ಸ್ನೇಹಿತನ ಜೊತೆ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳಾ ಸ್ಟಾರ್ ನಟನ ಪುತ್ರಿ…..?!!!
ಇತ್ತೀಚೆಗೆ ಸ್ಟಾರ್ ಗಳಿಗಿಂತ ಅವರ ಮಕ್ಕಳೇ ಹೆಚ್ಚು ಸುದ್ದಿಯಾಗುತ್ತಾರೆ. ಅದರಲ್ಲೂ ಬಿ ಟೌನ್ ನಲ್ಲಂತೂ ಇತ್ತೀಚೆಗೆ ಬಿಗ್ ಸ್ಟಾರ್ ಮಕ್ಕಳೇ ಗಾಸಿಪ್ ಗೂ ಒಳಗಾಗುತ್ತಿರುವುದು. ಅಂದಹಾಗೇ ಕಿಂಗ್ ಖಾನ್ ಶಾರುಖ್ ಪುತ್ರಿಯ ಬಿಕಿನಿ ಫೋಟೋ ವೈರಲ್ ಆಗುತ್ತಿದ್ದಂತೇ ಯುವನೊಟ್ಟಿಗೆ ಡೇಟಿಂಗ್ ಮಾಡ್ತಾಯಿದ್ದಾಳೆ ಎಂಬ ಸುದ್ದಿಯೂ ಹಬ್ಬಿತ್ತು. ಇದೀಗ ಅದೇ ಬಿ ಟೌನ್ ನ ಸೆಲೆಬ್ರಿಟಿ ಮಿ. ಪರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಮಗಳು, ಯುವಕನೊಟ್ಟಿಗೆ ಇರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳಿಂದ ಅಮಿರ್ ಖಾನ್ ಮಗಳು ಇರಾ ಲವ್ ನಲ್ಲಿ ಬಿದ್ದಿದ್ದಾಳಾ..? ಆಕೆ, ಆ ಯುವಕೊಂದಿಗೆ ಡೇಟಿಂಗ್ ಮಾಡ್ತಾ ಇದ್ದಾಳೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ.
ಅದಕ್ಕೆ ಇಂಬು ಕೊಡುವಂತೆ ಇರಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆ ಯುವಕ ತನ್ನ ಹಣೆಗೆ ಮುತ್ತಿಕ್ಕುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವುದು.ಆ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,ತಮ್ಮ ಸ್ನೇಹಿತ ಮಿಶಾಲ್ ಜೊತೆಗೆ ಇರುವ ಫೋಟೋಗಳನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದನ್ನು ಗೆಳೆಯ ಮಿಶಾಲ್‍ನಿಗೂ ಟ್ಯಾಗ್ ಮಾಡಿದ್ದಾಳೆ.ಅಂದಹಾಗೇ ಮಿಶಾಲ್ ಒಬ್ಬ, ನಟ, ನಿರ್ಮಾಪಕ ಕಂಪೋಸರ್, ಮಿಶಾಲ್ ಕೂಡ ಇರಾ ಜೊತೆಯಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ ಇರಾ ಜೊತೆ ಇರುವ ಒಂದು ಪೋಟೊಗೆ ಮಿಶಾಲ್ ‘ಚಾರ್ಮರ್’ ಎಂದು ಬರೆದಿದ್ದಾರೆ. ಅಮೀರ್ ಖಾನ್ ಅ ವರ ಮೊದಲ ಪತ್ನಿ ರೀನಾ ದತ್ತ ಅವರ ಎಡನೇ ಮಗಳು ಇರಾ.ಇನ್ನು ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಡದ ಇರಾ ಬಗ್ಗೆ ಅಮೀರ್ ಖಾನ್ ಅವರು ಕಾಫಿ ವಿತ್ ಕರಣ್ ಜೋಹರ್ ರಿಯಾಲಿಟಿ ಶೋ ನಲ್ಲಿ ಮಗಳ ಸಿನಿಮಾ ಎಂಟ್ರಿ ಬಗ್ಗೆ ಸುಳಿವು ನೀಡಿದ್ದರು.
ಅಂದಹಾಗೇ ಈ ಫೋಟೋಗಳನ್ನ ನೋಡ್ತಾ ಇದ್ರೆ ಇಬ್ಬರ ಮಧ್ಯೆ ಸ್ನೇಹಕ್ಕಿಂತ ಬೇರೆಯೇ ಸಂಬಂಧ ಇದೆ ಎಂಬುದು ಕೆಲವರ ಅಭಿಪ್ರಾಯ. ಸಿನಿಮಾ ಲ್ಯಾಂಡ್ ಗೂ ಬರುವ ಮೊದಲೇ ಇರಾ ಗಾಸಿಪ್ ಗೆ ಒಳಗಾಗಿದ್ದಾರೆ.
Comments