‘ನನ್ನ ಮೇಲೆ ಆರೋಪ ಮಾಡಿದವರಿಗೆ ನಾನ್ ಹೇಳೋದ್ ಒಂದೇ ಮಾತು’ : ದಚ್ಚು ಹೇಳಿದ್ದು ಏನ್ ಗೊತ್ತಾ..?
ಸರ್, ನಾನು ಏನು ಅಂತಾ ಕರ್ನಾಟಕದ ಜನಕ್ಕೆ ಗೊತ್ತು. ಉಪ್ಪು ತಿಂದ ಮನೆಗೆ ದ್ರೋಹ ಬಗೆಯವರಲ್ಲ ಸಾರ್ ನಾವು. ಅಪ್ಪಾಜಿ ಇದ್ದಾಗ್ಲೂ ಅವರ್ ಜೊತೆನೇ. ಅಪ್ಪಾಜಿ ಹೋಗಿದ್ರೂ ನಾವ್ ಅವರ್ ಜೊತೆನೇ. ಏನ್ ಸರ್ ನಮ್ಮ ಮೇಲೆ ಆರೋಪ ಮಾಡಿದ್ದು. ಒಂದಾ, ಎರಡಾ..ನಮಗೂ ಮನಸ್ಸಿದೆ. ಆದ್ರೂ ಒಂದ್ ಮಾತ್ ಹೇಳ್ತೀನಿ.ನಾನ್ ಬೇಸರಿಸಿಕೊಳ್ಳಲ್ಲ ಸರ್. ಸುಮಲತಾ ಅಮ್ಮ’ನ ಪರ ಪ್ರಚಾರಕ್ಕೆ ಬಂದಿದ್ದೀವಿ ಅಂತಾ ಬಾಯಿಗೆ ಬಮದ ಹಾಗೇ ಮಾತಡ್ತಾರೆ. ಅವರ ಸಂಸ್ಕಾರ ಏನ್ ಅಂತಾ ಜನನೇ ತೀರ್ಮಾನ ಮಾಡ್ತಾರೆ ಬಿಡಿ ಸರ್ ಎಂದೂ ಬಹಳ ತಾಳ್ಮೆಯಿಂದಲೇ ಮಾತನಾಡಿದ್ದಾರೆ ನಟ ದರ್ಶನ್. ಭಿಆದ್ರೂ ನನ್ ಅಮಾನಿಗಳಿಗಾಗಿ ನಾನು ಒಂದ್ ಮಾತ್ ಹೇಳಲೇ ಬೇಕು..
ಹೀಗಂತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿನಯತೆಯಿಂದ ತಮ್ಮ ಅಭಿಮಾನಿಗಳಿಗಾಗಿ ಪತ್ರ ಬರೆದಿದ್ದಾರೆ.ಈ ಮೊದಲೇ ನಾನು ಹೇಳಿದ್ದೆ. ಚುನಾಔನೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸಾಮಾನ್ಯ. ಯಾವುದಕ್ಕೂ ನಾವು ಕಿವಿ ಕೊಡಬಾರದು. ಶಾಂತಿ ಕಾಪಾಡಿಕೊಂಡು ಆರಾಮಾಗಿರಿ ಎಂದು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ದಚ್ಚು ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ. ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ, ವಿಡಿಯೋ ಗಳಾಗಲಿ ಮಾಡುವ ಗೋಜಿಗೆ ಹೋಗಬೇಡಿ. ಅವನ್ನೆಲ್ಲಾ ಕಂಡು ಕಾಣದಂತೆ ಸುಮ್ಮನಿದ್ದು ಬಿಡಿ. ಅವೆಲ್ಲದಕ್ಕೂ ಕಿವಿ ಕೊಡದೆ ಶಾಂತಿ ಕಾಪಾಡಿಕೊಂಡು ಆರಾಮಾಗಿರಬೇಕಾಗಿ ನಿಮ್ಮ ನಲ್ಮೆಯ ದಾಸನ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಅಂತಾ ತಿಳಿಸಿದ್ದಾರೆ.
Comments