ತನಗಿಂತ 12 ವರ್ಷದ ಹಿರಿಯ ನಟನನ್ನು ಮದುವೆಯಾಗುತ್ತಿರುವ ಸ್ಟಾರ್ ನಟಿ..!!
ಪ್ರೀತಿಗೆ ಜಾತಿ ಅಂತಸ್ತು ಐಶ್ವರ್ಯ ವಯಸ್ಸು ಯಾವುದು ಮ್ಯಾಟರ್ ಅಲ್ವೆ ಅಲ್ಲ…ಹೃದಯದಲ್ಲಿ ಒಮ್ಮೆ ಪ್ರೀತಿ ಹುಟ್ಟಿದರೇ ಮುಗೀತು.. ಯಾವುದನ್ನು ನೋಡುವುದಿಲ್ಲ.. ಮತ್ತು ಕೇಳುವುದಿಲ್ಲ… ಬಣ್ಣದ ಲೋಕ ಅಂದ ಮೇಲೆ ಅಲ್ಲಿ ಪ್ರೀತಿ ಪ್ರೇಮ ಡೇಟಿಂಗ್ ಯಾವುದಕ್ಕೂ ಕೊರತೆ ಇರುವುದಿಲ್ಲ… ಅದರಲ್ಲೂ ಬಾಲಿವುಡ್ ಅಂಗಳದಲ್ಲಿ ಇದೆಲ್ಲಾ ಕಾಮನ್ ಆಗಿ ಬಿಟ್ಟಿರುತ್ತದೆ.. ಸಿನಿಮಾ ಮಾಡುತ್ತಲೆ ಕೆಲವೊಮ್ಮೆ ಸಹ ನಟ ನಟಿಯರ ಮೇಲೆ ಕ್ರಶ್ ಆಗೋದು ಕಾಮನ್… ಆದರೆ ಕೆಲವರಿಗೆ ವಯಸ್ಸಿನ ಅಂತರ ತಿಳಿಯುವುದೇ ಇಲ್ಲ.. ನೋಡು ನೋಡುತ್ತಲೇ ಕ್ರಶ್ ಆಗಿಬಿಡುತ್ತದೆ.. ಇದೀಗ ಬಾಲಿವುಡ್ ಈ ಜೋಡಿ ಕೂಡ ಮಾಡಿರೋದು ಅದೇ.. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ತಮಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನ್ಸ್ ಜೊತೆ ಮದುವೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.
ಇಷ್ಟು ದಿನ ಡೇಟಿಂಗ್’ನಲ್ಲಿದ್ದ ಈ ಜೋಡಿ ಇದೀಗ ಮದುವೆ ಆಗಲೂ ಡಿಸೈಡ್ ಮಾಡಿದೆಯಂತೆ.. ಅರೇ ಹೌದಾ ಯಾರಪ್ಪ ಆ ಜೋಡಿ ಅಂತೀರಾ.. ಈಗಾಗಲೇ ವಿಚ್ಛೇದನ ನೀಡಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ. ಮಲೈಕಾ ಅರೋರ ಮತ್ತು ನಟ ಅರ್ಜುನ್ ಕಪೂರ್ ಏಪ್ರಿಲ್ 19 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡೇಟಿಂಗ್ ನಲ್ಲಿದ್ದ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತಲುಪಿಸಲು ತೀರ್ಮಾನಿಸಿದೆ. ಕ್ರೈಸ್ತ ಸಂಪ್ರದಾಯದಂತೆ ಮಲೈಕಾ ಮತ್ತು ಅರ್ಜುನ್ ಕಪೂರ್ ಮದುವೆಯಾಗಲಿದ್ದಾರೆ.
ಮದುವೆಯ ಸ್ಥಳ ಮತ್ತು ಮದುವೆಯ ಕುರಿತಾದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ. ಮದುವೆಗೆ ಕುಟುಂಬದವರು, ಸ್ನೇಹಿತರು, ಆತ್ಮೀಯರಿಗಷ್ಟೇ ಆಹ್ವಾನ ನೀಡಲಿದ್ದಾರೆ. ಈಗಾಗಲೇ ಮದುವೆ ಸಿದ್ಧತೆಗಳು ಆರಂಭವಾಗಿವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಹಿರಿಯ ನಟಿ ಮತ್ತು ಯುವ ನಟನ ಮದುವೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 45 ವರ್ಷದ ಮಲೈಕಾ ತನಗಿಂತ 12 ವರ್ಷ ಚಿಕ್ಕ ವಯಸ್ಸಿನ ನಟನನ್ನು ಮದುವೆಯಾಗುತ್ತಿರುವುದು ಟ್ರೋಲಿಗರ ಬಾಯಿಗೆ ಆಹಾರವಾಗಿದೆ ಎನ್ನಬಹುದು.
Comments