ಜೂನಿಯರ್ ಶಿವಣ್ಣನನ್ನು ಕರೆ ತಂದ ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಅಸಮಧಾನ..?!!!

ಕನ್ನಡ ಕೋಗಿಲೆ ಸೀಸನ್-2 ಶುರುವಾಗಿದೆ. ಮೊದಲ ಸೀಸನ್ ನಲ್ಲಿ ನಿರೂಪಕಿಯಾಗಿದ್ದ ಅನುಪಮಾ ಗೌಡ ಜಾಗಕ್ಕೆ ಇದೀಗ ಆರ್ ಜೆ ಸಿರಿ ಬಂದಿದ್ದಾರೆ. ಈ ಬಾರಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜೂನಿಯರ್ ಶಿವರಾಜ್ ಕುಮಾರ್ ಎಂದು ಕಲರ್ಸ್ ವಾಹಿನಿ ಬಿಂಬಿಸಿದೆ. ಆದರೆ ಈ ಬಾರಿಯ ಜೂನಿಯರ್ ಶಿವರಾಜ್ ಕುಮಾರ್ ಅದ್ಯಾಕೋ ಅಭಿಮಾನಿಗಳಿಗೆ ಹಿಡಿಸಲಿಲ್ಲ. ಜೂನಿಯರ್ ಶಿವಣ್ಣನ ವಿರುದ್ಧ ತಿರುಗಿ ಬಿದ್ದಿದ್ದಾರೆ ಕನ್ನಡ ಕೋಗಿಲೆ ಅಭಿಮಾನಿಗಳು.
ಇಸ್ಮಾಯಿಲ್ ಎಂಬ ಬೆಳಗಾವಿಯ ಪ್ರತಿಭೆ ಜೂನಿಯರ್ ಶಿವರಾಜ್ ಕುಮಾರ್ ಆಗಿದ್ದಾರೆ. ಈ ಪ್ರತಿಭೆಗೆ ಕನ್ನಡ ಕೋಗಿಲೆ ರಿಯಾಲಿಟಿ ಶೋ ಅವಕಾಶ ನೀಡಿದೆ. ವಾಹಿನಿಯ ಈ ನಡವಳಿಕೆಗೆ ವೀಕ್ಷಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.ಅಂದಹಾಗೇ ಕಲರ್ಸ್ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಜೂನಿಯರ್ ಶಿವರಾಜ್ ಕುಮಾರ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳ ಬಳಗದಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಬಂದಿರುವ ಕಮೆಂಟ್ಸ್ ಗಳಿಂದಲೇ ತಿಳಿಯುತ್ತಿದೆ. ವಾಹಿನಿಯವರು ಕರೆ ತಂದಿರುವ ಜೂನಿಯರ್ ಶಿವರಾಜ್ ಕುಮಾರ್ ರನ್ನ ಅಭಿಮಾನಿಗಳು ಜೂನಿಯರ್ ಶಿವಣ್ಣ ಎಂದು ಒಪ್ಪಿಕೊಳ್ಳುತ್ತಿಲ್ಲ. ಬಂದಿರುವ ಕಮೆಂಟ್ ಗಳಿಂದಲೇ ತಿಳಿಯುತ್ತದೆ ವೀಕ್ಷಕರ ಅಸಮಾಧಾನ ಎಷ್ಟರ ಮಟ್ಟಿಗೆ ಏರಿದೆ ಎಂದು. ಅಂದಹಾಗೇ ಕೆಲ ವೀಕ್ಷಕರನ್ನು ಬಿಟ್ಟರೆ ನೂರಕ್ಕೆ 90 ರಷ್ಟು ಜನ ವೀಕ್ಷಕರು ಜೂನಿಯರ್ ಶಿವಣ್ಣನ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇವರನ್ನು ಕರೆ ತಂದಿರುವ ವಾಹಿನಿ ವಿರುದ್ಧ ಕೋಪ ಗೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸ್ಟೈಲ್, ನಟನೆ, ಲುಕ್ ಯಾವುದು ಶಿವಣ್ಣ ನ ರೀತಿ ಇಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯ. ವಾಹಿನಿಯವರು ಸುಖಾಸುಮ್ಮನೇ ಅವರಿಗೆ ಬಿಲ್ಡಪ್ ಕೊಡುತ್ತಿದೆ ಎಂದು ಆಕ್ರೋಶಿತರಾಗಿ ಮಾತನಾಡಿದ್ದಾರೆ.
Comments