ಲರಂತೇ ನಡೆಸಿಕೊಂಡಿದ್ದಾರೆ. ಶಿವಣ್ಣನು ಕೂಡ ಜನ ಸಾಮಾನ್ಯರಂತೇ ವರ್ತಿಸಿದ್ದಾರೆ. ಸಿಬ್ಬಂದಿಯವರು ಶಿವಣ್ಣನ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಪಿ. ವಾಸು ನಿರ್ದೇಶನದ ದ್ವಾರಕೀಶ್ ನಿರ್ಮಾಣದ ಆನಂದ್ ಸಿನಿಮಾ ಶೂಟಿಂಗ್ ನಿಮಿತ್ತ ಹೋಗುತ್ತಿದ್ದರೆನ್ನಲಾಗಿದೆ.
Comments