ನ್ಯಾಯಾಲಯದಿಂದ ಕಿಚ್ಚ ಸುದೀಪ್ ಗೆ ಸಮನ್ಸ್ ಜಾರಿ..!! ಅರೆಸ್ಟ್ ಆಗ್ತಾರ ‘ಹೆಬ್ಬುಲಿ’

27 Mar 2019 2:29 PM | Entertainment
493 Report

ಇದೀಗ ನಟ ನಿರ್ದೇಶಕ ಕಿಚ್ಚ ಸುದೀಪ್ ಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.. ಧಾರಾವಾಹಿ ಶೂಟಿಂಗ್ ಗೆ  ಬಾಡಿಗೆಗೆ ಪಡೆದಂತಹ ಬಾಡಿಗೆ ಮನೆ ಹಣದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಅಭಿನಯ ಚರ್ಕವರ್ತಿ ಸುದೀಪ್ ವಿರುದ್ಧ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ. ವಾರಸ್ದಾರಾ ಧಾರಾವಾಹಿಗೆ ಮನೆ ಪಡೆದು ಬಾಡಿಗೆ ನೀಡದ ಪ್ರಕರಣ ಸಂಬಂಧ ಚಿಕ್ಕಮಗಳೂರು JMFC ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ಕೋರ್ಟ್ ಗೆ ಗೈರಾದ ಹಿನ್ನಲೆಯಲ್ಲಿ ಸಮನ್ಸ್ ಜಾರಿ ಮಾಡಿದ್ದಾರೆ.

ದೀಪಕ್ ಮಯೂರ್ ಎಂಬುವವರು ನೀಡಿದ ದೂರಿನ ಹಿನ್ನೆಲಯಲ್ಲಿ ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ..ನಟ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು..

ಈ ಧಾರವಾಹಿಯ ಚಿತ್ರಿಕರಣಕ್ಕೆ ಸಂಬಂಧ ಪಟ್ಟಂತೆ ದೀಪಕ್ ಮಯೂರ್ ಎನ್ನುವವರು ಮನೆ ಮತ್ತು ತೋಟವನ್ನು ಬಾಡಿಗೆ ನೀಡಿದ್ದರು. ಚಿತ್ರಿಕರಣದ ಸಮಯದಲ್ಲಿ ತೋಟ ಹಾಗೂ ಮನೆ ನಾಶ ಮಾಡಿದ್ದಾರೆ. ಅಲ್ಲದೇ ಬಾಡಿಗೆ ಹಣ ನೀಡಿಲ್ಲ ಎಂದು ದೀಪಕ್  ಈಗಾಗಲೇ ದೂರು ನೀಡಿದ್ದರು. ಈ ಪ್ರಕರಣ ಸಂಬಂಧವಾಗಿ ನಡೆದ ವಿಚಾರಣೆಗೆ ಚಿಕ್ಕಮಗಳೂರು JMFC ನ್ಯಾಯಾಲಯಕ್ಕೆ ನಟ ಸುದೀಪ್ ಗೈರಾಗಿದ್ದು, ಈ ನಿಟ್ಟಿನಲ್ಲಿ ಸಮನ್ಸ್ ನೀಡಲಾಗಿದೆ. ಅಲ್ಲದೇ ಇದೀಗ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ಸುದೀಪ್ ಗೆ ಕೋರ್ಟ್ ಸಮನ್ಸ್ ನಲ್ಲಿ ತಿಳಿಸಲಾಗಿದೆ.

Edited By

Manjula M

Reported By

Manjula M

Comments