ಚಿತ್ರೀಕರಣದ ವೇಳೆ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತ ನಟ ವಿಶಾಲ್’ಗೆ ಗಂಭೀರ ಗಾಯ…!!!

ರಾಕಿಂಗ್ ಸ್ಟಾರ್ ಯಶ್ ಸ್ನೇಹಿತ ಕಾಲಿವುಡ್’’ನ ಸೂಪರ್ ಸ್ಟಾರ್ ನಟ ವಿಶಾಲ್ ಚಿತ್ರೀಕರಣ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಕೈ ಮತ್ತು ಕಾಲಿಗೆ ಗಾಯವಾಗಿದ್ದು ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರಂತೆ. ಇತ್ತೀಚಿಗೆ ಅಯೋಗ್ಯ ಚಿತ್ರದ ಚಿತ್ರೀಕರಣ ವೇಳೆಯು ವಿಶಾಲ್ ಗಾಯಗೊಂಡಿದ್ದರು. ಟರ್ಕಿಯಲ್ಲಿ ಸಾಹಸ ದೃಶ್ಯಗಳ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೂ ಮುನ್ನ ಪೂರ್ವ ತಯಾರಿ ಮಾಡಿಕೊಂಡಿದ್ದರೂ ಅಚಾನಕ್ ಆಗಿ ಕಾಲಿನ ಮೂಳೆಗೆ ಬಲವಾಗಿ ಪೆಟ್ಟಾಗಿದೆ.
ಎಟಿವಿ ಬೈಕ್ ಓಡಿಸುವಾಗ ಗಾಡಿ ಬ್ಯಾಲೆನ್ಸ್ ತಪ್ಪಿ ಬಿದ್ದು, ಅವರ ಎಡಗಾಲಿಗೆ ತೀವ್ರವಾದ ಗಾಯವಾಗಿದೆ. ವಿಶಾಲ್ ಅವರನ್ನ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶಾಲ್ ಕೆಲ ದಿನಗಳ ಕಾಲ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಅಂದಹಾಗೇ ನಟ ವಿಶಾಲ್ ಅವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಟರು ಸ್ನೇಹಿತರಿದ್ದಾರೆ.
ವಿಶಾಲ್ ಅವರು ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆತ್ಮೀಯ ಸ್ನೇಹಿತನಾಗಿರುವ ವಿಶಾಲ್ ಅವರು ಕೆಜಿಎಫ್ ಸಿನಿಮಾ ಪ್ರಮೋಷನ್ ಗೆ ಬೆಂಗಳೂರಿಗೆ ಬಂದಿದ್ದರು. ಅಷ್ಟೇ ಅಲ್ಲಾ ತಮಿಳಿನಲ್ಲೂ ಕೆಜಿಎಫ್ ವಿತರಣ ಹಕ್ಕನ್ನು ಪಡೆದಿದ್ದರಂತೆ. ತಾನು ಚಿಕ್ಕವನಿದ್ದಾಗ ಬೆಂಗಳೂರಿನಲ್ಲೇ ಹೆಚ್ಚು ದಿನಗಳನ್ನು ಕಳೆದಿದ್ದರಿಂದ ಬೆಂಗಳೂರು ನನಗೆ ಹೊಸದೇನಲ್ಲಾ ಎನ್ನುತ್ತಾರೆ ವಿಶಾಲ್. ನನಗೆ ಬೆಂಗಳೂರು ಇಷ್ವವಾದ ಊರು. ಬೆಂಗಳೂರಿಗೆ ಆಗಾಗ್ಗ ನಾನು ಬಂದು ಹೋಗುತ್ತಿರುತ್ತೇನೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
Comments